Virat Kohli: ವಿಶ್ವಕಪ್ ಚರಿತ್ರೆಯಲ್ಲಿ ಕೊಹ್ಲಿಯ ಈ ದಾಖಲೆ ಮುರಿಯುವುದು ಅಸಾಧ್ಯ, ಈ ದಾಖಲೆ ಕೊಹ್ಲಿ ಹೆಸರಿಗೆ ಮಾತ್ರ.
ಕ್ರಿಕೆಟ್ ಇತಿಹಾಸದಲ್ಲಿ ವಿರಾಟ್ ಕೊಹ್ಲಿ ಸಾಧನೆ ಮುರಿಯುದು ಅಸಾಧ್ಯ.
Virat Kohli Records In Cricket: ವಿರಾಟ್ ಕೊಹ್ಲಿ (Virat Kohli) ಭಾರತ ಕ್ರಿಕೆಟ್ ತಂಡದ ಅತ್ಯುತ್ತಮ ನಾಯಕ ಎಂದು ಕರೆಸಿಕೊಂಡವರು. ಇವರನ್ನು ರನ್ ಮೆಷಿನ್. ದಾಖಲೆಗಳ ಮಹಾಶೂರ. ದಿಗ್ಗಜರ ದಾಖಲೆಗಳನ್ನೇ ಪುಡಿ ಪುಡಿ ಮಾಡಿದ ಈತ ಅಕ್ಷರಶಃ ಬೌಲರ್ಗಳ ಪಾಲಿಗೆ ನರರಾಕ್ಷಸ ಎಂದೆಲ್ಲ ಕರೆಯುತ್ತಾರೆ. ಅನೇಕ ಅಭಿಮಾನಿಗಳನ್ನು ಒಳಗೊಂಡ ಇವರು ಕ್ರಿಕೆಟ್ ಅಭಿಮಾನಿಗಳ ಬಾಸ್ ಎನಿಸಿಕೊಂಡಿದ್ದಾರೆ.
ಸದ್ಯ ಏಕದಿನ ವಿಶ್ವಕಪ್ ಟೂರ್ನಿಗೆ ಭರ್ಜರಿ ತಯಾರಿ ನಡೆಸುತ್ತಿರುವ ಕಿಂಗ್ ಕೊಹ್ಲಿ, ಈಗ ಸಚಿನ್ ರ (Sachin Tendulkar) ಶತಕಗಳ ಮೇಲೆ ಕಣ್ಣಿಟ್ಟಿದ್ದಾರೆ. ದಾಖಲೆಗಳ ಮೇಲೆ ದಾಖಲೆ ನಿರ್ಮಿಸುತ್ತಾ, ಅಸಾಧ್ಯವಾದ ದಾಖಲೆಗಳನ್ನೇ ಮುರಿಯುತ್ತಾ ಸಾಗುತ್ತಿರುವ ಕೊಹ್ಲಿಯ ಈ ಒಂದು ವಿಶೇಷ ದಾಖಲೆಯನ್ನು ಮುರಿಯುವುದು ಅಷ್ಟು ಸುಲಭವಲ್ಲ, ಯಾವುದದು ತಿಳಿಯೋಣ.
ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಕೊಹ್ಲಿ ಸಾಧನೆ
2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಸೆಮಿಫೈನಲ್ನಿಂದ ಹೊರಬಿತ್ತು. ಆದರೆ ಟೂರ್ನಿಯುದ್ದಕ್ಕೂ ತಂಡದ ಪ್ರದರ್ಶನ ಅದ್ಭುತ, ಅಮೋಘ. ಅದರಲ್ಲೂ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಸೊಗಸಾದ ಆಟವೇ ಭಾರತ ಸೆಮಿಫೈನಲ್ ಪ್ರವೇಶಿಸಲು ಕಾರಣ ಎಂದರೆ ತಪ್ಪಾಗಲ್ಲ. ನಾಯಕನಾಗಿ ವಿರಾಟ್ ಕೊಹ್ಲಿ ಅಪರೂಪದ ದಾಖಲೆಯಯೊಂದನ್ನು ನಿರ್ಮಿಸಿದ್ದರು. ಆದರೆ ಇದು 48 ವರ್ಷಗಳ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಯಾರಿಂದಲೂ ಸಾಧ್ಯವಾಗಿಲ್ಲ ಎಂಬುದು ವಿಶೇಷ.
