Virat Kohli: ವಿಶ್ವಕಪ್ ನಲ್ಲಿ ಸಚಿನ್ ಮಾಡಿದ ಈ ದಾಖಲೆ ಮುರಿದ ವಿರಾಟ್, ಕೊಹ್ಲಿ ಸಾಧನೆಗೆ ಅಪಾರ ಮೆಚ್ಚುಗೆ.

ಕ್ರಿಕೆಟ್ ಇತಿಹಾಸದಲ್ಲಿ ಸಚಿನ್ ದಾಖಲೆ ಮುರಿಯುತ್ತಿರುವ ಕೊಹ್ಲಿ, ಇವರ ಸಾಧನೆಗೆ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ

Virat Kohli Breaks Sachin Tendulkar Record: ಭಾನುವಾರ ನಡೆದ ಆಸೀಸ್ ವಿರುದ್ಧದ ವಿಶ್ವಕಪ್​ನ(icc world cup 2023) ಲೀಗ್​ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್​ ನಡೆಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ವಿರಾಟ್​ ಕೊಹ್ಲಿ (Virat Kohli)ಅವರು ಸಚಿನ್​ (Sachin Tendulkar) ಅವರ​ ಹಲವು ದಾಖಲೆಗಳನ್ನು ಮುರಿದಿದ್ದಾರೆ.

ಮೊನ್ನೆ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ತೀವ್ರ ಸಂಕಷ್ಟದಲ್ಲಿದ್ದ ಸಮಯದಲ್ಲಿ ಕೆಎಲ್ ರಾಹುಲ್ ಜೊತೆ ಕ್ರೀಸ್ ಹಂಚಿಕೊಂಡ ವಿರಾಟ್ ಕೊಹ್ಲಿ ಸಮಯೋಚಿತ ಆಟದ ಮೂಲಕ ನಿಧಾನವಾಗಿ ಭರ್ಜರಿ ಬ್ಯಾಟಿಂಗ್ ಮಾಡಿದರು. ಕೇವಲ 116 ಎಸೆತಗಳಲ್ಲಿ 6 ಬೌಂಡರಿಗಳ ನೆರವಿನಿಂದ ಅಮೋಘ 85 ರನ್ ಗಳಿಸಿ ತಂಡವನ್ನು ಅಪಾಯದಿಂದ ರಕ್ಷಿಸಿದರು. ಮಾತ್ರವಲ್ಲದೇ ಈ ಅದ್ಭುತ ಇನ್ನಿಂಗ್ಸ್ ಮೂಲಕ ಕೊಹ್ಲಿ ಭಾರತ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಹಲವು ದಾಖಲೆಗಳನ್ನು ಮುರಿದಿದ್ದಾರೆ.

ಅತಿ ಹೆಚ್ಚು ರನ್ ಗಳಿಸಿದ 2ನೇ ಭಾರತೀಯ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದಾರೆ. 2278 ರನ್ ಕಲೆಹಾಕಿರುವ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದಾರೆ. ಕೊಹ್ಲಿ ಸದ್ಯ 1050* ರನ್ ಗಳಿಸಿದ್ದಾರೆ. ಮುಂದಿನ ಪಂದ್ಯಗಳಲ್ಲಿ ಉತ್ತಮ ರನ್​ ಕಲೆಹಾಕಿದರೆ ಸಚಿನ್​ ಅವರ ಈ ದಾಖಲೆಯನ್ನು ಮುರಿಯುವ ಅವಕಾಶವಿದೆ. 

Virat Kohli breaks Sachin Tendulkar Record
Image Credit: Timesnownews

ಕ್ರಿಕೆಟ್ ಇತಿಹಾಸದಲ್ಲೇ ಕೊಹ್ಲಿ ಸಾಧನೆ ಅತ್ಯದ್ಭುತ

ವಿರಾಟ್ ಕೊಹ್ಲಿ ಒಟ್ಟು 64 ಇನ್ನಿಂಗ್ಸ್ ಗಳಲ್ಲಿ 2785 ರನ್ ಗಳನ್ನು ದಾಖಲಿಸಿದ್ದು ಆ ಮೂಲಕ ಈ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದಾರೆ. 2ನೇ ಸ್ಥಾನಕ್ಕೆ ತಳ್ಳಲ್ಪಟ್ಟಿರುವ ಸಚಿನ್ ತೆಂಡೂಲ್ಕರ್ 58 ಇನ್ನಿಂಗ್ಸ್ ಗಳಲ್ಲಿ 2719 ರನ್ ಗಳಿಸಿದ್ದಾರೆ. 3ನೇ ಸ್ಥಾನದಲ್ಲಿರುವ ರೋಹಿತ್ ಶರ್ಮಾ 64 ಇನ್ನಿಂಗ್ಸ್ ಗಳಲ್ಲಿ 2422 ರನ್ ಗಳಿಸಿದ್ದಾರೆ. ಐಸಿಸಿ ನಿಗಧಿತ ಓವರ್ ಗಳ ಪಂದ್ಯಗಳಲ್ಲಿ ಭಾರತದ ಪರ ಗರಿಷ್ಠ ರನ್ ಇನ್ನು ಐಸಿಸಿ ನಡೆಸುವ ನಿಗಧಿತ ಓವರ್ ಗಳ ಪಂದ್ಯಾವಳಿಗಳಲ್ಲಿ ಭಾರತದ ಪರ ಗರಿಷ್ಠ ರನ್ ಪೇರಿಸಿದ ಭಾರತದ ಬ್ಯಾಟರ್ ಎಂಬ ಕೀರ್ತಿಗೆ ಕೊಹ್ಲಿ ಭಾಜನರಾಗಿದ್ದಾರೆ.

