Waste Disposal : ಪ್ರತಿನಿತ್ಯ ಮನೆಯ ಕಸ ಹೊರಹಾಕುವವರಿಗೆ ಜಾರಿಗೆ ಬಂತು ಹೊಸ ರೂಲ್ಸ್, ಕೊಡಬೇಕು ಶುಲ್ಕ.

ಇನ್ನುಮುಂದೆ ನಿಮ್ಮ ಮನೆಯ ಕಸ ಖಾಲಿ ಆಗಬೇಕಿದ್ದರೆ ಶುಲ್ಕ ಪಾವತಿ ಕಡ್ಡಾಯ.

Waste Disposal Charges In Bengaluru: ಬೆಂಗಳೂರಿನಂತಹ ದೊಡ್ಡ ಸಿಟಿಯಲ್ಲಿ ಬಹಳ ದೊಡ್ಡ ಸಮಸ್ಯೆ ಏನಂದರೆ ಕಸ ವಿಲೇವಾರಿ. ಬೆಂಗಳೂರಿನ ಗಲ್ಲಿಗಲ್ಲಿಯಲ್ಲಿಯೂ ಕಸಗಳ ರಾಶಿ ಕಾಣಬಹುದು. ಒಂದು ಸಣ್ಣ ಜಾಗ ಖಾಲಿ ಇದ್ದರೆ ಸಾಕು, ಅದು ಕಸ ಹಾಕುವ ಜಾಗವಾಗಿ ಜನ ಮಾರ್ಪಾಡು ಮಾಡಿಕೊಳ್ಳುತ್ತಾರೆ.

ತ್ಯಾಜ್ಯ ವಿಲೇವಾರಿಗೆಂದೇ ಕಾರ್ಮಿಕರನ್ನು ಆಯೋಜಿಸಿ ಮನೆ ಮನೆಗೂ ಗಾಡಿಗಳು ಬಂದರು ಸರಿಯಾಗಿ ಕಸ ನೀಡುತ್ತಿಲ್ಲ ಎನ್ನುವ ದೂರು ಕೂಡ ಕೇಳಿ ಬರುತ್ತಿದೆ. ಅದರಲ್ಲೂ ಒಣ ಕಸ, ಹಸಿ ಕಸ ಎಲ್ಲಾ ಒಟ್ಟಾಗಿ ನೀಡುವುದು, ಈ ತರ ಹಲವು ಸಮಸ್ಯೆಗಳಿವೆ. ಇನ್ನು ಈ ವಿಚಾರವಾಗಿ ಇನ್ನೊಂದು ನಿಯಮ ಜಾರಿಗೆ ಬಂದಿದೆ. 

Waste Disposal Charge
Image Credit: Theguardian

ತ್ಯಾಜ್ಯ ವಿಲೇವಾರಿಗೆ ಶುಲ್ಕ ವಿಧಿಸಲಾಗುವುದು

ಕಸ ಸಂಗ್ರಹಣೆ ಮತ್ತು ವಿಲೇವಾರಿಗೆ ಸಂಬಂಧಿಸಿದಂತೆ ನಾಗರಿಕರು ಇನ್ನು ಮುಂದೆ ಶುಲ್ಕ ಕಟ್ಟಬೇಕಾಗುತ್ತದೆ. ಸಿಲಿಕಾನ್ ಸಿಟಿಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಶುಲ್ಕ ವಿಧಿಸಲು ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ. ಈ ಪ್ರಸ್ತಾವನೆಗೆ ರಾಜ್ಯ ಸರ್ಕಾರದಿಂದ ಅನುಮೋದನೆ ದೊರೆತರೆ ಕಸ ಸಂಗ್ರಹಣೆ ಮತ್ತು ವಿಲೇವಾರಿಗೆ ನಾಗರಿಕರು ಪ್ರತಿ ತಿಂಗಳು 30 ರೂ. ಪಾವತಿಸಬೇಕು.ಮನೆ ಹಾಗೂ ವಾಣಿಜ್ಯ ಕಟ್ಟಡಗಳಲ್ಲಿ ಮಾಸಿಕ ವಿದ್ಯುತ್‌ ಬಳಕೆಯ ಆಧಾರದ ಮೇಲೆ ಶುಲ್ಕ ವಿಧಿಸಲು ಬಿಬಿಎಂಪಿ ಚಿಂತನೆ ನಡೆಸಿದೆ. ಕಳೆದ ವಾರ ಶುಲ್ಕ ರಚನೆ ಅಂತಿಮಗೊಳಿಸಿ ಅನುಮತಿಗಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ತಿಳಿದು ಬಂದಿದೆ.

