Whatsapp: ವಾಟ್ಸಾಪ್ ನಲ್ಲಿ ಬೇರೆಯವರು ನಮ್ಮನ್ನು ಬ್ಲಾಕ್ ಮಾಡಿರುವುದರ ಬಗ್ಗೆ ತಿಳಿಯುವುದು ಹೇಗೆ, ಇಲ್ಲಿದೆ ಡೀಟೇಲ್ಸ್.
ಬೇರೆಯವರ ವಾಟ್ಸಾಪ್ ನಲ್ಲಿ ನಾವು ಬ್ಲಾಕ್ ಆಗಿದ್ದೇವಾ ಎಂದು ತಿಳಿಯಲು ಈ ರೀತಿ ಮಾಡಿ.
WhatsApp Account Block: ದೇಶದಲ್ಲಿ ವಾಟ್ಸಾಪ್ (WhatsApp) ಬಳಕೆದಾರರ ಸಂಖ್ಯೆ ಹೆಚ್ಚಾಗೇ ಇದೆ. ವಾಟ್ಸಾಪ್ ದಿನದಿಂದ ದಿನಕ್ಕೆ ಅಪ್ಡೇಟ್ ಕಡೆ ಸಾಗುತ್ತಿದ್ದು, ಗ್ರಾಹಕರ ಅನುಕೂಲಕ್ಕಾಗಿ ಹಾಗು ಅವರ ಸುರಕ್ಷತೆಗಾಗಿ ಮೆಟಾ-ಮಾಲೀಕತ್ವದ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ಆಧ್ಯತೆ ಹೊಂದಿದೆ. ನಮ್ಮ ಕಾಂಟೆಕ್ಟ್ ನಲ್ಲಿರುವ ವ್ಯಕ್ತಿಯನ್ನು ನಾವು ಬ್ಲಾಕ್ ಮಾಡುವ ಮೂಲಕ ಫೋನ್ ಕರೆ, ಸಂದೇಶ , ಫೋಟೋ, ವಿಡಿಯೋಗಳು ನಮ್ಮಿಂದ ಅವರಿಗೆ ಹೋಗದಂತೆ ಅಥವಾ ಅವರಿಂದ ನಮಗೆ ಬರದಂತೆ ತಡೆಗಟ್ಟಬಹುದಾಗಿದೆ.

WhatsApp ನಲ್ಲಿ ನಮ್ಮನ್ನು ಯಾರಾದರು ಬ್ಲಾಕ್ ಮಾಡಿದ್ದರೆಂದು ತಿಳಿಯುವ ವಿಧಾನ
ಯಾವುದೇ ಕರೆಗಳು ಕನೆಕ್ಟ್ ಆಗುವುದಿಲ್ಲ
ನಾವು ಯಾರಿಗಾದರೂ WhatsApp ನಲ್ಲಿ ಪದೇ ಪದೇ ಕರೆ ಮಾಡಿದರು ಕಾಲ್ ಕನೆಕ್ಟ್ ಆಗುತ್ತಿಲ್ಲ ಅಂತಾದರೆ ನಾವು ಬ್ಲಾಕ್ ಆಗಿದ್ದೀವಿ ಎಂದರ್ಥ. ಸಾಮಾನ್ಯ ಕೆರೆ, ವಿಡಿಯೋ ಕರೆ ಯಾವುದು ಕೂಡ ಬ್ಲಾಕ್ ಮಾಡಿದ ನಂಬರ್ ನಿಂದ ಬರುವುದಿಲ್ಲ.
ಮೆಸೇಜ್ ಸೆಂಡ್ ಆಗುವುದಿಲ್ಲ
ಸಾಮಾನ್ಯವಾಗಿ ವಾಟ್ಸಾಪ್ ನಲ್ಲಿ ಕಳುಹಿಸಿದ ಸಂದೇಶ ನಮ್ಮಿಂದ ಸೆಂಡ್ ಆದಾಗ ಸಿಂಗಲ್ ಟಿಕ್ ಬರುತ್ತದೆ. ಸಂದೇಶ ಪಡೆದವರು ಆ ಸಂದೇಶವನ್ನು ಓದಿದರೆ ಡಬಲ್ ಟಿಕ್ ಬರುತ್ತದೆ. ಆದ್ರೆ ಬ್ಲಾಕ್ ಮಾಡಿದ ನಂಬರ್ ನಿಂದ ಮೆಸೇಜ್ ಕಳುಹಿಸಿದರೆ ಕೇವಲ ಸಿಂಗಲ್ ಟಿಕ್ ಮಾತ್ರ ಬರುತ್ತದೆ. ಅವಾಗ ನಮ್ಮ ನಂಬರ್ ಬ್ಲಾಕ್ ಆಗಿರುವ ಬಗ್ಗೆ ನಾವು ತಿಳಿಯಬಹುದು.

ವಾಟ್ಸಾಪ್ ಪ್ರೊಫೈಲ್ ಪಿಕ್ಚರ್ ಅಪ್ಡೇಟ್ ಗಳು ಇರುವುದಿಲ್ಲ
WhatsApp ನಲ್ಲಿ ಯಾವಾಗಲು ಪ್ರೊಫೈಲ್ ಪಿಕ್ಚರ್ ಅಪ್ಡೇಟ್ ಮಾಡುತ್ತಲೇ ಇರುತ್ತೇವೆ ಒಂದೊಮ್ಮೆ ಬಹಳ ಸಮಯದವರೆಗೂ ಪ್ರೊಫೈಲ್ ಪಿಕ್ಚರ್ ಅಪ್ಡೇಟ್ಗಳ ಅನುಪಸ್ಥಿತಿಯಿಂದ ನಿಮ್ಮನ್ನು ಯಾರಾದರೂ ನಿರ್ಬಂಧಿಸಿದ್ದಾರೆ ಎಂದು ಸೂಚಿಸಬಹುದು.
ಲಾಸ್ಟ ಸೀನ್ ಸ್ಟೇಟಸ್ ಶೋ ಆಗುವುದಿಲ್ಲ
WhatsApp ನ ಲಾಸ್ಟ ಸೀನ್ ಸ್ಟೇಟಸ್ ಶೋ ಆಗುತ್ತಿಲ್ಲವೆಂದರೆ ಆ ನಂಬರ್ ನಿಂದ ನಾವು ಬ್ಲಾಕ್ ಆಗಿದ್ದೇವೆ ಎನ್ನುವುದು ಖಚಿತ ಆಗಿರುತ್ತದೆ. ಈ ರೀತಿಯಾಗಿ ನಾವು ಬ್ಲಾಕ್ ಆಗಿರುವ ಕುರಿತು ತಿಳಿದುಕೊಳ್ಳ ಬಹುದಾಗಿದೆ.