Vehicle Rule: ವಾಹನ ಮಾಲೀಕರಿಗೆ ಹೊಸ ಆದೇಶ, ವಾಹನಗಳ ಮೇಲೆ ಈ ರೀತಿ ಬರೆದುಕೊಂಡರೆ 2000 ದಂಡ.

ವಾಹನ ಮಾಲೀಕರು ಬದಲಾಗಿರುವ ನಿಯಮದ ಬಗ್ಗೆ ತಿಳಿದು ರಸ್ತೆಯಲ್ಲಿ ಸಂಚರಿಸುವುದು ಉತ್ತಮ.

Vehicle Rule Penalty: ದೇಶದಲ್ಲಿನ ಟ್ರಾಫಿಕ್ ಸಮಸ್ಯೆಯನ್ನು ನಿವಾರಿಸಲು ಕೇಂದ್ರ ಸರ್ಕಾರ ಸಾಕಷ್ಟು ಕ್ರಮ ವಹಿಸುತ್ತಿದೆ. ಈಗಾಗಲೇ ವಿವಿಧ ತಂತ್ರಜ್ಞಾನಗಳನ್ನು ಬಳಸಿ ಟ್ರಾಫಿಕ್ ನಿಯಂತ್ರಕ್ಕೆ ಪ್ರಯತ್ನಿಸಲಾಗುತ್ತಿದೆ. ಇನ್ನು ಹೆಚ್ಚು ವಾಹನಗಳ ಬಳಕೆಯಿಂದಾಗಿ ಶಬ್ದ ಮಾಲಿನ್ಯ, ವಾಯು ಮಾಲಿನ್ಯ ಸಮಸ್ಯೆಗಳು ಕೂಡ ಹೆಚ್ಚುತ್ತಿವೆ. ಇವೆಲ್ಲದರ ಬಗ್ಗೆ ಕೂಡ ಸರಕಾರ ನಿಗಾ ವಹಿಸುತ್ತಿದೆ.

ಒಂದೊಂದೇ ಸಮಸ್ಯೆಯ ಕಡಿವಾಣಕ್ಕಾಗಿ ಹಲವು ನಿಯಮವನ್ನು ಪರಿಚಯಿಸುತ್ತಿದೆ. ಇತ್ತೀಚಿಗಂತೂ ವಾಹನ ಸವಾರರಿಗೆ ಹೊಸ ಹೊಸ ನಿಯಮಗಳನ್ನು ಪರಿಚಯಿಸಲಾಗಿದೆ. ವಾಹನ ಮಾಲೀಕರು ಬದಲಾಗಿರುವ ನಿಯಮದ ಬಗ್ಗೆ ತಿಳಿದು ರಸ್ತೆಯಲ್ಲಿ ಸಂಚರಿಸುವುದು ಉತ್ತಮ.

ಇನ್ನು ಇತ್ತೀಚಿಗೆ ವಾಹನಗಳ ಮೇಲೆ ಸಾಲುಗಳನ್ನು ಬರೆಯುವುದು ಟ್ರೆಂಡ್ ಆಗಿದೆ.ಯಾವುದೇ ವಾಹನವನ್ನು ನೋಡಿದರು ಅದರ ಮೇಲೆ ಯಾವುದಾದರು ಒಂದು ವಿಷಯಕ್ಕೆ ಸಂಭಂದಿಸಿದ ಸಂದೇಶ ಇರುತ್ತದೆ. ಈ ರೀತಿಯ ಬೆಳವಣಿಗೆಯನ್ನು ತಡೆಯಲು ಈ ರಾಜ್ಯ ಸರ್ಕಾರ ನಿರ್ಧರಿಸಿದೆ.

