Vivo Watch: ಈ ಅಗ್ಗದ ವಿವೊ ವಾಚ್ ಮುಂದೆ ಬೇಡಿಕೆ ಕಳೆದುಕೊಂಡ ಆಪಲ್ ವಾಚ್, ಕಡಿಮೆ ಬೆಲೆ ಮತ್ತು ಆಕರ್ಷಕ ಫೀಚರ್.

ಕಡಿಮೆ ಬೆಲೆಗೆ ಆಕರ್ಷಕ ಫೀಚರ್ ಇರುವ ಸ್ಮಾರ್ಟ್ ವಾಚ್ ಬಿಡುಗಡೆ ಮಾಡಿದ Vivo.

Vivo Watch 3: ವಾಚ್ ಪ್ರಿಯರಿಗಾಗಿ ಇಲ್ಲಿದೆ ಒಂದು ಶುಭ ಸುದ್ದಿ. ಉತ್ತಮ ಕಂಪನಿಯ ವಾಚ್ ಅನ್ನು ಖರೀದಿ ಮಾಡುವ ಪ್ಲಾನ್ ಇದ್ದರೆ ಈಗ ಮಾರುಕಟ್ಟೆಯಲ್ಲಿ ವಿವೊ ಕಂಪನಿಯಾ ವಾಚ್ ಲಗ್ಗೆ ಇಡುತ್ತಿದೆ. ಟೆಕ್‌ ವಲಯದಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ್ದ ವಿವೋ ವಾಚ್ 3 ಅಧಿಕೃತವಾಗಿ ಬಿಡುಗಡೆ ಆಗಿದೆ.

ಈ ಸ್ಮಾರ್ಟ್‌ವಾಚ್‌ ವಿವೋ ವಾಚ್ 2 ರ ಉತ್ತರಾಧಿಕಾರಿಯಾಗಿ ಎಂಟ್ರಿ ನೀಡಿದೆ. ಇನ್ನು ಈ ಸ್ಮಾರ್ಟ್‌ವಾಚ್‌ 3D ಕರ್ವ್ಡ್‌ ಗ್ಲಾಸ್‌ ಹೊಂದಿರುವ ಡಿಸ್‌ಪ್ಲೇಯನ್ನು ಹೊಂದಿದೆ. ಇದಲ್ಲದೆ ಶ್ರವಣ ರಕ್ಷಣೆಗಾಗಿ ಸ್ಮಾರ್ಟ್‌ವಾಚ್‌ ಹೆಚ್ಚಿನ ನಾಯ್ಸ್‌ ಲೆವೆಲ್ ಅನ್ನು ಸಹ ಪತ್ತೆ ಮಾಡಲಿದೆ. ಸ್ಟೇನ್ಲೆಸ್ ಸ್ಟೀಲ್ ತಿರುಗುವ ಕಿರೀಟ ಮತ್ತು ಕೆಳಭಾಗದಲ್ಲಿ ಭೌತಿಕ ಬಟನ್ ಇದೆ. ಜೊತೆಗೆ ಸ್ಲಿಮ್ಮರ್ ಫಾರ್ಮ್ ಫ್ಯಾಕ್ಟರ್ ಅನ್ನು ಹೊಂದಿದೆ.

Vivo Watch 3
Image Credit: Lowyat

ವಿವೋ ವಾಚ್ 3 ನ ರಚನೆ

ವಿವೋ ವಾಚ್ 3 ಸ್ಮಾರ್ಟ್‌ವಾಚ್‌ 1.43 ಇಂಚಿನ ವೃತ್ತಾಕಾರದ ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇ ಮೇಲ್ಭಾಗದಲ್ಲಿ 3D ಕರ್ವ್ಡ್‌ ಗ್ಲಾಸ್‌ ಅನ್ನು ಹೊಂದಿದ್ದು, 466 x 466 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಇನ್ನು ಸ್ಮಾರ್ಟ್‌ವಾಚ್‌ AOD ಮೋಡ್ ಅನ್ನು ಒಳಗೊಂಡಿದೆ. ಜೊತೆಗೆ ಈ ಸ್ಮಾರ್ಟ್ ವಾಚ್ 5 ಮೀಟರ್ ವರೆಗೆ ನೀರು ನಿರೋಧಕ ವ್ಯವಸ್ಥೆಯನ್ನು ಪಡೆದಿದೆ. ವಿವೋ ವಾಚ್ 3 ಇಂಟರ್‌ಫೇಸ್, ಫಂಕ್ಷನ್‌ಗಳನ್ನು ನ್ಯಾವಿಗೇಟ್ ಮಾಡಲು ಡಿವೈಸ್‌ನ ಬಲಭಾಗದಲ್ಲಿ ಮೇಲ್ಭಾಗದಲ್ಲಿ ಸ್ಟೇನ್ಲೆಸ್ ಸ್ಟೀಲ್ ತಿರುಗುವ ಕಿರೀಟವನ್ನು ಹೊಂದಿದೆ. ಇದಲ್ಲದೆ ಸ್ಮಾರ್ಟ್‌ವಾಚ್‌ ಕೆಳಭಾಗದಲ್ಲಿ ಫಿಸಿಕಲ್‌ ಬಟನ್ ಪಡೆದಿದೆ.

