Whatsapp Update: ವಾಟ್ಸಾಪ್ ನಲ್ಲಿ ಕಾರೆಮಾಡಲು ಇನ್ನುಮುಂದೆ ಮೊಬೈಲ್ ಸಂಖ್ಯೆ ಅಗತ್ಯ ಇಲ್ಲ, ಬಂತು ಹೊಸ ಫೀಚರ್.

ವಾಟ್ಸಾಪ್‌ನಲ್ಲಿ ಹೊಸ ಫೀಚರ್ಸ್‌, ಇನ್ಮುಂದೆ ಸಂಖ್ಯೆಯಿಂದಲ್ಲ ಹೆಸರಿನ ಮೂಲಕ ಕರೆ ಮಾಡಿ.

Whatsapp New Username Feature: ವಾಟ್ಸಾಪ್‌ ಇತೀಚಿನ ದಿನಗಳಲ್ಲಿ ಒಂದಾದ ಮೇಲೊಂದು ಫೀಚರ್ ಅನ್ನು ತನ್ನ ಬಳಕೆದಾರರಿಗೆ ಪರಿಚಯಿಸುತ್ತಿದೆ. ಈ ಫೀಚರ್ ಗಳು ಹಲವು ರೀತಿಯಲ್ಲಿ ಪ್ರಯೋಜನಗಳಿದ್ದು, ಗ್ರಾಹಕರ ಸುರಕ್ಷತೆಗೆ ಬಹಳ ಸಹಕಾರ ಆಗಲಿದೆ.

ಇಂದಿನ ದಿನಗಳಲ್ಲಿ ಯಾವುದೇ ವಿಷಯಗಳನ್ನು ಹಂಚಿಕೊಳ್ಳಬೇಕೆಂದರು ನೂರಾರು ಬಾರಿ ಯೋಚಿಸಬೇಕಾಗುತ್ತದೆ ಯಾಕೆಂದರೆ ನಾವು ಹೇಳಿದ ಕೆಲವು ವಿಷಯಗಳು ನಮಗೆ ಕಷ್ಟವನ್ನು ತಂದೊಡ್ಡುತ್ತದೆ ಹಾಗಾಗಿ ವಾಟ್ಸಾಪ್‌ (Whatsapp) ಈ ರೀತಿಯ ಸಮಸ್ಯೆಗಳಿಂದ ತನ್ನ ಗ್ರಾಹಕರನ್ನು ಮುಕ್ತಿ ಮಾಡಲು ಇನ್ಮುಂದೆ ನೀವು ಯಾರೇ ವಾಟ್ಸಾಪ್‌ ಬಳಕೆದಾರರ ಜೊತೆ ಸಂವಹನ ಮಾಡಬೇಕು ಎಂದರೆ ಫೋನ್ ನಂಬರ್‌ ಬದಲಿಗೆ ಹೆಸರಿನ ಮೂಲಕ ಸಂಪರ್ಕ ಮಾಡಬಹುದು.

Whatsapp New Username Feature
Whatsapp New Username Feature

ಹೆಸರನ್ನು (usernames) ಉಪಯೋಗಿಸಿ ಸಂಪರ್ಕ ಮಾಡಬಹುದು

ಹೆಚ್ಚಿನ ಭದ್ರತೆಯ ಫೀಚರ್ ಅನ್ನು ಒಳಗೊಂಡಿರುವ ಉತ್ತಮ app ಅಂದರೆ ಅದೇ ವಾಟ್ಸಾಪ್‌. ವಾಟ್ಸಾಪ್‌ ಮೂಲಕ ಬಳಕೆದಾರರು ಯಾವುದೇ ಭಯವಿಲ್ಲದೆ ಎಲ್ಲಾ ರೀತಿಯ ಖಾಸಗಿ ವಿಚಾರವನ್ನು ಇತರರೊಂದಿಗೆ ಹಂಚಿಕೊಳ್ಳಬಹುದು. ಬಳಕೆದಾರರು ಈವರೆಗೆ ವೈಯಕ್ತಿಕ ಫೋನ್ ಸಂಖ್ಯೆಯನ್ನು ಬಳಕೆ ಮಾಡಿಕೊಂಡು ವಾಟ್ಸಾಪ್‌ ನಲ್ಲಿ ಇತರರನ್ನು ಹುಡುಕುತ್ತಿದ್ದರು. ಆದರೆ, ಇನ್ಮುಂದೆ ಬಳಕೆದಾರರ ಹೆಸರನ್ನು (usernames) ಸರ್ಚ್‌ ಮಾಡುವ ಮೂಲಕ ಅವರೊಂದಿಗೆ ಸಂಪರ್ಕ ಸಾಧಿಸಬಹುದಾಗಿದೆ.

ಅಂದರೆ, ಸಂಖ್ಯೆ ಇಲ್ಲದೆಯೇ ಸ್ನೇಹಿತರು ಮತ್ತು ಇತರೆ ಸಂಪರ್ಕಗಳೊಂದಿಗೆ ಸಂಪರ್ಕ ಸಾಧಿಸಬಹುದು ಎಂದು Wabetainfo ವರದಿ ಮಾಡಿದೆ. ಈಗ ಪರಿಚಯಿಸಲಾಗುತ್ತಿರುವ ಹೊಸ ಫೀಚರ್ಸ್‌ ಇನ್ನಷ್ಟು ಹೆಚ್ಚಿನ ಭದ್ರತೆಯ ಭರವಸೆ ನೀಡುತ್ತದೆ.