Vehicle Rule Penalty
Image Credit: Indiatimes

ವಾಹನ ಮಾಲೀಕರಿಗೆ ಹೊಸ ಆದೇಶ
ಈಗಾಗಲೇ ಜಾತಿ, ಧರ್ಮದ ಹೆಸರಿನಲ್ಲಿ ಸಾಕಷ್ಟು ವಿವಾದಾತ್ಮಕ ಪ್ರಕರಣಗಳು ನಡೆಯುತ್ತವೆ. ಬೇರೆ ಜಾತಿಗೆ ಸೇರಿದವರು ಇನ್ನೊಂದು ಜಾತಿಯ ಬಗ್ಗೆ ನಿಂದನೆ ಮಾಡುವುದು ಸಾಮಾನ್ಯ. ಇದೀಗ ಜಾತಿ, ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ವಿವಾದಗಳನ್ನು ತಡೆಯಲು ಹೊಸ ನಿಯಮ ಜಾರಿಗೊಳಿಸಲಾಗಿದೆ. ವಾಹನ ಮಾಲೀಕರು ಈ ಬಗ್ಗೆ ಮಾಹಿತಿ ತಿಳಿಯುವುದು ಉತ್ತಮ.

ವಾಹನಗಳ ಹಿಂದೆ ಬರೆಸುವವರಿಗೆ ಹೊಸ ನಿಯಮ
ಕೆಲ ವಾಹನಗಳ ಹಿಂದೆ ಸಾಲುಗಳನ್ನು ಬರೆಯಲಾಗುತ್ತದೆ. ಗಾದೆ ಮಾತುಗಳು, ಹಿತ ನುಡಿಗಳನ್ನು ಕೆಲವರು ಬರೆದಿರುತ್ತಾರೆ. ಇನ್ನು ಕೆಲವು ವಾಹನಗಳಲ್ಲಿ ಜಾತಿ, ಧರ್ಮ ಇತ್ಯಾಧಿಗಳ ಬಗ್ಗೆ ಬರೆಸಲಾಗುತ್ತದೆ. ಇದೀಗ ಉತ್ತರ ಪ್ರದೇಶದ ಮುಖ್ಯಮಂತ್ರಿ ಆಗಿರುವ ಯೋಗಿ ಆದಿತ್ಯನಾಥ್ ಅವರು ಈ ಬಗ್ಗೆ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ವಾಹನಗಳ ಮೇಲೆ ಜಾತಿ, ಧರ್ಮವನ್ನು ಬಿಂಬಿಸುವ ಸಾಲುಗಳನ್ನು ಬರೆದುಕೊಂಡವರ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದಾರೆ.

new rule for vehicle owners
Image Credit: economictimes

ವಾಹನಗಳ ಮೇಲೆ ಈ ರೀತಿ ಬರೆದುಕೊಂಡರೆ 2000 ದಂಡ
ವಾಹನ ಮೋಟಾರು ಕಾಯ್ದೆ ಅಡಿಯಲ್ಲಿ ಈ ಹೊಸ ನಿಯಮ ಜಾರಿಗೊಳಿಸಲಾಗಿದೆ. ಕಾರುಗಳು, ಬೈಕ್ ಗಳು ಸೇರಿದಂತೆ ಯಾವುದೇ ರಸ್ತೆಯಲ್ಲಿ ಸಂಚರಿಸುವ ವಾಹನಗಳಲ್ಲಿ ಜಾತಿ, ಧಾರ್ಮಿಕ ಅಥವಾ ಪ್ರಭಾವಶಾಲಿ ಸರ್ಕಾರೀ ಸ್ಟನ್ ಸಂಬಂಧಿತ ಸ್ಟಿಕ್ಕರ್ ಗಳನ್ನೂ ಅಂಟಿಸಿದರೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಾಗುತ್ತದೆ. ಜಾತಿ, ಧರ್ಮದ ಬಗ್ಗೆ ವಾಹನಗಳಲ್ಲಿ ಬರೆಸಿಕೊಂಡರೆ 2000 ರೂಪಾಯಿ ದಂಡ ಪಾವತಿಸಬೇಕಾಗುತ್ತದೆ.

Leave A Reply

Your email address will not be published.