ವಿವೋ ವಾಚ್ 3 ನ ವಿಶೇಶತೆ

ವಿವೋ ವಾಚ್‌ 3 ಸ್ಮಾರ್ಟ್‌ವಾಚ್‌ ಪ್ಯಾಕ್ ಕಸ್ಟಮೈಸ್ ಮಾಡಿದ 100 ಕ್ಕೂ ಹೆಚ್ಚು ವರ್ಕ್‌ಔಟ್ ಮೋಡ್‌ಗಳಿಗೆ ಬೆಂಬಲವನ್ನು ನೀಡುತ್ತದೆ. ಇದರೊಂದಿಗೆ ರಸ್ಟ್ ಪ್ರೋಗ್ರಾಮಿಂಗ್ ಭಾಷೆಯ ಆಧಾರದ ಮೇಲೆ ಬ್ಲೂಓಎಸ್ ಆಪರೇಟಿಂಗ್ ಸಿಸ್ಟಂನಲ್ಲಿ ಎನ್‌ಎಫ್‌ಸಿ ಕಾರ್ ಕೀಗಳು, ಕ್ಯಾಮೆರಾ ನಿಯಂತ್ರಣದಂತಹ ಫೀಚರ್ಸ್‌ಗಳೊಂದಿಗೆ ಕಾರ್ಯನಿರ್ವಹಿಸಲಿದೆ.

ಇನ್ನು ಸ್ಮಾರ್ಟ್ ವಾಚ್ ಕಾರ್ಡ್‌ಗಳನ್ನು ಸಹ ಸ್ಟೋರೇಜ್‌ ಮಾಡುವುದಕ್ಕೆ ಅವಕಾಶವನ್ನು ಸಹ ಪಡೆದಿದೆ.ಜೊತೆಗೆ ಸ್ಮಾರ್ಟ್‌ವಾಚ್‌ ಹೆಲ್ತ್‌ ಮತ್ತು ಫಿಟ್‌ನೆಸ್‌ಗೆ ಸಂಬಂಧಿಸಿದಂತೆ ಹಲವು ಆಕರ್ಷಕ ಫೀಚರ್ಸ್‌ಗಳನ್ನು ಪಡೆದಿದೆ. ಇದರಲ್ಲಿ ಪ್ರಮುಖವಾಗಿ ಹೃದಯ ಬಡಿತ ಮಾನಿಟರ್, SpO2 ಸೆನ್ಸಾರ್‌ ಪಡೆದಿದೆ. ಇದಲ್ಲದೆ ಅಸಹಜ ಏರಿಳಿತಗಳು ಕಂಡುಬಂದಾಗ ಬಳಕೆದಾರರಿಗೆ ಎಚ್ಚರಿಕೆ ನೀಡುವ ಫೀಚರ್ಸ್‌ ಕೂಡ ನೀಡಲಾಗಿದೆ.

Vivo Watch 3 Price
Image Credit: isp.page

ವಿವೋ ವಾಚ್ 3 ಬ್ಯಾಟರಿ ಸಾಮರ್ಥ್ಯ

ಈ ಸ್ಮಾರ್ಟ್‌ವಾಚ್‌ 505mAh ಸಾಮರ್ಥ್ಯದ ಬ್ಯಾಟರಿ ಬೆಂಬಲಿಸಲಿದೆ. ಇನ್ನು ಸಿಂಗಲ್‌ ಚಾರ್ಜ್‌ನಲ್ಲಿ 16 ದಿನಗಳ ಬ್ಯಾಟರಿ ಅವಧಿಯನ್ನು ನೀಡಲಿದೆ ಎಂದು ಹೇಳಲಾಗಿದೆ. ಇನ್ನು ಸ್ಮಾರ್ಟ್ ವಾಚ್ ಹ್ಯಾಂಡ್ಸ್-ಫ್ರೀ ಧ್ವನಿ ಕರೆಗಾಗಿ eSIM ಬೆಂಬಲಿಸಲಿದೆ. ಜೊತೆಗೆ ಸ್ಮಾರ್ಟ್‌ವಾಚ್‌ 3 ಮ್ಯೂಸಿಕ್‌ ಸಂಗ್ರಹಣೆಗಾಗಿ 64MB RAM ಮತ್ತು 4GB ಲೋಕಲ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ ಇದು TWS ಇಯರ್‌ ಬಡ್‌ ಗಳಿಗೆ ಸಹ ಕನೆಕ್ಟ್‌ ಮಾಡುವ ಅವಕಾಶವನ್ನು ಸಹ ಪಡೆದುಕೊಂಡಿದೆ.ಈ ಸ್ಮಾರ್ಟ್‌ವಾಚ್‌ ಚೆನ್ ಯೆಹೆ, ಮೂನ್‌ಲೈಟ್ ವೈಟ್, ಸ್ಟಾರ್‌ಲೈಟ್ ಮತ್ತು ಬ್ರೈಟ್ ಮೂನ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

ವಿವೋ ವಾಚ್ 3 ನ ಬೆಲೆ

ವಿವೋ ವಾಚ್ 3 ಸ್ಮಾರ್ಟ್‌ವಾಚ್‌ ಪ್ರಸ್ತುತ ಚೀನಾದಲ್ಲಿ ಮಾತ್ರ ಬಿಡುಗಡೆ ಮಾಡಲಾಗಿದೆ. ಆದರಿಂದ ಇದನ್ನು ಚೀನಾದಲ್ಲಿ eSIM ಆವೃತ್ತಿಗೆ CNY 1,399 (ಅಂದಾಜು 15,972ರೂ) ಹಾಗೂ ರಬ್ಬರ್ ಪಟ್ಟಿ ಆಯ್ಕೆಗೆ CNY 1,299 (ಅಂದಾಜು 14,830ರೂ) ಬೆಲೆಯಲ್ಲಿ ಲಭ್ಯವಿದೆ .

Leave A Reply

Your email address will not be published.