RTO Notice: ಇಂತಹ ವಾಹನಗಳ ಮಾಲೀಕರಿಗೆ ನೋಟಿಸ್ ಜಾರಿ, ಕೆಲವೇ ದಿನದಲ್ಲಿ ಸೀಜ್ ಆಗಲಿದೆ ನಿಮ್ಮ ವಾಹನ.

ತೆರಿಗೆ ಪಾವತಿಸುವ ವಾಹನ ಮಾಲೀಕರಿಗೆ ಇಲಾಖೆ ಆದೇಶ ಹೊರಡಿಸಿದೆ.

Vehicle Tax Notice: ದೇಶದಲ್ಲಿ ವಾಹನಗಳ ಬಳಕೆ ಹೆಚ್ಚುತ್ತಿದೆ. ಹೆಚ್ಚಿತ್ತಿರುವ ವಾಹನಗಳಿಂದಾಗಿ ದೇಶದಲ್ಲಿ ಟ್ರಾಫಿಕ್ ಸಮಸ್ಯೆ ಕೂಡ ತಲೆಯೆತ್ತಿಕೊಂಡಿದೆ. ಕೇಂದ್ರ ಸರ್ಕಾರ (Central Government) ಎಷ್ಟೇ ನಿಯಮವನ್ನು ಜಾರಿಗೊಳಿಸಿದರು ಟ್ರಾಫಿಕ್ ಸಮಸ್ಯೆಗೆ ಬ್ರೇಕ್ ಬೀಳುತ್ತಿಲ್ಲ. ದಿನೇ ದಿನೇ ಟ್ರಾಫಿಕ್ ಸಮಸ್ಯೆ ಹೆಚ್ಚುತ್ತಲೇ ಹೊರತು ಕಡಿಮೆಯಾಗುತ್ತಿಲ್ಲ. ಇನ್ನು ಕೇಂದ್ರ ಸರ್ಕಾರ ಟ್ರಾಫಿಕ್ ನಿಯಂತ್ರಣಕ್ಕಾಗಿ ವಿವಿದ ನಿಯಮವನ್ನು ಕೂಡ ಪರಿಚಯಿಸುತ್ತಿದೆ.

ಇನ್ನು ವಾಹನ ಮಾಲೀಕರು ಕಡ್ಡಾಯವಾಗಿ ವಾಹನಗಳಿಗೆ ತೆರಿಗೆ ಪಾವತಿಸಬೇಕಿದೆ. ಇನ್ನು ಇತ್ತೀಚಿಗೆ ತೆರಿಗೆ ಪಾವತಿಯಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಇದೀಗ ವಾಹನಗಳ ತೆರಿಗೆ ಪಾವತಿಯಲ್ಲಿ ಸರ್ಕಾರ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ತೆರಿಗೆ ಪಾವತಿಸುವ ವಾಹನ ಮಾಲೀಕರಿಗೆ ಇಲಾಖೆ ಆದೇಶ ಹೊರಡಿಸಿದೆ.

Vehicle Tax notice
Image Credit: Thehansindia

ಇಂತಹ ವಾಹನಗಳ ಮಾಲೀಕರಿಗೆ ನೋಟಿಸ್ ಜಾರಿ
ವಾಹನಗಳ ತೆರಿಗೆ ಪಾವತಿಸದೇ ಇರುವವರ ವಿರುದ್ದ ಕೇಂದ್ರ ಸರ್ಕಾರ ಇದೀಗ ಕಠಿಣ ಕ್ರಮ ಕೈಗೊಳ್ಳಲಿದೆ. ವಾಹನಗಳ ತೆರಿಗೆ ಪಾವತಿಸದೇ ಇರುವ ವಾಹನಗಳ ಮಾಲೀಕರಿಗೆ ಇದೀಗ ಹೊಸಪೇಟೆ Regional Transport Office  (RTO) ರಿಂದ ನೋಟಿಸ್ ಜಾರಿಯಾಗಿದೆ. ಇನ್ನು ವಾಹನ ಮಾಲೀಕರಿಗೆ ನೋಟಿಸ್ ಕಳಿಸಿದ ಬಳಿಕವೂ ವಾಹನ ಮಾಲೀಕರು ಎಚ್ಚೆತ್ತುಕೊಳ್ಳದಿದ್ದರೆ, ಅಂತವರ ವಿರುದ್ಧ ಕೋರ್ಟ್ ನಲ್ಲಿ ಪ್ರಕರಣ ದಾಖಲು ಮಾಡಲಾಗುತ್ತದೆ.

Vehicle Tax notice latest
Image Credit: Housing

Tax ನೋಟೀಸ್ ಅಲಕ್ಷ್ಯ ಮಾಡುವಂತಿಲ್ಲ
ತೆರಿಗೆ ಪಾವತಿ ಬಾಕಿ ಉಳಿಸಿಕೊಂಡವರಿಗೆ Vehicle Tax Notice ಜಾರಿ ಮಾಡಿ ಬಿಸಿ ಮುಟ್ಟಿಸಲಾಗಿದೆ. ನೋಟಿಸ್ ನಲ್ಲಿ ಬಾಕಿ ಇರುವ ತೆರಿಗೆ ಪಾವತಿಯ ಬಗ್ಗೆ ಸೂಚನೆ ನೀಡಲಾಗಿದೆ. ವಾಹನಗಳ ತೆರಿಗೆ ಬಾಕಿ ವಸೂಲಾತಿಗೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ.

ಈಗಾಗಲೇ 2000 ವಾಹನ ಮಾಲೀಕರಿಗೆ RTO ನೋಟೀಸ್ ಜಾರಿ ಮಾಡಿದೆ. ನೋಟೀಸ್ ಜಾರಿ ಮಾಡಿದ ಬಳಿಕ ಶೇ. 30 ರಷ್ಟು ಜನರು ವಾಹನಗಳ ತೆರಿಗೆ ಪಾವತಿಸುತ್ತಿದ್ದಾರೆ. ನೋಟಿಸ್ ಗು ಹೆದರದೆ ಇದ್ದವರಿಗೆ ಕಾನೂನಿನ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುತ್ತಿದೆ.

Leave A Reply

Your email address will not be published.