SBI: ಇನ್ನುಮುಂದೆ ಬ್ಯಾಂಕಿಗೆ ಹೋಗುವ ಅಗತ್ಯ ಇಲ್ಲ, SBI ನಲ್ಲಿ ಖಾತೆ ಇದ್ದವರಿಗೆ ಹೊಸ ಸೇವೆ ಆರಂಭ.
SBI ನಲ್ಲಿ ಖಾತೆ ಇದ್ದವರಿಗೆ ಇಂದಿನಿಂದ ಹೊಸ ಸೇವೆ ಆರಂಭ.
State Bank Of India WhatsApp Service: State Bank Of India ಬ್ಯಾಂಕಿಂಗ್ ವ್ಯವಸ್ಥೆಯಲ್ಲೇ ಅಗ್ರ ಸ್ಥಾನದಲ್ಲಿದೆ. ಹಾಗೆ ಹೆಚ್ಚಿನ ಗ್ರಾಹಕರನ್ನು ಪಡೆದಿದೆ. ಎಸ್ಬಿಐ ತನ್ನ ಗ್ರಾಹಕರ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವುದರಲ್ಲಿ ಉನ್ನತ ಸ್ಥಾನದಲ್ಲಿದೆ. ತನ್ನ ಗ್ರಾಹಕರ ಅನುಕೂಲದ ಉದ್ದೇಶದಿಂದ ಈಗಾಗಲೇ ಹಲವು ಯೋಜನೆಯನ್ನ ಜಾರಿಗೆ ತಂದಿರುವ SBI ಈಗ ಮತ್ತೊಂದು ಸೇವೆಯನ್ನ ಗ್ರಾಹಕರಿಗೆ ನೀಡಲು ಮುಂದಾಗಿದೆ ಎಂದು ಹೇಳಬಹುದು.
ಗ್ರಾಹಕರ ವ್ಯವಹಾರಕ್ಕೆ ಅನುಕೂಲವಾಗುವಂತೆ SBI ಹಲವು ಸೇವೆಗಳನ್ನು ಒದಗಿಸಿದೆ. ಇದೀಗ SBI ಗ್ರಾಹಕರು ಸಣ್ಣಪುಟ್ಟ ವ್ಯವಹಾರಕ್ಕೂ ಬ್ಯಾಂಕ್ ಶಾಖೆಗೆ ಹೋಗುವ ಕೆಲಸ ಇಲ್ಲ. ಹಾಗಾದರೆ ನಾವೀಗ SBI ನ ಈ ಹೊಸ ಸೇವೆ ಯಾವುದೆಂದು ತಿಳಿದುಕೊಳ್ಳೋಣ.
ಗ್ರಾಹಕರಿಗೆ ಹಲವು ಸೇವೆ ಒದಗಿಸುತ್ತಿರುವ SBI
ಇನ್ನಿತರ ಬ್ಯಾಂಕ್ ಗಳಿಗೆ ಹೋಲಿಸಿದರೆ SBI ತನ್ನ ಗ್ರಾಹಕರ ಉಪಯೋಗಕ್ಕಾಗಿ ಅನೇಕ ಸ್ಕೀಮ್ ಗಳನ್ನು ಹೊಂದಿದೆ. ಇಂದಿನ ಜನಸಾಮಾನ್ಯರು ತಮ್ಮದೇ ಕೆಲಸದಲ್ಲಿ ಬ್ಯುಸಿ ಇರುತ್ತಾರೆ. ಪ್ರತಿ ಕೆಲಸಕ್ಕೂ ಬ್ಯಾಂಕ್ ಗೆ ಬರಲು ಸಾಧ್ಯವಾಗುವುದಿಲ್ಲ. ಹಾಗಾಗಿ ಈಗಾಗಲೇ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಮೊಬೈಲ್ ಬ್ಯಾಂಕಿಂಗ್, ಇಂಟರ್ನೆಟ್ ಬ್ಯಾಂಕಿಂಗ್, ಎಸ್ಎಂಎಸ್ ಬ್ಯಾಂಕಿಂಗ್ ಸೇವೆಗಳನ್ನು ಪರಿಚಯಿಸಿದೆ. ಅಷ್ಟೇ ಅಲ್ಲದೇ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಇಲ್ಲದೆಯೂ ಎಟಿಎಂನಲ್ಲಿ SBI ಗ್ರಾಹಕರು ಯೋನೋ ಆಪ್ ಬಳಸಿ ಹಣವನ್ನು ಪಡೆಯಬಹುದಾಗಿದೆ.
ಹೊಸ ಸೇವೆ ಆರಂಬಹಿಸಿದ ಸ್ಟೇಟ್ ಬ್ಯಾಂಕ್ State Bank Of India New Service
ತಂತ್ರಜ್ಞಾನ ಹೆಚ್ಚಾದಂತೆ ಜನ ಸಾಮಾನ್ಯರು ಬ್ಯುಸಿ ಆಗುತ್ತಿದ್ದಾರೆ, ಅಂದರೆ ನಾವು ಇದ್ದ ಕಡೆಯೇ ಅತಿ ವೇಗವಾಗಿ ಕೆಲಸವಾಗಬೇಕು ಯಾರಿಗೂ ಕೊಡ ಸ್ವಲ್ಪವು ಕಾಯುವ ತಾಳ್ಮೆ ಇರುವುದಿಲ್ಲ ಹಾಗಾಗಿ SBI Whatsapp Banking Service ಪ್ರಾರಂಭಿಸಿದೆ.