ಸತತ 5 ಅರ್ಧಶತಕ ಬಾರಿಸಿದ ಕ್ರಿಕೆಟಿಗ
ಏಕದಿನ ವಿಶ್ವಕಪ್ ಟೂರ್ನಿಗೆ 48 ವರ್ಷಗಳ ಇತಿಹಾಸ ಇದೆ. 1975ರಲ್ಲಿ ಮೊದಲ ಬಾರಿಗೆ ನಡೆದಿತ್ತು ಈ ಟೂರ್ನಿ. ಈಗ 13ನೇ ಆವೃತ್ತಿಗೆ ಕಾಲಿಟ್ಟಿದೆ. ಆದರೆ, ಅಲ್ಲಿಂದ ಈವರೆಗೂ 2019ರ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಸತತ 5 ಅರ್ಧಶತಕ ಸಿಡಿಸಿದ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಒಡಿಐ ವಿಶ್ವಕಪ್ ಇತಿಹಾಸದಲ್ಲಿ ಕ್ಯಾಪ್ಟನ್ ಆಗಿ ಸತತ 5 ಅರ್ಧಶತಕ ಬಾರಿಸಿದ ವಿಶ್ವದ ಮೊದಲ ನಾಯಕ ಎಂಬ ವಿಶೇಷ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡರು ವಿರಾಟ್ ಕೊಹ್ಲಿ.
ಈ ದಾಖಲೆ ಮುರಿಯುವುದು ಅಷ್ಟು ಸುಲಭವಲ್ಲ ಎಂಬುದು ಕ್ರಿಕೆಟ್ ಪಂಡಿತರ ಮಾತು. ಟೂರ್ನಿಯಲ್ಲಿ ಕೊಹ್ಲಿ ಆಸೀಸ್ ವಿರುದ್ಧ ಮೊದಲ ಅರ್ಧಶತಕ (82) ಸಿಡಿಸಿದ್ದರು. ನಂತರ ಪಾಕಿಸ್ತಾನದ ವಿರುದ್ಧ 77, ಅಫ್ಘಾನಿಸ್ತಾನ ವಿರುದ್ಧ 67, ವೆಸ್ಟ್ ಇಂಡೀಸ್ ವಿರುದ್ಧ 72 ರನ್, ಇಂಗ್ಲೆಂಡ್ ಎದುರು 66 ರನ್ ಸಿಡಿಸಿದ್ದರು. ಆ ಮೂಲಕ ಏಕದಿನ ವಿಶ್ವಕಪ್ ಚರಿತ್ರೆಯಲ್ಲಿ ನಾಯಕನಾಗಿ ಸತತ 5 ಅರ್ಧಶತಕ ಬಾರಿಸಿ ವಿಶ್ವ ದಾಖಲೆ ಸೃಷ್ಟಿಸಿದರು.
ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಕೆಲವು ದಿನಗಳ ಬಾಕಿ
ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ನಾಲ್ಕೇ ದಿನಗಳು ಬಾಕಿ ಉಳಿದಿವೆ. ಎಲ್ಲಾ ತಂಡಗಳು ಭಾರತದಲ್ಲಿ ಭರ್ಜರಿ ಸಿದ್ಧತೆ ನಡೆಸುತ್ತಿವೆ. ಅಂತಿಮ ಹಂತದಲ್ಲಿ ತಯಾರಿ ತೊಡಗಿದ್ದು, ಈ ಬಾರಿ ಟ್ರೋಫಿ ಗೆಲ್ಲಲೇಬೇಕೆಂಬ ಪಣತೊಟ್ಟಿವೆ. ಅಕ್ಟೋಬರ್ 5 ರಿಂದ ಹಸಿರು ಅಖಾಡದಲ್ಲಿ ಸಮರ ಸಾರಲು ಸಜ್ಜಾಗುತ್ತಿವೆ. ವಿಶ್ವಕಪ್ ಪ್ರಶಸ್ತಿ ಗೆದ್ದುಕೊಳ್ಳಲು 10 ತಂಡಗಳು ಕಾದಾಡಲು ರೆಡಿಯಾಗಿವೆ. ಫ್ಯಾನ್ಸ್ ಕೂಡ ಕಾತರದಿಂದ ಕಾಯುತ್ತಿದ್ದಾರೆ. ಈ ಮೆಗಾ ಸಮರದಲ್ಲಿ ಬ್ಯಾಟ್ಸ್ಮನ್ಗಳು ರನ್ ಕೊಳ್ಳೆ ಹೊಡೆಯಲು, ಬೌಲರ್ಗಳು ವಿಕೆಟ್ ಬೇಟೆಯಾಡಲು ಸಿದ್ಧರಾಗಿದ್ದಾರೆ.