Venu Swamy: ವಿಚ್ಛೇದನದ ಬಗ್ಗೆ ಭವಿಷ್ಯ ನುಡಿದಿದ್ದ ಜ್ಯೋತಿಷಿ, ಸಮಂತಾ ಎರಡನೇ ಮದುವೆ ಬಗ್ಗೆಯೂ ಭವಿಷ್ಯ
ಸಮಂತಾ ಎರಡನೇ ಮದುವೆ ಬಗ್ಗೆ ವೇಣು ಸ್ವಾಮಿ ಭವಿಷ್ಯ ನುಡಿದ ವಿಡಿಯೋ ಒಂದು ವೈರಲ್ ಆಗಿದೆ.
Venu Swamy About Samantha Second Marriage: ಟಾಲಿವುಡ್ ನ ಸೆಲೆಬ್ರೆಟಿ ಜೋತಿಷಿ ಆಗಿ ಗುರುತಿಸಿಕೊಂಡಿರುವ ವೇಣು ಸ್ವಾಮಿ (Venu Swamy) ಅವರು ಹಲವು ದಶಕಗಳಿಂದ ಸಿನಿಮಾಗಳ ಮುಹೂರ್ತ ಪೂಜೆ, ಬಿಡುಗಡೆ ದಿನಾಂಕ ವನ್ನು ನಿಗದಿ ಮಾಡುತ್ತಿದ್ದಾರೆ. ತೆಲುಗು ಚಿತ್ರ ರಂಗದಲ್ಲಿ ಸ್ಟಾರ್ ನಟ ನಟಿಯರು ಇರುವಂತೆ ವೇಣು ಸ್ವಾಮಿ ಅವರು ಸೆಲೆಬ್ರಿಟಿ ಜ್ಯೋತಿಷಿ ಏನಿಸಿಕೊಂಡಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ವೇಣು ಸ್ವಾಮಿ ಅವರು ಯೂಟ್ಯೂಬ್ ನಲ್ಲಿ ತೆಲುಗು ಸೆಲೆಬ್ರೇಟಿ ಗಳ ಭವಿಷ್ಯ, ವೃತ್ತಿ ಜೀವನ, ಪ್ರೇಮ, ಮದುವೆ, ಇತ್ಯಾದಿಗಳ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಅವರು ಹೇಳಿರುದು ಯಾವುದು ಸುಳ್ಳಗಲಿಲ್ಲ. ಇದೀಗ ವೇಣು ಸ್ವಾಮಿ ಅವರ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಅವರು ವೈರಲ್ ಆಗಿರುವ ಈ ವಿಡಿಯೋದಲ್ಲಿ ಏನು ಭವಿಷ್ಯ ನುಡಿದಿದ್ದರೆ ಎನ್ನುವ ಬಗ್ಗೆ ನಾವೀಗ ತಿಳಿದುಕೊಳ್ಳೋಣ.
ಸಮಂತಾ ಎರಡನೇ ಮದುವೆ ಬಗ್ಗೆ ಭವಿಷ್ಯ ನುಡಿದ ವೇಣು ಸ್ವಾಮಿ
ಈ ಹಿಂದೆ ವೇಣುಸ್ವಾಮಿ ಅವರು ಸಮಂತಾ (Samantha) ಹಾಗೂ ನಾಗ ಚೇತನ್ಯ (Naga Chaitanya) ಅವರ ವಿಚ್ಚೆದನದ ಬಗ್ಗೆ ಭವಿಷ್ಯ ನುಡಿದಿದ್ದರು. ವೇಣುಸ್ವಾಮಿ ಅವರು ನುಡಿದಂತೆ ಸಮಂತಾ ಹಾಗೂ ನಾಗ ಚೈತನ್ಯ ಅವರು ವಿಚ್ಚೆದನ ಪಡೆದುಕೊಂಡಿದ್ದಾರೆ. ಇದೀಗ ವೇಣುಸ್ವಾಮಿ ಅವರು ಸಮಂತಾ (Samantha) ಎರಡನೇ ಮದುವೆ ಬಗ್ಗೆ ಮಾತನಾಡಿದ ಹಳೆಯ ವಿಡಿಯೋ ಒಂದು ವೈರಾಲ್ ಆಗಿದೆ.
