Whatsapp: ಆಗಸ್ಟ್ ತಿಂಗಳಲ್ಲಿ 65 ಲಕ್ಷ Whatsapp ಖಾತೆಗಳು ನಿಷೇಧ, ಕಾರಣ ಇಲ್ಲಿದೆ!
Whatsapp ಬಳಕೆದಾರರೆ Whatsapp ಖಾತೆಗಳು ನಿಷೇಧವಾಗಲಿದೆ ಎಚ್ಚರ,
Whatsapp Accounts Ban: Whatsapp mesenger app ಯಾರಿಗೆ ಗೊತ್ತಿಲ್ಲ ಹೇಳಿ, ಮೊಬೈಲ್ ಬಳಸುವ ಪ್ರತಿಯೊಬ್ಬ ವ್ಯಕ್ತಿಯು Whatsapp ಅನ್ನು ಉಪಯೋಗಿಸುತ್ತಾನೆ. Whatsapp ತುಂಬಾ ಚೆನ್ನಾಗಿರುವ ಅಪ್ಲಿಕೇಶನ್ ಆಗಿದ್ದು, ಬಹಳ ವರ್ಷಗಳಿಂದ ಜನರ ನೆಚ್ಚಿನ app ಆಗಿದೆ.
ಈ app ಬಹಳ ಉಪಯುಕ್ತ ಹಾಗು ಸುರಕ್ಷಿತವಾಗಿದೆ. ಈ appನಿಂದ ಯಾವುದೇ ವಂಚನೆ ಸಾಧ್ಯವಿಲ್ಲ. ಅಷ್ಟೇ ಅಲ್ಲದೆ whatsapp ಈಗ ನವೀಕರಣದೊಂದಿದೆ ಹೆಚ್ಚಿನ ಯೋಜನೆಯನ್ನು ಹೊಂದಿದೆ ಆದ್ದರಿಂದ ಪ್ರತಿಯೊಬ್ಬರು ಈ app ಅನ್ನು ಉಪಯೋಗಿಸುತ್ತಾರೆ.

whatsapp ಖಾತೆಗಳ ನಿಷೇಧ
2021 ರ ಹೊಸ ಐಟಿ ನಿಯಮಗಳ ಅನುಸಾರ ಮೆಟಾ ಒಡೆತನದ whatsapp ಆಗಸ್ಟ್ ತಿಂಗಳಲ್ಲಿ 65 ಲಕ್ಷ ಅನಗತ್ಯ ಖಾತೆಗಳನ್ನು ನಿಷೇಧಿಸಿದೆ ಎಂದು ಸ್ವತಃ ವಾಟ್ಸ್ ಆಪ್ ಈ ಬಗ್ಗೆ ಮಾಹಿತಿ ನೀಡಿರುತ್ತದೆ. ಕೆಲವು ಅನಗತ್ಯ ಖಾತೆಗಳು ವಂಚನೆಗೆ ಕಾರಣವಾಗಬಹುದೆಂಬ ಅಂಶ ಗಮನಿಸಿದ whatsapp ಅವುಗಳನ್ನು ನಿಷೇಧಿಸಿದೆ.
ಆಗಸ್ಟ್ ತಿಂಗಳಲ್ಲಿ ನಿಷೇಧಗೊಂಡಿರುವ ವಾಟ್ಸ್ ಆಪ್ ಖಾತೆಗಳ ಪೈಕಿ 2,420,700 ಖಾತೆಗಳನ್ನು ಗ್ರಾಹಕರಿಂದ ವರದಿಯಾಗುವುದಕ್ಕೂ ಮುನ್ನ ಸ್ವಯಂ ಪ್ರೇರಿತವಾಗಿ ನಿರ್ಬಂಧಿಸಲಾಗಿದೆ. ಜುಲೈ ತಿಂಗಳಿನಲ್ಲಿ ವಾಟ್ಸ್ ಆಪ್ ಭಾರತದಲ್ಲಿ 500 ಮಿಲಿಯನ್ ಗ್ರಾಹಕರನ್ನು ಹೊಂದಿತ್ತು. ಈ ವರೆಗೂ 74 ಲಕ್ಷ ಅನಗತ್ಯ ಖಾತೆಗಳನ್ನು ನಿಷೇಧಿಸಲಾಗಿದೆ.

ನಿಷೇಧ ಮನವಿಗಳ ಅನ್ವಯ
whatsapp ಕೆಲವು ನಿರ್ದಿಷ್ಟ ಕಾರಣಗಳಿಂದಾಗಿ ಕೆಲವು ಖಾತೆಗಳನ್ನು ನಿರ್ಬಂಧಿಸಿದೆ. ಆಗಸ್ಟ್ ತಿಂಗಳಲ್ಲಿ 3,912 ಕುಂದುಕೊರತೆ ವರದಿಗಳು ಹಾಗು ಕೆಲವು ನಿಷೇಧ ಮನವಿಗಳು ಬಂದಿರುತ್ತದೆ, ಈ ಪೈಕಿ 297 ಅರ್ಜಿಗಳ ಕುರಿತು ಕ್ರಮ ಕೈಗೊಳ್ಳಲಾಗಿದೆ ಎಂದು ವಾಟ್ಸ್ ಆಪ್ ಹೇಳಿದೆ. whatsapp ಕೆಲವು ಅನಗತ್ಯವಾಗಿರುವ ಖಾತೆಗಳನ್ನು ನಿಷೇದಿಸುದರ ಮೂಲಕ ಸುರಕ್ಷತೆಯನ್ನು ಕಾಯ್ದಿರಿಸಿದೆ.