Volvo: ಒಮ್ಮೆ ಚಾರ್ಜ್ ಮಾಡಿದರೆ 530 Km ರೇಂಜ್ ಕೊಡುತ್ತೆ ಈ ಕಾರ್, ಕೆಲವೇ ದಿನದಲ್ಲಿ ದಾಖಲೆಯ ಬುಕಿಂಗ್.

ಸೆಪ್ಟೆಂಬರ್ ನಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ಈ ನೂತನ ಮಾದರಿಯ ಎಲೆಕ್ಟ್ರಿಕ್ ಕಾರ್.

Volvo C40 Recharge Electric Car: ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನ (Electric Vehicle) ಗಳಿಗೆ ಬಾರಿ ಬೇಡಿಕೆ ಕಂಡು ಬರುತ್ತಿದೆ. ಹಾಗಾಗಿ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳ ಉತ್ಪದನೆಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿವೆ. ಈ ನಡುವೆ ಪ್ರತಿಷ್ಠಿತ ವಾಹನ ತಯಾರಕ ಕಂಪನಿ ಆಗಿರುವ ವೋಲ್ವೋ (Volvo) ಗ್ರಾಹಕರನ್ನು ಸೆಳೆಯುವ ಸಲುವಾಗಿ ಹೊಸ ಮಾದರಿಯ ಎಲೆಕ್ಟ್ರಿಕ್ ಕಾರ್ ಗಳನ್ನೂ ಬಿಡುಗಡೆ ಗೊಳಿಸಿದೆ.

ಇದೀಗ ವೋಲ್ವೋ ತನ್ನ ಹೊಸ ಮಾದರಿಯ ಎಲೆಕ್ಟ್ರಿಕ್ ಕಾರ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ತಯಾರಿ ನೆಡೆಸುತ್ತಿದೆ. ಈ ಎಲೆಕ್ಟ್ರಿಕ್ ಕಾರ್ ಅನ್ನು ಕಂಪನಿ ಮುಂದಿನ ತಿಂಗಳು ಅಂದರೆ ಸೆಪ್ಟೆಂಬರ್ ನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಈಗ ನಾವು ಈ ಕಾರ್ ನ ಕುರಿತು ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ. 

Volvo C40 Recharge Electric Car Price and Specifications
Image Credit: Autoguideindia

ವೋಲ್ವೋ C40 ರಿಚಾರ್ಜ್ ಎಲೆಕ್ಟ್ರಿಕ್ ಕಾರ್ (Volvo C40 Recharge Electric Car)

ನೂತನ ವೋಲ್ವೋ C40 ರಿಚಾರ್ಜ್ ಎಲೆಕ್ಟ್ರಿಕ್ ಕಾರ್ ನ ಒಳಭಾಗ ಸರಳ ಮತ್ತು ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಕಾರ್ 4 ಸೀಟ್ ಅನ್ನು ಒಳಗೊಂಡಿದೆ. ಇದು ರಸ್ತೆ ಪ್ರವಾಸಗಳಲ್ಲಿ ಆರಾಮದಾಯಕವಾಗಿರುತ್ತದೆ.

ವೋಲ್ವೋ C40 ರಿಚಾರ್ಜ್ ಎಲೆಕ್ಟ್ರಿಕ್ ಕಾರ್ ಮೈಲೇಜ್ 

ವೋಲ್ವೋ C40 ರಿಚಾರ್ಜ್ ಎಲೆಕ್ಟ್ರಿಕ್ ಕಾರ್ ಉತ್ತಮವಾದ ಬ್ಯಾಟರಿ ಕ್ಯಾಪಾಸಿಟಿ ಅನ್ನು ಪಡೆದಿದೆ. ಈ ಎಲೆಕ್ಟ್ರಿಕ್ ಕಾರ್ ಸಿಂಗಲ್ ಚಾರ್ಜ್ ನಲ್ಲಿ 530 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ. ಈ ಕಾರ್ ಇದು ಫಾಸ್ಟ್ ಚಾರ್ಜಿಂಗ್ ನಲ್ಲಿ 27 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಹಾಗೆ ದೊಡ್ಡ ಬ್ಯಾಟರಿ ಪ್ಯಾಕ್ 402bhp ಮತ್ತು 660Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ವೋಲ್ವೋ C40 ರಿಚಾರ್ಜ್ ಎಲೆಕ್ಟ್ರಿಕ್ ಕಾರ್ 18 ಕಿಲೋಮೀಟರ್ ಟಾಪ್ ಸ್ಪೀಡ್ ಅನ್ನು ಹೊಂದಿದೆ.

Volvo C40 Recharge Electric Car Mileage
Image Credit: Cardekho

ವೋಲ್ವೋ C40 ರಿಚಾರ್ಜ್ ಎಲೆಕ್ಟ್ರಿಕ್ ಕಾರ್ ಬೆಲೆ ಹಾಗೂ ವಿಶೇಷತೆ

ವೋಲ್ವೋ C40 ರಿಚಾರ್ಜ್ ಎಲೆಕ್ಟ್ರಿಕ್ ಕಾರ್ ನ ಒಳಭಾಗ ಸರಳ ಮತ್ತು ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಈ ವೋಲ್ವೋ C40 ರಿಚಾರ್ಜ್ ಎಲೆಕ್ಟ್ರಿಕ್ ಕಾರ್ ನಲ್ಲಿ ಕ್ಯಾಬಿನ್ ಸಂಪೂರ್ಣವಾಗಿ ಲೆದರ್ ನಿಂದ ಫಿನಿಶ್ ಹೊಂದಿದೆ. 9 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನೆಮೆಂಟ್ ಸಿಸ್ಟಮ್ ಅನ್ನು ಪಡೆದಿದೆ. ಹಾಗೆ ಇದರ ಬೆಲೆಯ ಬಗ್ಗೆ ಮಾತಾಡುದಾದರೆ ಎಕ್ಸ್ ಶೋರೂಮ್ ಪ್ರಕಾರ ಇದರ ಬೆಲೆ 60 ಲಕ್ಷ ಆಗಿದೆ.

Leave A Reply

Your email address will not be published.