ವೇಣುಸ್ವಾಮಿ ಅವರು ಹಳೆಯ ವಿಡಿಯೋ ಒಂದರಲ್ಲಿ ಸಮಂತಾ, ಪವನ್ ಕಲ್ಯಾಣ್, ಚಿರಂಜೀವಿ ಪುತ್ರಿ ಯ ಮರು ಮದುವೆ. ಹಾಗೂ ನಾಗ ಚೇತನ್ಯ ಸಹೋದರ ಅಕಿಲ್ ಮದುವೇ ಇನ್ನಿತರ ವಿಷಯಗಳು ಬಗ್ಗೆ ಮಾತನಾಡಿದ್ದಾರೆ. ಸಮಂತಾ ಹಾಗೂ ನಾಗ ಚೈತನ್ಯ ವಿಚ್ಚೆದನದ ಬಗ್ಗೆ ಹೇಳಿದಾಗ ಹಲವರು ನನ್ನನ್ನು ಟೀಕಿಸಿದ್ದರು. ಆದರೆ ನಾನು ಭವಿಷ್ಯ ನುಡಿದಂತೆ ಆಯಿತು ಎಂದು ಎಂದಿದ್ದಾರೆ. ಹಾಗೇ ಇವರಿಬ್ಬರು ಕೂಡ ಎರಡನೇ ಮದುವೆ ಅಗಲಿದ್ದಾರೆ ಎಂದಿದ್ದಾರೆ.
ವೈವಾಹಿಕ ಜೀವನ ಸರಿ ಇಲ್ಲದೇ ಇರುವುದಕ್ಕೆ ಗುರುವಿನ ಸ್ಥಾನವೇ ಕಾರಣ ಎಂದಿದ್ದಾರೆ ವೇಣು ಸ್ವಾಮಿ. ತೆಲುಗು ನಟ ಪವನ್ ಕಲ್ಯಾಣ್ ಅವರು ಮೂರು ಮದುವೆ ಆಗಲು ಇದೆ ಕಾರಣ ಎಂದಿದ್ದಾರೆ ಹಾಗೇ ಚಿರಂಜೀವಿ ಪುತ್ರಿ ಶ್ರೀಜಾ ಅವರ ಜಾತಕದಲ್ಲಿ ಬಹುವಿವಾಹ ಬರೆದಿದೆ. ಈಗಾಗಲೇ ಎರಡು ಮದುವೆ ಆಗಿರುವ ಅವರು ಮತ್ತೆ ಎರಡು ಮದುವೆ ಅಗಲಿದ್ದಾರೆ ಎಂದಿದ್ದಾರೆ.
ಇನ್ನು ನಾಗಾರ್ಜುನ ಕುಟುಂಬದಲ್ಲಿ ವಿಚ್ಚೆದನ ಎಂಬುದು ಅವರ ಕುಟುಂಬದ ಜಾತಕದಲ್ಲಿ ಇದೆ. ಇನ್ನು ಮದುವೆ ಆಗದೆ ಇರುವ ಅಕಿಲ್ ಅವರು ಮುಂದೆ ಮದುವೆಯಾದ ನಂತರ ವಿಚ್ಚೆದನ ಪಡೆಯಲಿದ್ದಾರೆ. ನಾಗಾರ್ಜುನ ಸಹ ವಿಚ್ಚೆದನ ಪಡೆದುಕೊಂಡಿದ್ದಾರೆ ಎಂದು ವೇಣು ಸ್ವಾಮಿ ಅವರು ಹಳೆಯ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.