Vishwakarma: ದೇಶದ ಪ್ರತಿಯೊಬ್ಬರಿಗೂ ಮೋದಿ ಬರ್ತ್ ಡೇ ಗಿಫ್ಟ್, 2 ಲಕ್ಷ ರೂಪಾಯಿ ಸಾಲ ಘೋಷಣೆ.

ಪ್ರಧಾನಿ ಮೋದಿಯ ಜನ್ಮ ದಿನದಂದು ಹೊಸ ಯೋಜನೆಗೆ ಚಾಲನೆ.

Vishwakarma Yojana Advantages: ವಿಶ್ವಕರ್ಮ ಜಯಂತಿಯಂದು (Vishwakarma Jayanthi) ಸರ್ಕಾರ ಹೊಸ ಯೋಜನೆಯನ್ನ ತರುತ್ತಿದೆ. ಅದೇ ದಿನ ಮೋದಿಯವರ ಹುಟ್ಟುಹಬ್ಬ ಎಂಬುದು ಇಲ್ಲಿ ವಿಶೇಷ, ಕೇಂದ್ರ ಸರ್ಕಾರ ವಿಶ್ವಕರ್ಮ ಯೋಜನೆ ತರಲಿದ್ದು, ಸೆಪ್ಟೆಂಬರ್ 17 ರಂದು ಪ್ರಧಾನಿ ಮೋದಿ (Narendra Modi) ಯೋಜನೆಗೆ ಚಾಲನೆ ನೀಡಲಿದ್ದಾರೆ.

ಈ ಯೋಜನೆಯ ಭಾಗವಾಗಿ, ಸಾಂಪ್ರದಾಯಿಕ ಕರಕುಶಲಗಳನ್ನ ಉತ್ತೇಜಿಸಲು ಸರ್ಕಾರವು ಹಣಕಾಸಿನ ನೆರವು ನೀಡುತ್ತದೆ. ಕೇಂದ್ರ ಸರ್ಕಾರವು (Central Government) ಈ ಯೋಜನೆಯಡಿ ಅರ್ಹ ಜನರಿಗೆ ಸರಳ ಷರತ್ತುಗಳೊಂದಿಗೆ ಸಾಲವನ್ನ ನೀಡುತ್ತದೆ. ವಿಶ್ವಕರ್ಮ ಯೋಜನೆಯಡಿ ಸುಮಾರು 30 ಲಕ್ಷ ಕುಟುಂಬಗಳು ಪ್ರಯೋಜನ ಪಡೆಯಲಿವೆ ಎಂದು ಕೇಂದ್ರ ಹೇಳಿಕೊಂಡಿದೆ.

vishwakarma yojana benefit
Image Credit: Opportunityindia

ಕುಶಲಕರ್ಮಿಗಳಿಗೆ ಈ ಹೊಸ ಯೋಜನೆ
ಈ ಹೊಸ ಯೋಜನೆಯಡಿ, ಕುಶಲಕರ್ಮಿಗಳು ಸಬ್ಸಿಡಿ ಬಡ್ಡಿದರದಲ್ಲಿ 10,000 ರೂ. ಗಳನ್ನ ಪಾವತಿಸಬೇಕಾಗುತ್ತದೆ. 2 ಲಕ್ಷ ರೂ.ಗಳ ವರೆಗೆ ಸಾಲವನ್ನ ಪಡೆಯಬಹುದು. ಆರಂಭದಲ್ಲಿ 1 ಲಕ್ಷ ರೂ.ವರೆಗೆ ಸಾಲ ನೀಡಲಾಗುವುದು. ಎರಡನೇ ಹಂತದಲ್ಲಿ ರೂ. 2 ಲಕ್ಷ ರೂ. ವರೆಗೆ ಸಾಲ ನೀಡಲಾಗುವುದು. ಈ ಸಾಲಗಳ ಮೇಲಿನ ಬಡ್ಡಿದರ ತುಂಬಾ ಕಡಿಮೆ ಇದ್ದು, ಸಾಲವನ್ನ ಸಬ್ಸಿಡಿ ಬಡ್ಡಿದರದಲ್ಲಿ ಪಡೆಯಬಹುದು. ಬಡ್ಡಿದರವು ಶೇಕಡಾ 5 ರಷ್ಟಿರುತ್ತದೆ.

ವಿಶ್ವಕರ್ಮ ಯೋಜನೆಯ ಪ್ರಯೋಜನ
ನೇಕಾರರು, ಅಕ್ಕಸಾಲಿಗರು, ಕಮ್ಮಾರರು, ಲಾಂಡ್ರಿ ಕಾರ್ಮಿಕರು, ಕ್ಷೌರಿಕರು ಮತ್ತು ಇತರರು ಈ ವಿಶ್ವಕರ್ಮ ಯೋಜನೆಯಿಂದ ಪ್ರಯೋಜನ ಪಡೆಯಬಹುದು. ಅವರ ಕುಟುಂಬಗಳಿಗೆ ಸುಲಭವಾಗಿ ಸಾಲ ಸಿಗುತ್ತದೆ. ಕುಶಲಕರ್ಮಿಗಳಿಗೆ ತಮ್ಮ ಕೌಶಲ್ಯಗಳನ್ನ ಅಭಿವೃದ್ಧಿಪಡಿಸಲು ಕೌಶಲ್ಯ ಉನ್ನತೀಕರಣ ಸೌಲಭ್ಯ ಲಭ್ಯವಿದೆ. ಟೂಲ್ ಕಿಟ್ ಪ್ರೋತ್ಸಾಹವನ್ನು ಸಹ ಪಡೆಯಬಹುದು.

Vishwakarma Yojana Advantages
Image Credit: PMvishwakarmayojana

ಡಿಜಿಟಲ್ ವಹಿವಾಟುಗಳನ್ನ ಉತ್ತೇಜಿಸುತ್ತದೆ. ಮಾರ್ಕೆಟಿಂಗ್ ಬೆಂಬಲಕ್ಕಾಗಿ ಪ್ರೋತ್ಸಾಹಕವನ್ನ ಸಹ ಪಡೆಯಬಹುದು.ಈ ಯೋಜನೆಯಲ್ಲಿ ಎರಡು ರೀತಿಯ ಕೌಶಲ್ಯ ಕಾರ್ಯಕ್ರಮಗಳಿದ್ದು, ಇವು ಮೂಲಭೂತ ಮತ್ತು ಸುಧಾರಿತವಾಗಿವೆ. ಇವುಗಳಲ್ಲಿ ತರಬೇತಿ ಪಡೆಯುತ್ತಿರುವಾಗ, ಫಲಾನುಭವಿಗಳು 500 ರೂ.ಗಳ ಸ್ಟೈಫಂಡ್ ಸಹ ನೀಡಲಾಗುತ್ತದೆ. ಇನ್ನು ಆಧುನಿಕ ಉಪಕರಣಗಳನ್ನ ಖರೀದಿಸಲು, 15,000 ರೂ.ಗಳವರೆಗೆ ಬೆಂಬಲವೂ ಲಭ್ಯವಿದೆ.

Leave A Reply

Your email address will not be published.