ವಿಶ್ವಕಪ್​ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಕೀರ್ತಿ ವಿರಾಟ್​ ಕೊಹ್ಲಿಗೆ ದೊರೆಯುತ್ತದೆ.

ಏಕದಿನ ವಿಶ್ವಕಪ್​ನಲ್ಲಿ ವಿರಾಟ್​ ಕೊಹ್ಲಿ 85 ರನ್ ಪೂರೈಸಿ ವಿಶ್ವಕಪ್ ಟೂರ್ನಿ ಇತಿಹಾಸದಲ್ಲಿ ಭಾರತ ಪರ ನೂತನ ದಾಖಲೆ ಬರೆದಿದ್ದಾರೆ. Most runs for India in ICC limited-over tournaments 2785 – Virat Kohli (64 Inns)* 2719 – Sachin Tendulkar (58) 2422 – Rohit Sharma (64) 1707 – Yuvraj Singh (62) 1671 – Sourav Ganguly (32) ಚೇಸಿಂಗ್​ನಲ್ಲಿ ಸಚಿನ್​ ದಾಖಲೆ ಪತನ ಕೊಹ್ಲಿ ಅವರು ಚೇಸಿಂಗ್​ ವೇಳೆ ಅತಿ ಕಡಿಮೆ ಇನಿಂಗ್ಸ್​ನಲ್ಲಿ ಅತ್ಯಧಿಕ ರನ್​ ಗಳಿಸಿದ ಸಚಿನ್​ ಅವರ ದಾಖಲೆಯನ್ನು ಮುರಿದಿದ್ದಾರೆ.

Virat Kohli Record
Image Credit: Livemint

ಸಚಿನ್​ ಅವರು ಚೇಸಿಂಗ್​ ವೇಳೆ 124 ಇನಿಂಗ್ಸ್​ನಲ್ಲಿ 5,490 ರನ್ ಗಳಿಸಿದ್ದರು. ಇದೀಗ ಕೊಹ್ಲಿ 92 ಇನಿಂಗ್ಸ್​ನಲ್ಲಿ 5,517 ರನ್ ಬಾರಿಸಿ ಈ ದಾಖಲೆಯನ್ನು ಮೀರಿ ನಿಂತಿದ್ದಾರೆ. ಕೊಹ್ಲಿ ಈ ಹಿಂದೆ 2015ರಲ್ಲಿ ಅಡಿಲೇಡ್ ನಲ್ಲಿ ನಡದ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ 107ರನ್ ಗಳಿಸಿದ್ದರು. ಇದು ವಿಶ್ವಕಪ್ ನಲ್ಲಿ ಅವರ ವೈಯುಕ್ತಿಕ ಗರಿಷ್ಠ ರನ್ ಗಳಿಕೆಯಾಗಿದೆ. ಇದಕ್ಕೂ ಮೊದಲು 2011ರಲ್ಲಿ ಮೀರ್ ಪುರ್ ನಲ್ಲಿ ನಡೆದ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಅಜೇಯ 100 ರನ್ ಗಳಿಸಿದ್ದರು. ಇದು ಅವರ 2ನೇ ವೈಯುಕ್ತಿಕ ರನ್ ಗಳಿಕೆಯಾಗಿದೆ.

ಏಕದಿನ ವಿಶ್ವಕಪ್ ನಲ್ಲಿ ಅತೀ ಹೆಚ್ಚು ಬಾರಿ 50ಕ್ಕೂ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿ

ಏಕದಿನ ವಿಶ್ವಕಪ್ ನಲ್ಲಿ ಅತೀ ಹೆಚ್ಚು ಬಾರಿ 50ಕ್ಕೂ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ ಜಂಟಿ 2ನೇ ಸ್ಥಾನಕ್ಕೇರಿದ್ದು, ಈ ಪಟ್ಟಿಯಲ್ಲಿ 21 ಬಾರಿ 50ಕ್ಕೂ ಹೆಚ್ಚು ರನ್ ಗಳಿಸಿದ ಸಚಿನ್ ತೆಂಡೂಲ್ಕರ್ ಅಗ್ರ ಸ್ಥಾನದಲ್ಲಿದ್ದಾರೆ.

ಕೊಹ್ಲಿ ಮತ್ತು ರೋಹಿತ್ ಶರ್ಮಾ ತಲಾ 9 ಬಾರಿ 50ಕ್ಕೂ ಹೆಚ್ಚು ರನ್ ಗಳಿಸಿ ಜಂಟಿ 2ನೇ ಸ್ಥಾನದಲ್ಲಿದ್ದಾರೆ. ಮಹಮದ್ ಅಜರುದ್ದೀನ್, ರಾಹುಲ್ ದ್ರಾವಿಡ್ ಮತ್ತು ಯುವರಾಜ್ ಸಿಂಗ್ 8 ಬಾರಿ 50ಕ್ಕೂ ಹೆಚ್ಚು ರನ್ ಗಳಿಸಿ ನಂತರದ ಸ್ಥಾನದಲ್ಲಿದ್ದಾರೆ. 3ನೇ ಕ್ರಮಾಂಕದಲ್ಲಿ 11 ಸಾವಿರ ರನ್ ಪೂರೈಸಿರುವ ಕೊಹ್ಲಿ, ಈ ಕ್ರಮಾಂಕದಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಸಾಲಿನಲ್ಲಿ 2ನೇ ಸ್ಥಾನ ಪಡೆದಿದ್ದಾರೆ.

Leave A Reply

Your email address will not be published.