Vidyadhama Scheme: 5 ಗ್ಯಾರೆಂಟಿ ಬೆನ್ನಲ್ಲೇ ಸರ್ಕಾರೀ ಶಾಲಾ ಮಕ್ಕಳಿಗಾಗಿ ಇನ್ನೊಂದು ಘೋಷಣೆ, ವಿದ್ಯಾಧಾಮ ಯೋಜನೆ ಜಾರಿಗೆ.

ರಾಜ್ಯ ಸರ್ಕಾರದ ಬಹುನಿರೀಕ್ಷಿತ ವಿದ್ಯಾಧಾಮ ಯೋಜನೆ ರಾಜ್ಯದ ಎಲ್ಲಾ ಸರಕಾರಿ ಶಾಲೆಯಲ್ಲೂ ಜಾರಿಗೆ ಬರಲಿದೆ.

Vidyadham Scheme For School Student’s: ರಾಜ್ಯದಲ್ಲಿ ಆಗಾಗ ಶಾಲಾ ಮಕ್ಕಳಿಗಾಗಿ ಹಲವು ಯೋಜನೆಗಳು ಜಾರಿಗೆ ಬರುತ್ತಲೇ ಇರುತ್ತದೆ. ರಾಜ್ಯ ಸರ್ಕಾರವು ಶಾಲಾ ಮಕ್ಕಳ ಶಿಕ್ಷಣ ವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡುತ್ತದೆ. ಪ್ರತಿ ವಿದ್ಯಾರ್ಥಿಗೂ ಸದೃಢ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಿ ಉತ್ತಮ ಶಿಕ್ಷಣ ನೀಡುವುದೇ ರಾಜ್ಯ ಸರ್ಕಾರದ ಬಹುದೊಡ್ಡ ಗುರಿ ಆಗಿದೆ.

ಅಷ್ಟೇ ಅಲ್ಲದೆ ಶಿಕ್ಷಣದ ಜೊತೆಗೆ ಮಧ್ಯಾಹ್ನ ಉತ್ತಮ ಆರೋಗ್ಯಯುತ ಬಿಸಿಯೂಟ,ಮಕ್ಕಳಿಗೆ ಪೌಷ್ಟಿಕಾಂಶ ಒದಗಿಸಲು, ಹಾಲು, ಮೊಟ್ಟೆ, ಚಿಕ್ಕಿ ಹೀಗೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಹೀಗೆ ಹಲವಾರು ಯೋಜನೆಗಳನ್ನೂ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಈಗಾಗಲೇ ನಾವು ಕಾಣಬಹುದಾಗಿದೆ. 

Vidyadhama Scheme
Image Credit: Original Source

ವಿದ್ಯಾಧಾಮ ಯೋಜನೆಗೆ ಚಾಲನೆ ನೀಡಲಾಗಿದೆ

ರಾಜ್ಯ ಸರಕಾರದ ಬಹು ದೊಡ್ಡ ನಿಲುವು ವಿದ್ಯಾಧಾಮ ಯೋಜನೆಗೆ ಚಾಲನೆ ನೀಡುವುದಾಗಿದೆ. ನರೇಗಾ ಯೋಜನೆಯ ಅಡಿಯಲ್ಲಿ ಶಾಲೆಗಳ ಮೂಲಸೌಕರ್ಯ ಕಾಮಗಾರಿಗಳ ನಿರ್ಮಿಸುವ ‘ವಿದ್ಯಾಧಾಮ’ ಯೋಜನೆಯು ಕಲ್ಬುರ್ಗಿ ಜಿಲ್ಲೆಯಲ್ಲಿ ಆರಂಭಗೊಂಡಿದೆ. ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಎಲ್ಲಾ ಶಾಲೆಗಳಿಗೂ ಈ ಯೋಜನೆ ವಿಸ್ತಾರಗೊಳ್ಳಲಿದೆ. ನರೇಗಾ ಯೋಜನೆಯಡಿ ಶಾಲೆಗಳ ಮೂಲಸೌಕರ್ಯ ಕಾಮಗಾರಿಗಳ ನಿರ್ಮಿಸುವ ವಿದ್ಯಾಧಾಮ ಯೋಜನೆಗೆ ಚಾಲನೆ ನೀಡುವ ಕುರಿತು ಈಗಾಗಲೇ ಹಲವು ನಿರ್ದಿಷ್ಟ ಕ್ರಮಗಳನ್ನು ಕೈಗೊಳ್ಳಲಾಗಿದೆ.

Vidyadham Scheme For School Student's
Image Credit: Original Source

ಎಲ್ಲಾ ಶಾಲೆಯಲ್ಲೂ ವಿದ್ಯಾಧಾಮ ಯೋಜನೆ ಜಾರಿಗೆ ಬರಲಿದೆ

ವಿದ್ಯಾಧಾಮ ಯೋಜನೆಯು ಮಕ್ಕಳಿಗೆ ಬಹಳ ಉಪಯುಕ್ತಕರ ಆಗಲಿದ್ದು, ಪ್ರತಿ ಶಾಲೆಯಲ್ಲೂ ಈ ಯೋಜನೆಯ ಅವಶ್ಯಕತೆ ಇರುತ್ತದೆ. ಇನ್ನು ಮುಂದಿನ ಕೆಲವು ವರ್ಷಗಳಲ್ಲಿ ಎಲ್ಲಾ ಶಾಲೆಯಲ್ಲೂ ಮೂಲಸೌಕರ್ಯ ಕಾಮಗಾರಿಗಳ ನಿರ್ಮಿಸುವ ‘ವಿದ್ಯಾಧಾಮ’ ಯೋಜನೆಯು ಚಾಲನೆಗೆ ಬರುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ರಾಜ್ಯ ಸರ್ಕಾರ ಭರವಸೆ ನೀಡಿದೆ. ರಾಜ್ಯದ ಎಲ್ಲಾ ಸರ್ಕಾರೀ ಶಾಲೆಗಳು ವಿದ್ಯಾಧಾಮ ಯೋಜನೆಗೆ ಒಳಪಡುತ್ತದೆ.

Leave A Reply

Your email address will not be published.