Whatsapp: ಮೊಬೈಲ್ ಸಂಖ್ಯೆ ಬಳಸದೆ ವಾಟ್ಸಪ್ ಬಳಸುವುದು ಹೇಗೆ, ವಾಟ್ಸಾಪ್ ಬಳಸುವವರಿಗೆ ಹೊಸ ಅಪ್ಡೇಟ್.
Whatssapp ಅನ್ನು ಮೊಬೈಲ್ ಸಂಖ್ಯೆ ಉಪಯೋಗಿಸದೆ ಬಳಸುವ ಹೊಸ ವಿಧಾನ
Use Whatsapp Without A Phone Number: ಭಾರತದಲ್ಲೇ ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ಮೆಟಾ ಒಡೆತನದ ಈ ಪ್ರಸಿದ್ಧ ಮೆಸೇಜಿಂಗ್ ಆಯಪ್ ಅನ್ನು ಕಿರಿಯರಿಂದ ಹಿಡಿದು ಹಿರಿಯರ ವರೆಗೆ ಉಪಯೋಗಿಸುತ್ತಿದ್ದಾರೆ. WhatsApp ಇಂದು ವಿಶ್ವದ ನಂಬರ್ ಒನ್ ಮೆಸೇಜಿಂಗ್ ಅಪ್ಲಿಕೇಷನ್ ಆಗಿಬಿಟ್ಟಿದೆ.
ಕಂಪನಿ ಕೂಡ ತನ್ನ ಬಳಕೆದಾರರನ್ನು ನಿರಾಸೆ ಮಾಡದೆ ತಿಂಗಳಿಗೆ ಒಂದೊಂದು ಹೊಸ ಹೊಸ ಫೀಚರ್ ಗಳನ್ನು ಪರಿಚಯಿಸುತ್ತಿದೆ. ಚಾಟ್ ಮಾಡಲು, ಫೋಟೋ, ವಿಡಿಯೋ ಕಳುಹಿಸಲು ಮಾತ್ರವಲ್ಲದೆ ಈಗ ವಾಟ್ಸ್‌ಆಯಪ್ ನಲ್ಲಿ ಉಚಿತವಾಗಿ ಕರೆ ಮಾಡಲು ಕೂಡ ಹೆಚ್ಚಿನವರರು ಬಳಕೆ ಮಾಡುತ್ತಾರೆ.

ಮೊಬೈಲ್ ನಂಬರ್ ಬಳಸದೆ Whatsapp ಖಾತೆ ತೆರೆಯಿರಿ
ಸಾಮಾನ್ಯವಾಗಿ Whatsapp ಖಾತೆ ತೆರೆಯಬೇಕಾದರೆ ಮೊಬೈಲ್ ನಂಬರ್ ಬೇಕು. ಇದು ಕಡ್ಡಾಯ. ಇಲ್ಲವಾದಲ್ಲಿ ಅಕೌಂಟ್ ಕ್ರಿಯೆಟ್ ಆಗುವುದಿಲ್ಲ. ಆದರೆ, ಮೊಬೈಲ್ ನಂಬರ್ ಇಲ್ಲದೆಯೂ Whatsapp ಉಪಯೋಗಿಸುವ ಟ್ರಿಕ್ ಒಂದಿದೆ ಎಂದರೆ ನಂಬುತ್ತೀರಾ?.ಯಾವುದೇ ವಾಟ್ಸ್‌ಆಯಪ್ ಖಾತೆಯನ್ನು ತೆರೆಯಬೇಕಾದರೆ ಫೋನ್ ನಂಬರ್ ಬೇಕೇ ಬೇಕು. ಆದರೆ, ಅದು ನೀವು ಉಪಯೋಗಿಸುತ್ತಿರುವ ಮೊಬೈಲ್ ನಂಬರ್ ಆಗಿರಬೇಕು ಎಂದಿಲ್ಲ.

ಸ್ಥಿರ ದೂರವಾಣಿ ಸಂಖ್ಯೆಗಳೊಂದಿಗೆ Whatsapp ಅಕೌಂಟ್ ತೆರೆಯಿರಿ
Whatsapp ಕೆಲ ಜನರು ನಿಮಗೆ ತೊಂದರೆ ಕೊಡುತ್ತಿದ್ದರೆ ನಿಮ್ಮ ಹಳೆಯ ಸಂಖ್ಯೆಯನ್ನು ತೆಗೆದುಹಾಕಿ. ಯಾಕೆಂದರೆ ನಿಮ್ಮ ಮೊಬೈಲ್ ನಂಬರ್ ಅನ್ನು ಹೈಡ್ ಮಾಡುವ ಯಾವುದೇ ಆಯ್ಕೆಯನ್ನು Whatsapp ನೀಡಿಲ್ಲ. ಹೀಗಿರುವಾಗ ನೀವು ನಿಮ್ಮ ಮೊಬೈಲ್ ನಂಬರ್ ನೀಡದೆ Whatsapp ಖಾತೆ ತೆರೆಯಲು ನಿಮ್ಮ ಲ್ಯಾಂಡ್‌ಲೈನ್ ನಂಬರ್ ನೀಡಬಹುದು ನೀವು ಸ್ಥಿರ ದೂರವಾಣಿ ಸಂಖ್ಯೆಗಳೊಂದಿಗೆ Whatsapp Account ತೆರೆಯುವ ಅವಕಾಶವಿದೆ.