Vatal Nagaraj: ರಜನಿಕಾಂತ್ ಗೆ ಖಡಕ್ ವಾರ್ನಿಂಗ್ ಕೊಟ್ಟ ವಾಟಾಳ್ ನಾಗರಾಜ್, ಅಷ್ಟಕ್ಕೂ ಆಗಿದ್ದೇನು…
ಹೋರಾಟಗಾರ ವಾಟಾಳ್ ನಾಗರಾಜ್ ರವರಿಂದ ನಟ ರಜನೀಕಾಂತ್ ಗೆ ವಾರ್ನಿಂಗ್
Vatal Nagaraj warned Rajinikanth: ಕರ್ನಾಟಕದಲ್ಲಿ ಕಾವೇರಿ ಕಿಚ್ಚು ಜೋರಾಗಿದ್ದು. ಕಾವೇರಿ (Cauvery) ನಮ್ಮದು ಎಂದು ಬೆಂಗಳೂರು ಬಂದ್ (Bangalore Bandh) ನಡೆಸಲಾಗಿದೆ. ಇದರ ಜೊತೆಗೆ ಶುಕ್ರವಾರ (ಸೆಪ್ಟೆಂಬರ್ 29) ರಂದು ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ.
ಕಾವೇರಿ ಹೋರಾಟಕ್ಕೆ ನಾಡಿನಾದ್ಯಂತ ಭಾರಿ ಬೆಂಬಲ ವ್ಯಕ್ತವಾಗುತ್ತಿದ್ದು, ಚಿತ್ರರಂಗ ಕೂಡ ಸಂಪೂರ್ಣ ಬೆಂಬಲ ಘೋಷಿಸಿದೆ. ಬುಧವಾರ ಚಲನಚಿತ್ರ ವಾಣಿಜ್ಯ ಮಂಡಳಿಗೆ ಬೆಂಬಲ ಕೋರಲು ಹೋಗಿದ್ದ ವಾಟಾಳ್ ನಾಗರಾಜ್ (Vatal Nagaraj) ಗಂಭೀರ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.
ರಜನಿಕಾಂತ್ ವಿರುದ್ಧ ಕಿಡಿಕಾರಿದ ವಾಟಾಳ್ ನಾಗರಾಜ್
ಇತ್ತೀಚೆಗೆ ಬಿಡುಗಡೆಯಾಗಿ ವಿಶ್ವದಾದ್ಯಂತ ನೂರಾರು ಕೋಟಿ ಕಲೆಕ್ಷನ್ ಮಾಡಿರುವ ರಜನಿಕಾಂತ್ (Rajinikanth) ಅಭಿನಯದ ಜೈಲರ್ ಕರ್ನಾಟಕದಲ್ಲೂ ಸಕತ್ ಕಮಾಲ್ ಮಾಡಿದೆ. ಆದರೆ, ಈಗ ಕಾವೇರಿ ವಿಚಾರದಲ್ಲಿ ಅದೇ ದೊಡ್ಡ ವಿವಾದವಾಗಿ ಪರಿಣಮಿಸಿದೆ. ರಜನಿಕಾಂತ್ ಅವರನ್ನು ನಟ ದರ್ಶನ್ ಪರೋಕ್ಷವಾಗಿ ಕಾಲೆಳೆದಿದ್ದರು. ಹಾಗು ಇದೇ ವಿಷಯವಾಗಿ ವಾಟಾಳ ನಾಗರಾಜ್ ರವರು ನಟ ರಜನಿಕಾಂತ್ ಅವರು ಕಾವೇರಿ ವಿವಾದ ವಿಚಾರವಾಗಿ ಧ್ವನಿ ಎತ್ತುತ್ತಿಲ್ಲವೆಂದು,
ರಾಜ್ಯದವರು ಎಂದು ಹೇಳಿಕೊಂಡು ಇಲ್ಲಿ ಸಿನಿಮಾಗಳನ್ನು ಬಿಡುಗಡೆ ಮಾಡಿ ಕೋಟಿ ಕೋಟಿ ಹಣ ಗಳಿಸುತ್ತಾರೆ. ಆದರೆ, ಇಂತಹ ಸಮಸ್ಯೆಗಳು ಬಂದಾಗ ಒಂದು ಮಾತು ಆಡುವುದಿಲ್ಲ ಎಂದು ಕಿಡಿಕಾರಿದ್ದಾರೆ. “ನಟ ರಜನಿಕಾಂತ್ ಪದೇ ಪದೆ ನಾನು ಕರ್ನಾಟಕ ಮೂಲದವನು ಎನ್ನುವ ನೀವು, ತಮಿಳುನಾಡು ಮುಖ್ಯಮಂತ್ರಿ ಜೊತೆ ಹೋಗಿ ಈ ಬಗ್ಗೆ ಮಾತನಾಡಬೇಕು. ಅದನ್ನ ಬಿಟ್ಟು ಆಟ ಆಡಬೇಡಪ್ಪಾ ರಜನಿಕಾಂತ್ ನೀನು. ಅದು ಮಾಡಲು ಆಗದಿದ್ದ ಮೇಲೆ ನೀನು ಇಲ್ಲಿಗೆ ಬರಕೂಡದು” ಎಂದು ವಾರ್ನಿಂಗ್ ಕೊಟ್ಟಿದ್ದಾರೆ.
ಕರ್ನಾಟಕ ಬಂದ್‌ಗೆ ಚಿತ್ರರಂಗದಿಂದ ಸಂಪೂರ್ಣ ಬೆಂಬಲ
ಶುಕ್ರವಾರ (ಸೆಪ್ಟೆಂಬರ್ 29) ನಡೆಯಲಿರುವ ಕರ್ನಾಟಕ ಬಂದ್ ವಿಚಾರಕ್ಕೆ ಸಂಬಂಧಿಸಿದಂತೆ ಚಿತ್ರರಂಗದ ನಿರ್ಧಾರದ ಕುರಿತು ಫಿಲ್ಮ್ ಚೇಂಬರ್‌ನಲ್ಲಿ ಬುಧವಾರ ಸಭೆ ನಡೆಸಲಾಗಿದೆ. ಬಂದ್‌ಗೆ ಬೆಂಬಲ ಸೂಚಿಸಬೇಕು ಎಂದು ಫಿಲ್ಮ್ ಚೇಂಬರ್‌ಗೆ ಆಗಮಿಸಿ ಹೋರಾಟಗಾರ ವಾಟಾಳ್ ನಾಗರಾಜ್ ಬೇಡಿಕೆ ಇಟ್ಟಿದ್ದರು.
ಶುಕ್ರವಾರ ನಡೆಯಲಿರುವ ಪ್ರತಿಭಟನೆಯಲ್ಲಿ ಇಡೀ ಚಿತ್ರರಂಗ ಭಾಗಿಯಾಗಲಿದೆ ಎಂದು ತಿಳಿಸಿದ್ದಾರೆ. 29 ನೇ ತಾರೀಖು ಶುಕ್ರವಾರ ಚಿತ್ರರಂಗದವರೆಲ್ಲಾ ಫಿಲ್ಮ್ ಚೇಂಬರ್ ಬಳಿ ಸೇರುತ್ತೇವೆ. ಇಲ್ಲಿಂದ ಟೌನ್ ಹಾಲ್ ಬಳಿಯ ಪ್ರತಿಭಟನೆಯಲ್ಲಿ ಭಾಗವಹಿಸುತ್ತೇವೆ” ಎಂದು ಅಧ್ಯಕ್ಷ ಎಮ್ ಎನ್ ಸುರೇಶ್ ತಿಳಿಸಿದ್ದಾರೆ.