WhatsApp: ವಾಟ್ಸಾಪ್ ಬಳಸುವವರಿಗೆ ಐತಿಹಾಸಿಕ ಅಪ್ಡೇಟ್ ಬಿಡುಗಡೆ, ಈಗಲೇ ಅಪ್ಡೇಟ್ ಮಾಡಿಕೊಳ್ಳಿ ನಿಮ್ಮ ವಾಟ್ಸಾಪ್.

ಆಕರ್ಷಕ ಫೀಚರ್ ಬಿಡುಗಡೆ ಮಾಡಿದ Whatsapp.

WhatsApp HD Video Feature Update: WhatsApp ಮೊಬೈಲ್ ಬಳಸುವ ಪ್ರತಿಯೊಬ್ಬರಿಗೂ ಗೂತ್ತು. ಯಾಕೆಂದರೆ ಜನಪ್ರಿಯತೆ ಹೊಂದಿರುವ App ಗಳಲ್ಲಿ WhatsApp ಅಗ್ರಸ್ಥಾನದಲ್ಲಿದೆ. ಈ App ನಲ್ಲಿ ಅನೇಕ ಆಯ್ಕೆಗಳಿದ್ದು ಹೊಸದಾಗಿ ಇತ್ತೀಚಿಗೆ ಫೋಟೋವನ್ನು HD ಯಲ್ಲಿ ಕಳುಹಿಸುವ ಆಯ್ಕೆ ನೀಡಿಲಾಗಿತ್ತು, ಹಾಗೆ ಕೆಲವೇ ದಿನಗಳಲ್ಲಿ ಇದೀಗ ವಿಡಿಯೋವನ್ನು ಕೂಡ ಹೈ-ಕ್ವಾಲಿಟಿಯಲ್ಲಿ ಕಳುಹಿಸುವ ಆಯ್ಕೆ ನೀಡಿದೆ.

ಈ ವಿಶೇಷ ಫೀಚರ್ ಸದ್ಯ ಎಲ್ಲ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಲೈಕ್ ಆಗಿದೆ. WhatsApp ಬಳಕೆದಾರರಿಗೆ ಈಗ HD ನಲ್ಲಿ ವಿಡಿಯೋಗಳನ್ನು ಹಂಚಿಕೊಳ್ಳಬಹುದಾದ ಆಯ್ಕೆಯನ್ನು ಮೆಟಾ ನೀಡಿದೆ. ಇದೀಗ ಬಳಕೆದಾರರು ಇತರರೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಬೇಕಾದರೆ ಗೂಗಲ್ ಡಾಕ್ಸ್ ಲಿಂಕ್‌ಗಳು ಅಥವಾ ಇತರ ಟ್ರಾಸ್ಫರ್ ಸೇವೆಗಳನ್ನು ಅವಲಂಬಿಸುವ ಅಗತ್ಯವಿಲ್ಲ.

WhatsApp HD Video Feature
Image Credit: Firstpost

WhatsApp HD ವಿಡಿಯೋವನ್ನು ಕಳುಹಿಸುವ ವಿಧಾನ

ಮೊದಲನೇದಾಗಿ ​WhatsAppನಲ್ಲಿ Chat Option ತೆರೆಯಬೇಕು ಮತ್ತು ಅಟ್ಯಾಚ್​ಮೆಂಟ್ ಐಕಾನ್ > ಗ್ಯಾಲರಿ ಮೇಲೆ ಟ್ಯಾಪ್ ಮಾಡಿ. ನೀವು ಕಳುಹಿಸಲು ಬಯಸುವ ವಿಡಿಯೋವನ್ನು ಆಯ್ಕೆ ಮಾಡಿ ಮತ್ತು Preview ನೋಡಲು ಅದರ ಮೇಲೆ ಟ್ಯಾಪ್ ಮಾಡಿ. ಪರದೆಯ ಮೇಲ್ಭಾಗದಲ್ಲಿ ಸ್ಟಿಕ್ಕರ್, ಪಠ್ಯ ಮತ್ತು ಡ್ರಾಯಿಂಗ್ ಐಕಾನ್‌ಗಳ ಎಡಭಾಗದಲ್ಲಿ HD ಐಕಾನ್ ಕಾಣಿಸುತ್ತದೆ.

