Virat Kohli: ಮ್ಯಾಕ್ಸ್‌ವೆಲ್‌ಗೆ ಭಾವನಾತ್ಮಕ ಸಂದೇಶ ಕಳುಹಿಸಿದ ಕೊಹ್ಲಿ, ವೈರಲ್ ಆಯಿತು ಕೊಹ್ಲಿ ಪೋಸ್ಟ್.

ಪಂದ್ಯ ಗೆಲ್ಲಿಸಿಕೊಟ್ಟ ಮ್ಯಾಕ್ಸ್‌ವೆಲ್‌ ಗೆಲುವಿನ ಸಂತಸವನ್ನು ಸಂಭ್ರಮಿಸಿದರು, ಮ್ಯಾಕ್ಸ್‌ವೆಲ್‌ ಗೆ ಶುಭಾಶಯ ಕೋರಿದ ವಿರಾಟ್ ಕೊಹ್ಲಿ

Virat Kohli About Maxwell: ಏಕದಿನ ವಿಶ್ವಕಪ್ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ನವೆಂಬರ್ 08 ರಂದು ನಡೆದ ಕ್ರಿಕೆಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಆಟಗಾರ ಮ್ಯಾಕ್ಸ್‌ವೆಲ್‌ (Glenn Maxwell) ಸಾಧನೆ ನೋಡಿದರೆ ಮೈ ಜುಮ್ಮೆನಿಸುತ್ತದೆ. ಸೋಲುವ ಮ್ಯಾಚ್ ಅನ್ನು ಗೆಲ್ಲಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಆಟದ ತಿರುವನ್ನೇ ಬದಲಾಯಿಸಿದ ಈ ಆಟಗಾರರನಿಗೆ ಮೆಚ್ಚುಗೆಯ ಸುರಿಮಳೆಯೇ ಹರಿಯುತ್ತಿದೆ.

ಪ್ರತಿಯೊಬ್ಬ ಅಭಿಮಾನಿಯೂ ಈ ಆಟಗಾರನ ಆಟಕ್ಕೆ ಮನಸಾರೆ ಹರಸಿದ್ದಾರೆ. ಆಕರ್ಷಕ ದ್ವಿಶತಕ (ಅಜೇಯ 201) ಬಾರಿಸಿದ ಆರ್‍ಸಿಬಿಯ ಸಹ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್‌ ಗೆ ಟೀಂ ಇಂಡಿಯಾದ ಕ್ಲಾಸ್ ಆಟಗಾರ ವಿರಾಟ್ ಕೊಹ್ಲಿ (Virat Kohli) ಭಾವನಾತ್ಮಕ ಸಂದೇಶದ ಮೂಲಕ ಶುಭ ಕೋರಿದ್ದಾರೆ.

Virat Kohli And Maxwell
Image Credit: Mykhel

ಸೋಲುವ ಪಂದ್ಯವನ್ನು ಕ್ಷಣರ್ದದಲ್ಲಿ ಗೆಲುವಿನತ್ತ ಸಾಗಿಸಿದ ಗ್ಲೆನ್ ಮ್ಯಾಕ್ಸ್‌ವೆಲ್‌

ಅಫ್ಘಾನಿಸ್ತಾನ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು ಇಮ್ರಾನ್ ಜರ್ದಾನ್ ಅವರ ಆಕರ್ಷಕ ಶತಕ (129 ರನ್) ನೆರವಿನಿಂದ 291 ರನ್‍ಗಳ ಬೃಹತ್ ಸವಾಲನ್ನು ಕಲೆ ಹಾಕಿತ್ತು. ಈ ಗುರಿಯನ್ನು ಹಿಂಬಾಲಿಸಿದ ಆಸ್ಟ್ರೇಲಿಯಾ 91 ರನ್‍ಗಳಿಗೆ 7 ವಿಕೆಟ್‍ಗಳನ್ನು ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತ್ತು.