ತ್ಯಾಜ್ಯ ವಿಲೇವಾರಿಗೆ ಶುಲ್ಕ ವಿಧಿಸುವುದರಿಂದ ಕೋಟಿ ಆದಾಯ ಪಡೆಯಬಹುದು

ಆಸ್ತಿಗೆ ತೆರಿಗೆ ಆಧರಿಸಿ ಶುಲ್ಕ ಸಂಗ್ರಹಿಸುವ ಬದಲಿಗೆ, ವಿದ್ಯುತ್‌ ಬಳಕೆ ಪ್ರಮಾಣ ಆಧರಿಸಿಯೇ ಶುಲ್ಕ ನಿಗದಿಸಲು ಬಿಬಿಎಂಪಿ ಮುಂದಾಗಿದೆ. ಬೆಸ್ಕಾಂ ಸಿಬ್ಬಂದಿ ನೆರವು ಪಡೆಯುತ್ತಿರುವುದರಿಂದ ಬೆಸ್ಕಾಂಗೆ ನಿರ್ದಿಷ್ಟ ಶುಲ್ಕ ಪಾವತಿಸಲಾಗುವುದು ಎಂದು ಮೂಲಗಳು ಹೇಳಿವೆ. ಈ ಪ್ರಸ್ತಾವಿತ ಯೋಜನೆ ವ್ಯಾಪ್ತಿಗೆ 46 ಲಕ್ಷ ಮನೆಗಳು ಬರುತ್ತವೆ. ಅಂದಾಜು 6.32 ಲಕ್ಷ ವಾಣಿಜ್ಯ ಕಟ್ಟಡಗಳು ಶುಲ್ಕದ ವ್ಯಾಪ್ತಿಗೆ ಬರಲಿದ್ದು, ತಿಂಗಳಿಗೆ ₹ 72.39 ಕೋಟಿ ಆದಾಯದ ನಿರೀಕ್ಷೆ ಇದೆ.

Waste Disposal Charges In Bengaluru
Image Credit: The News Minute

ಮೀಟರ್‌ ರೀಡರ್‌ಗಳನ್ನು ಬಳಸಿಕೊಂಡು ಶುಲ್ಕ ಸಂಗ್ರಹಿಸಲಾಗುವುದು

ಶುಲ್ಕ ನಿಗದಿ ಸಂಬಂಧ ಕಳೆದ ವಾರ ಬಿಬಿಎಂಪಿಯ ಘನತ್ಯಾಜ್ಯ ವಿಲೇವಾರಿ ಘಟಕದ ಅಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿತ್ತು. ಘನತ್ಯಾಜ್ಯ ನಿರ್ವಹಣಾ ತಜ್ಞರಾದ ಪಿಂಕಿ ಚಂದ್ರನ್ ಮಾತನಾಡಿ ನಗರದಲ್ಲಿ ಘನ ತ್ಯಾಜ್ಯ ನಿರ್ವಹಣೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಮೂಲದಲ್ಲಿಯೇ ಹಸಿ ಹಾಗೂ ಒಣ ಕಸವನ್ನು ಬೇರ್ಪಡಿಸುವ ಕೆಲಸ ಆಗಬೇಕಿದೆ.

ಎಷ್ಟು ಬಾರಿ ಮನವಿ ಮಾಡಿದ್ದರೂ ಕಸ ಬೇರ್ಪಡಿಸಿ ಹಾಕುತ್ತಿಲ್ಲ. ಕಸ ಸಂಗ್ರಹಣೆಯಲ್ಲಿ ಪ್ರತಿ ಪ್ರದೇಶಕ್ಕೂ ವಿಭಿನ್ನ ಸಮಸ್ಯೆಗಳಿವೆ’ ಎಂದು ತಿಳಿಸಿದ್ದಾರೆ. ಹಾಗು ಬೆಸ್ಕಾಂ ಮೀಟರ್‌ ರೀಡರ್‌ಗಳನ್ನು ಬಳಸಿಕೊಂಡು ಶುಲ್ಕ ಸಂಗ್ರಹಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕರಡು ಯೋಜನೆಯ ಪ್ರಕಾರ, ತ್ಯಾಜ್ಯ ಉತ್ಪಾದನೆ ಆಧರಿಸಿ ಪ್ರತಿ ಮನೆಗೆ ತಿಂಗಳಿಗೆ ₹30 ರಿಂದ ₹500ರವರೆಗೆ ಹಾಗೂ ವಾಣಿಜ್ಯ ಕಟ್ಟಡಗಳಿಗೆ ₹75 ರಿಂದ ₹1,200ರ ಶುಲ್ಕ ನಿಗದಿಪಡಿಸುವುದಾಗಿ ಪ್ರಸ್ತಾವನೆಯಲ್ಲಿ ಉಲ್ಲೇಖಿಸಲಾಗಿದೆ.

Leave A Reply

Your email address will not be published.