HD ಗುಣಮಟ್ಟವನ್ನು ಆಯ್ಕೆಮಾಡಿ ಮತ್ತು ಹೆಚ್ಚಿದ ಫೈಲ್ ಗಾತ್ರವನ್ನು ಗಮನಿಸಿ, ನಂತರ ಡನ್ ಟ್ಯಾಪ್ ಮಾಡಿ. ವಿಡಿಯೋದಲ್ಲಿ ಏನಾದರು ಬದಲಾವಣೆಗಳು ಅಥವಾ ಎಡಿಟ್ ಮಾಡಿದ ನಂತರ ಕೆಳಗಿನ ಬಲ ಮೂಲೆಯಲ್ಲಿರುವ Send ಬಟನ್ ಅನ್ನು ಟ್ಯಾಪ್ ಮಾಡಿ.

ಈ ಫೀಚರ್​ನ ಮತ್ತೊಂದು ವಿಶೇಷತೆ ಎಂದರೆ, ಹೆಚ್​ಡಿಯಲ್ಲಿ ಬಂದ ವಿಡಿಯೋವನ್ನು ಬಳಕೆದಾರರು ಡೌನ್‌ಲೋಡ್ ಮಾಡುವಾಗ ರೆಸಲ್ಯೂಶನ್ ಅನ್ನು ಕೂಡ ಆಯ್ಕೆ ಮಾಡಬಹುದು. HD ಯಲ್ಲಿ ವಿಡಿಯೋ ಮತ್ತು ಫೋಟೋ ಶೇರ್ ಆಯ್ಕೆ WhatsApp ವೆಬ್ ಆವೃತ್ತಿಯಲ್ಲಿ ಇನ್ನಷ್ಟೆ ಬರಬೇಕಿದೆ. ಆದಾಗ್ಯೂ, ಬಳಕೆದಾರರು ವೆಬ್ ಆವೃತ್ತಿಯ ಮೂಲಕ HD ಫೈಲ್‌ಗಳನ್ನು ಸ್ವೀಕರಿಸಬಹುದು ಮತ್ತು ಡೌನ್‌ಲೋಡ್ ಮಾಡಬಹುದು.

WhatsApp HD Video Feature
Image Credit: Jagrantv

ಆಕರ್ಷಕ ಫೀಚರ್ ನೊಂದಿಗೆ ​WhatsApp 
ಈ ವರ್ಷ ಒಂಧರ ಹಿಂದೆ ಒಂದರಂತೆ ಆಕರ್ಷಕ ಫೀಚರ್​ಗಳನ್ನು ನೀಡುತ್ತಿರುವ ​WhatsApp HD ಯಲ್ಲಿ ಫೋಟೋ-ವಿಡಿಯೋ ಹಂಚಿಕೊಳ್ಳಲು ಆಯ್ಕೆಯ ಜೊತೆಗೆ ಈ ವರ್ಷ ಬಹು-ಫೋನ್ ಸಂಪರ್ಕ ಆಯ್ಕೆಯನ್ನು ಹೊರತಂದಿತ್ತು. ಹೆಚ್ಚು ಬೇಡಿಕೆಯಿರುವ ಈ ವೈಶಿಷ್ಟ್ಯವು ಬಳಕೆದಾರರಿಗೆ ಒಂದೇ​ WhatsApp ಖಾತೆಯನ್ನು ವಿವಿಧ ಸ್ಮಾರ್ಟ್‌ಫೋನ್‌ಗಳಲ್ಲಿ ಏಕಕಾಲದಲ್ಲಿ ಬಳಸಲು ಅನುಮತಿಸುತ್ತದೆ.

Leave A Reply

Your email address will not be published.