UPI: ಈಗ UPI ಮೂಲಕ ಪಡೆದುಕೊಳ್ಳಿ ವಯಕ್ತಿಕ ಸಾಲ, UPI ಬಳಸುವವರಿಗೆ ಹೊಸ ಯೋಜನೆ ಜಾರಿಗೆ.
ಈಗ ನಿಮ್ಮ ಖಾತೆಯಲ್ಲಿ ಹಣ ಇಲ್ಲದಿದ್ದರೂ ಸಹ UPI ಮೂಲಕ ಹಣ ಪಾವತಿಸಬಹುದು.
UPI Loan Facility: ಇತ್ತೀಚಿಗೆ ಡಿಜಿಟಲೀಕರಣದ ಕ್ರೇಜ್ ವೇಗವಾಗಿ ಹೆಚ್ಚುತ್ತಿದೆ. UPI ಗ್ರಾಹಕರನ್ನು ಸೆಳೆಯುವ ಸಲುವಾಗಿ ತನ್ನ ಸೇವೆಯನ್ನು ವಿಸ್ತರಿಸುತ್ತಿದೆ. ಇದೀಗ ಹಣದ ವಹಿವಾಟು ಕೂಡ ಡಿಜಿಟಲ್ ಆಗುವ ಕಾಲ ಬಂದಿದೆ. ಇದರಿಂದ ಹೆಚ್ಚಿನ ಜನರು ನಗದು ಸಾಗಿಸುದನ್ನು ನಿಲ್ಲಿಸಿದ್ದಾರೆ. ಈಗ ನಿಮ್ಮ ಖಾತೆಯಲ್ಲಿ ಹಣ ಇಲ್ಲದಿದ್ದರೂ ಸಹ UPI ಮೂಲಕ ಹಣ ಪಾವತಿಸಬಹುದು.
RBI ಮಹತ್ವದ ನಿರ್ಧಾರ
ಯುಪಿಐ ವ್ಯವಸ್ಥೆಯನ್ನು ವಿಸ್ತರಿಸುವ ಉದ್ದೇಶದಿಂದ RBI ಈ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. RBI ಇದೀಗ UPI ಬಳಕೆದಾರರಿಗೆ ಸಾಲ ನೀಡುವ ಸೌಲಭ್ಯವನ್ನು ಘೋಷಣೆ ಮಾಡಿದೆ. RBI ನ ಈ ನಡೆಯಿಂದ UPI ಇನ್ನಷ್ಟು ಜನಪ್ರಿಯವಾಗಲಿದೆ. UPI ಸಾಲವನ್ನು ಒದಗಿಸುವಂತೆ RBI ಎಲ್ಲಾ ಬ್ಯಾಂಕ್ ಗಳಿಗೆ ಸೂಚನೆಯನ್ನು ನೀಡಿದೆ. ಈಗ ನೀವು ನಿಮ್ಮ ಖಾತೆಯಲ್ಲಿ ಹಣವಿಲ್ಲದಿದ್ದರೂ UPI ಪಾವತಿಗಳನ್ನು ಮಾಡಬಹುದು.
ಪ್ರಸ್ತುತ ಉಳಿತಾಯ ಖಾತೆ, ಓವರ್ ಡ್ರಾಪ್ ಖಾತೆ, ಪ್ರೀಪೈಡ್ ವಾಲೆಟ್ ಮತ್ತು ಕ್ರೆಡಿಟ್ ಕಾರ್ಡ್ ಅನ್ನು UPI ನಲ್ಲಿ ಸೇರಿಸಬಹುದು ಎಂದು RBI ತನ್ನ ಹೇಳಿಕೆಯಲ್ಲಿ ತಿಳಿಸಿದೆ. ವೈಯಕ್ತಿಕ ಗ್ರಾಹಕರು ಪೂರ್ವಾನುಮತಿಯೊಂದಿದೆ ಶೆಡ್ಯೂಲ್ಡ್ ವಾಣಿಜ್ಯ ಬ್ಯಾಂಕ್ ಗಳಿಂದ ವ್ಯಕ್ತಿಗಳಿಗೆ ನೀಡಲಾದ ಪೂರ್ವ ಮಂಜೂರಾದ ಸಾಲಗಳ ಮೂಲಕ ಪಾವತಿಗಳನ್ನು ಮಾಡಬಹುದು ಎಂದು RBI ತಿಳಿಸಿದೆ. RBI ನ ಈ ನಿರ್ಧಾರ ದೊಡ್ಡ ಹೆಜ್ಜೆಗಿಂತ ಕಡಿಮೆಯಿಲ್ಲ.
UPI ಮೂಲಕ ವಹಿವಾಟುಗಳಲ್ಲಿ ಹೆಚ್ಚಳ
UPI ಮೂಲಕ ಮಾಡುವ ಪಾವತಿಗಳೂ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ವರದಿಗಳ ಪ್ರಕಾರ UPI ಆಗಸ್ಟ್ ಮೊದಲ ಬಾರಿಗೆ ಒಂದು ತಿಂಗಳಲ್ಲಿ 10 ಶತಕೋಟಿ ವಹಿವಾಟುಗಳನ್ನು ದಾಟಿದೆ. ಆಗಸ್ಟ್ 30 ರ ಹೊತ್ತಿಗೆ UPI 10 .24 ಬಿಲಿಯನ್ ವಹಿವಾಟುಗಳನ್ನು ವರದಿಮಾಡಿದೆ.