ಆದರೆ 8ನೇ ವಿಕೆಟ್‍ಗೆ ಜೊತೆಗೂಡಿದ ಮ್ಯಾಕ್ಸ್‍ವೆಲ್ ( ಅಜೇಯ 201 ರನ್) ಹಾಗೂ ನಾಯಕ ಪ್ಯಾಟ್ ಕಮ್ಮಿನ್ಸ್ (ಅಜೇಯ 12 ರನ್) ಅವರ 201 ರನ್‍ಗಳ ಜೊತೆಯಾಟದಿಂದ 46.5 ಓವರ್ ಗಳಲ್ಲೇ 293 ರನ್ ಬಾರಿಸುವ ಮೂಲಕ ಆಸ್ಟ್ರೇಲಿಯಾಕ್ಕೆ 3 ವಿಕೆಟ್‍ಗಳ ರೋಚಕ ಗೆಲುವು ತಂದುಕೊಟ್ಟರು. ಈ ಜಯದೊಂದಿಗೆ ಕಾಂಗರೂ ಪಡೆಯು 2023ರ ಸೆಮಿಫೈನಲ್‍ಗೆ ಅರ್ಹತೆ ಗಿಟ್ಟಿಸಿಕೊಂಡ 3ನೇ ತಂಡವಾಗಿದೆ. ಮ್ಯಾಕ್ಸ್‌ವೆಲ್‌ ಸ್ನಾಯುಸೆಳೆತವನ್ನು ಲೆಕ್ಕಿಸದೆ ಪಂದ್ಯವನ್ನು ಗೆಲ್ಲಿಸಿದ್ದಾರೆ.

ಸಂತಸ ಹಂಚಿಕೊಂಡ ಮ್ಯಾಕ್ಸ್‌ವೆಲ್‌

ಈ ಇನ್ನಿಂಗ್ಸ್ ನಲ್ಲಿ ನಾನು ಹೆಚ್ಚಿನದೇನು ಮಾಡಿಲ್ಲ, ಹೆಚ್ಚಿನದನ್ನು ಮಾಡುವುದು ಬಹುಶಃ ಅತ್ಯಂತ ಸಂತೋಷಕರ ವಿಷಯವಾಗಿದೆ, ಪ್ಯಾಟಿಯೊಂದಿಗೆ ಔಟಾಗದೇ ಇರುವುದು ಅಂತ್ಯವು ನನಗೆ ನಿಜವಾಗಿಯೂ ಹೆಮ್ಮೆಯ ವಿಷಯವಾಗಿದೆ ‘ ಎಂದು ಮ್ಯಾಕ್ಸ್‌ವೆಲ್‌ ಸಂತಸ ವ್ಯಕ್ತಪಡಿಸಿದ್ದಾರೆ. ಇವರು ತನ್ನ ಕಾಲು ನೋವಿನಲ್ಲೂ ಇಷ್ಟೊಂದು ಸಾಧನೆ ಮಾಡಿರುವುದು ಬಹಳ ಹೆಮ್ಮೆಯ ವಿಷಯ ಆಗಿದೆ.

ಪ್ರೀತಿಯ ಗೆಳೆಯನಿಗೆ ಶುಭ ಹಾರೈಸಿದ ವಿರಾಟ್ ಕೊಹ್ಲಿ
ಭಾರತ ತಂಡದ ಆಟಗಾರ ವಿರಾಟ್ ಕೊಹ್ಲಿ ತನ್ನ ಪ್ರೀತಿಯ ಸ್ನೇಹಿತನಿಗೆ ಶುಭಾಶಯ ಕೋರಿದ್ದಾರೆ. ಸ್ನಾಯುಸೆಳೆತವನ್ನು ಲೆಕ್ಕಿಸದೆ ಮ್ಯಾಕ್ಸ್‌ವೆಲ್‌ ಪಂದ್ಯವನ್ನು ಗೆಲ್ಲಿಸಿದ ನಂತರ ತಮ್ಮ ಅಧಿಕೃತ ಎಕ್ಸ್ ಖಾತೆ ಮೂಲಕ ಶುಭ ಕೋರಿರುವ ವಿರಾಟ್ ಕೊಹ್ಲಿ ಇಂತಹ ವಿಲಕ್ಷಣ ಸಾಧನೆ ನಿಮ್ಮಿಂದ ಮಾತ್ರ ಮಾಡಲು ಸಾಧ್ಯ’ ಎಂದು ಪ್ರೀತಿಯ ಗೆಳೆಯನಿಗೆ ಒಂದೇ ಸಾಲಿನಲ್ಲಿ ಶುಭ ಕೋರಿದ್ದಾರೆ.

Leave A Reply

Your email address will not be published.