Virat Kohli And Anushka: ಮಗಳ ಭವಿಷ್ಯಕ್ಕಾಗಿ ಬಹುದೊಡ್ಡ ನಿರ್ಧಾರ ತಗೆದುಕೊಂಡ ಅನುಷ್ಕಾ ಮತ್ತು ವಿರಾಟ್, ಮೆಚ್ಚಿದ ಫ್ಯಾನ್ಸ್.
ವಿರಾಟ್ ಕೊಹ್ಲಿ ತನ್ನ ಕುಟುಂಬ ಹಾಗು ಮಕ್ಕಳ ವಿಚಾರವಾಗಿ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ, ಒಬ್ಬ ಉತ್ತಮ ತಂದೆಯಾಗಿ ವಿರಾಟ್ ಕೊಹ್ಲಿ ಮಗಳಿಗಾಗಿ ಬಹುದೊಡ್ಡ ನಿರ್ಧಾರ ತಗೆದುಕೊಂಡ ಅನುಷ್ಕಾ ಮತ್ತು ವಿರಾಟ್ ಕೊಹ್ಲಿ.
Virat Kohli And Anushka Sharma Latest News: ಭಾರತ ತಂಡದ ಆಟಗಾರ ವಿರಾಟ್ ಕೊಹ್ಲಿ (Virat kohli) ಹಾಗು ನಟಿ ಅನುಷ್ಕಾ ಶರ್ಮ (Anushka Sharma) ಜೋಡಿ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿರುತ್ತಾರೆ. ಇತೀಚಿಗಷ್ಟೇ ಅನುಷ್ಕಾ ಹಾಗು ವಿರಾಟ್ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಸುದ್ದಿ ಆಗಿದ್ದು, ಈ ವಿಷಯವಾಗಿ ಈ ಜೋಡಿ ಸ್ಪಷ್ಟನೆ ನೀಡಿದ್ದು, ನಿಜ ಎರಡನೇ ಮಗು ಬರುತ್ತಿದೆ ಹಾಗಾಗಿ ಅನುಷ್ಕಾ ಎಲ್ಲೂ ಹೊರಗಡೆ ಕಾಣಿಸಿಕೊಳ್ಳುತ್ತಿಲ್ಲ ಎನ್ನಲಾಗಿತ್ತು.
ವಿರಾಟ್ ಕೊಹ್ಲಿ ಯಾವಾಗಲು ತನ್ನ ಕುಟುಂಬಕ್ಕಾಗಿ ಹೆಚ್ಚಿನ ಸಮಯವನ್ನು ಮೀಸಲಿಡುವುದನ್ನು ಕಾಣಬಹುದಾಗಿದೆ ಹಾಗು ಅವರು ಹಲವು ಸಂದರ್ಶನದಲ್ಲಿ ಕೂಡ ಕುಟುಂಬದ ಮಹತ್ವದ ಬಗ್ಗೆ ಹೇಳಿಕೊಳ್ಳುತ್ತಿರುತ್ತಾರೆ.

ಕುಟುಂಬ ಹಾಗು ಮಗಳ ಭವಿಷ್ಯಕ್ಕೆ ಹೆಚ್ಚಿನ ಆಧ್ಯತೆ
ವಿರಾಟ್ ಕೊಹ್ಲಿ ತನ್ನ ಕುಟುಂಬ ಹಾಗು ಮಕ್ಕಳ ಕುರಿತು ಮಾತನಾಡಿದ ವಿಚಾರವಾಗಿ ಅನುಷ್ಕಾ ಶರ್ಮ ಒಂದು ಇಂಟರ್ವ್ಯೂನಲ್ಲಿ ವಿರಾಟ್ ತಗೆದುಕೊಂಡ ನಿರ್ಧಾರದ ಬಗ್ಗೆ ಪ್ರಸ್ತಾಪಿಸಿದ್ದು. ನನ್ನ ವೃತ್ತಿಯಿಂದಾಗಿ ಕುಟುಂಬಕ್ಕೆ ಕಾಲಾವಕಾಶ ಕೊಡೋದನ್ನ ಮಿಸ್ ಮಾಡಿಕೊಳ್ಳುವುದು ನನಗೆ ಇಷ್ಟವಿಲ್ಲ, ಅನುಷ್ಕಾ ಮತ್ತು ಮಕ್ಕಳಿಗೆ ಹೆಚ್ಚು ಸಮಯ ಕೊಡುತ್ತೇನೆ. ಕುಟುಂಬಕ್ಕೆ ಹೆಚ್ಚು ಸಮಯ ನೀಡುವ ಬಗ್ಗೆ ಅನುಷ್ಕಾ ಜತೆ ಮಾತನಾಡಿದ್ದ ವಿಚಾರವಾಗಿ ಅನುಷ್ಕಾ ಶೋ ಒಂದರಲ್ಲಿ ಹೇಳಿಕೊಂಡಿದ್ರು. ಮಕ್ಕಳು ದೊಡ್ಡವರಾದಾಗ ಅವರ ಯಾವುದೇ ಸಾಧನೆ ಅಥವಾ ಟ್ರೋಫಿಗಳನ್ನು ಮನೆಯಲ್ಲಿ ಇಡಲು ಬಯಸುವುದಿಲ್ಲ ಎಂದು ವಿರಾಟ್ ಕೊಹ್ಲಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.

ಮಗಳ ಭವಿಷ್ಯಕ್ಕಾಗಿ ವಿರಾಟ್ ಕೊಹ್ಲಿ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ
ವಿರಾಟ್ ಕೊಹ್ಲಿ ಅವರು ಅದ್ಬುತ ಕ್ರಿಕೆಟ್ ಆಟಗಾರನಾಗಿದ್ದು, ಅವರು ಹೆಚ್ಚಿನ ಸಮಯವನ್ನು ತನ್ನ ಕೆಲಸಕ್ಕೆ ನೀಡಬೇಕಾಗಿರುತ್ತದೆ. ಹಾಗಾಗಿ ಇದೀಗ ವಿರಾಟ್ ಮಕ್ಕಳ ಭವಿಷ್ಯಕ್ಕಾಗಿ ಮತ್ತೊಂದು ನಿರ್ಧಾರ ಮಾಡಿದ್ದರಂತೆ. ಯಶಸ್ವಿ ಕ್ರಿಕೆಟಿಗ ವಿರಾಟ್ ವೃತ್ತಿಜೀವನದ ಯಾವುದೇ ಅಂಶ ಅಥವಾ ವಿಚಾರಗಳು ತಮ್ಮ ಮಕ್ಕಳ ಮೇಲೆ ಪರಿಣಾಮ ಬೀರದಂತೆ ಎಚ್ಚರ ವಹಿಸೋದನ್ನ ನಿರ್ಧರಿಸಿದ್ದರಂತೆ. ಹಾಗಾಗಿ ನನ್ನ ಕುಟುಂಬ ಹಾಗು ಮಕ್ಕಳು ನನ್ನ ವೃತ್ತಿಜೀವನ ದಿಂದ ದೂರ ಉಳಿಯುತ್ತಾರೆ, ನನ್ನ ಕೆಲಸ ಅವರ ಮೇಲೆ ಪರಿಣಾಮ ಬೀರದಂತಿರುತ್ತೇನೆ ಎಂದಿದ್ದಾರೆ.