ಈ ಸೇವೆ ಪಡೆಯಲು ಮೊಬೈಲ್ ನಲ್ಲಿ ವಾಟ್ಸಪ್ app ಇದ್ದರೆ ಸಾಕು, ಇವಾಗಂತೂ ವಾಟ್ಸಪ್ ಅನ್ನು ಎಲ್ಲರೂ ಉಪಯೋಗಿಸುತ್ತಿದ್ದಾರೆ ಇದನ್ನು ಗಮನದಲ್ಲಿ ಇಟ್ಟುಕೊಂಡ SBI ತನ್ನ ಗ್ರಾಹಕರಿಗೆ ಬ್ಯಾಂಕಿಂಗ್ ಸೇವೆ ಇನ್ನಷ್ಟು ಸುಲಭವಾಗಲಿ ಅನ್ನೋ ಕಾರಣಕ್ಕೆ SBI WhatsApp Banking ಸೇವೆಯನ್ನು ಒದಗಿಸಿದೆ.
SBI WhatsApp Banking Service
ಬ್ಯಾಂಕ್ ಗ್ರಾಹಕರಿಗೆ ಹಣದ ವ್ಯವಹಾರದಲ್ಲಿ ಯಾವುದೇ ಮೋಸ ಆಗಬಾರದು ಎಂಬ ನಿಟ್ಟಿನಲ್ಲಿWhatsApp Banking ಸೇವೆಯನ್ನು SBI ಜಾರಿಗೆ ತಂದಿದೆ. ಅತ್ಯಂತ ಸುಲಭವಾಗಿರುವ ಈ ತಂತ್ರಜ್ಞಾನವನ್ನು ಬಳಸಬಹುದಾಗಿದೆ. ಬ್ಯಾಂಕ್ ಗ್ರಾಹಕರು ತಮ್ಮ ಮೊಬೈಲ್ನಿಂದ QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ whatsapp ಮೂಲಕ Banking ಸೇವೆಗಳನ್ನು ಪಡೆಯಲು ಸಾಧ್ಯವಾಗುತ್ತದೆ.
ಅಂದರೆ ಎಸ್ಬಿಐ ವಾಟ್ಸಪ್ ಬ್ಯಾಂಕಿಂಗ್ ಸೇವೆಯೊಂದಿಗೆ ಬ್ಯಾಂಕ್ ಖಾತೆಯನ್ನು ನೋಂದಾಯಿಸಲು, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ WAREG A/C ಸಂಖ್ಯೆ (917208933148) ಗೆ SMS ಕಳುಹಿಸಬೇಕು. ನೋಂದಣಿ ಪೂರ್ಣಗೊಂಡ ನಂತರ, ನೀವು ಎಸ್ಬಿಐನ ವಾಟ್ಸಪ್ ಸೇವೆಯನ್ನು ಬಳಸಲು ಸಾಧ್ಯವಾಗುತ್ತದೆ.
ನಂತರ ವಾಟ್ಸಪ್ನಲ್ಲಿ ಹಾಯ್ ಎಂದು ಕಳುಹಿಸಿ (+909022690226). ಈ ಪಾಪ್ ಅಪ್ ಸಂದೇಶವು ತೆರೆಯುತ್ತದೆ. ಇದರ ನಂತರ ನಿಮಗೆ ಖಾತೆಯ ಬ್ಯಾಲೆನ್ಸ್, ಮಿನಿ ಸ್ಟೇಟ್ಮೆಂಟ್, ಡಿ-ರಿಜಿಸ್ಟರ್ ವಾಟ್ಸಪ್ ಬ್ಯಾಂಕಿಂಗ್ ಆಯ್ಕೆಯನ್ನು ನೀಡಲಾಗುತ್ತದೆ. ನಿಮ್ಮ ಖಾತೆಯ ಬ್ಯಾಲೆನ್ಸ್ ಅನ್ನು ಪರಿಶೀಲಿಸಲು ಟೈಪ್ 1 ಮತ್ತು ಮಿನಿ ಸ್ಟೇಟ್ಮೆಂಟ್ ಟೈಪ್ 2 ಆಗಿರುತ್ತದೆ.
Whatsapp Banking Service Benefits
ಹೌದು State Bank Of India ಬ್ಯಾಂಕಿಂಗ್ app ಅನ್ನು ಉಪಯೋಗಿಸುವುದರಿಂದ ಹಲವು ಪ್ರಯೋಜನಗಳಿವೆ ಅವುಗಳಲ್ಲಿ ಮೊದಲನೆಯದು ಪಿಂಚಣಿ ಚೀಟಿಯಾ ಬಗ್ಗೆ ತಿಳಿಯಬಹುದು ಹಾಗು ಇನ್ನಿತರ ಸಾಲದ ಮಾಹಿತಿ ಮತ್ತು ಇತರ ಹಲವು ಬ್ಯಾಂಕಿಂಗ್ ಸೇವೆಗಳು ಬಗ್ಗೆ Whatsapp ನಲ್ಲಿ ಲಭ್ಯವಿದೆ.
ಠೇವಣಿ ಮಾಹಿತಿ, NRI Service, Debit Card ಬಳಕೆಯ ವಿವರಗಳು ಹಾಗು ಮುಖ್ಯವಾಗಿ ಅಪ್ಲಿಕೇಶನ್ನಲ್ಲಿ ATM ಮತ್ತು ಶಾಖೆಯನ್ನು ಹುಡುಕಲು ಸಾಧ್ಯವಾಗುತ್ತದೆ. ಈ ಎಲ್ಲ ರೀತಿಯ ಪ್ರಯೋಜನಗಳಿಗಾಗಿ SBI WhatsApp Banking Service ಉಪಯುಕ್ತವಾಗಿದೆ.