ಈ ಫೀಚರ್ ಮೇಲೆ ಬಳಕೆದಾರರು ಸಂಪೂರ್ಣ ನಿಯಂತ್ರಣವನ್ನು ಹೊಂದಿರುತ್ತಾರೆ

ಕೆಲವು ವರದಿಯ ಪ್ರಕಾರ, ಬಳಕೆದಾರ ಹೆಸರನ್ನು ಯಾವುದೇ ಸಮಯದಲ್ಲಿ ರಚಿಸುವ, ತೆಗೆದುಹಾಕುವ ಅಥವಾ ಬದಲಾಯಿಸುವ ಆಯ್ಕೆಯನ್ನು ಹೊಂದಿರುತ್ತಾರೆ ಎನ್ನಲಾಗಿದೆ. ಈ ಮೂಲಕ ಈ ಫೀಚರ್ಸ್‌ ಮೇಲೆ ಬಳಕೆದಾರರಿಗೆ ಸಂಪೂರ್ಣ ನಿಯಂತ್ರಣವನ್ನು ನೀಡಲಾಗುತ್ತದೆ . ಇದರೊಂದಿಗೆ Wabetainfo ಹೊಸ ಫೀಚರ್ಸ್‌ನ ಸ್ಕ್ರೀನ್‌ಶಾಟ್ ಅನ್ನು ಶೇರ್‌ ಮಾಡಿಕೊಂಡಿದೆ.

ಇದು ನಿಮಗೆ ಹೆಸರು, ಬಳಕೆದಾರ ಹೆಸರು ಮತ್ತು ಫೋನ್ ಸಂಖ್ಯೆಯ ಮೂಲಕ ಜನರನ್ನು ಸರ್ಚ್‌ ಮಾಡಲು ಅನುಮತಿಸುತ್ತದೆ. ಈ ಮೂಲಕ ಯಾರೆಲ್ಲಾ ತಮ್ಮ ಫೋನ್ ಸಂಖ್ಯೆಯನ್ನು ಬಹಿರಂಗಪಡಿಸಲು ಇಷ್ಟಪಡುವುದಿಲ್ಲವೋ ಅವರು ಬಳಕೆದಾರ ಹೆಸರನ್ನು ಕ್ರಿಯೇಟ್‌ ಮಾಡಿ ಈ ಮೂಲಕ ಇತರರೊಂದಿಗೆ ಸಂಪರ್ಕದಲ್ಲಿ ಇರಬಹುದಾಗಿದೆ. ಬಳಕೆದಾರರು ತಮ್ಮ ಆದ್ಯತೆಗಳು ಮತ್ತು ಅಗತ್ಯಗಳಿಗೆ ಅನುಗುಣವಾಗಿ ಗೌಪ್ಯತೆ ಸೆಟ್ಟಿಂಗ್‌ಗಳನ್ನು ಸರಿಹೊಂದಿಸಬಹುದು ಎನ್ನುವುದನ್ನು ಈ ಮೂಲಕ ತಿಳಿಸಲಾಗಿದೆ.

Whatsapp Latest Updates
Image Credit: Outlookindia

ಇನ್ನೂ ಅಭಿವೃದ್ಧಿ ಹಂತದಲ್ಲಿರುವ ಫೀಚರ್

ಸರ್ಚ್‌ ಲಿಸ್ಟ್‌ನಲ್ಲಿ ಬಳಕೆದಾರರ ಹೆಸರನ್ನು ಸರ್ಚ್‌ ಮಾಡುವ ಫೀಚರ್ಸ್‌ ಇನ್ನೂ ಅಭಿವೃದ್ಧಿ ಹಂತದಲ್ಲಿದೆ. ಈ ಫೀಚರ್ಸ್‌ ವಾಟ್ಸಾಪ್‌ನ ಭವಿಷ್ಯದ ನವೀಕರಣದಲ್ಲಿ ಪರಿಚಯಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಹಾಗೆಯೇ ಆಂಡ್ರಾಯ್ಡ್‌ ಮತ್ತು ಐಓಎಸ್‌ ನಲ್ಲಿ ಯಾವುದಕ್ಕೆ ಈ ಸೇವೆ ಲಭ್ಯವಿರುತ್ತದೆ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ. ಈ ಬೆಳವಣಿಗೆ ನಡುವೆ ಕೆಲವು ದಿನಗಳ ಹಿಂದೆ ವಾಟ್ಸಾಪ್ ಸೀಕ್ರೆಟ್ ಕೋಡ್ ಫೀಚರ್ ಅನ್ನೂ ಸಹ ಪರಿಚಯಿಸಿದೆ.

ಈ ಫೀಚರ್ಸ್‌ ಲಾಕ್ ಮಾಡಲಾದ ವೈಯಕ್ತಿಕ ಚಾಟ್‌ಗಳನ್ನು ರಹಸ್ಯ ಕೋಡ್‌ನೊಂದಿಗೆ ಸ್ವಲ್ಪ ಹೆಚ್ಚು ಶಕ್ತಿಯುತವಾಗಿ ಮತ್ತು ಸುರಕ್ಷಿತವಾಗಿ ಮರೆಮಾಡಬಹುದಾಗಿದೆ.ಅಂದರೆ ಬೇರೆಯವರಿಗೆ ನಿಮ್ಮ ಫೋನ್‌ ಪಾಸ್‌ವರ್ಡ್‌ ಗೊತ್ತಿದ್ದರೂ ಸಹ ವಾಟ್ಸಾಪ್‌ಖಾಸಗಿ ಚಾಟ್‌ ಅನ್ನು ಓಪನ್‌ ಮಾಡಲು ಸಾಧ್ಯವಾಗುವುದಿಲ್ಲ. ಈಗಾಗಲೇ ಈ ಸೇವೆ ಎಲ್ಲಾ ಬಳಕೆದಾರರಿಗೆ ಲಭ್ಯ ಇದೆ.

ವಾಟ್ಸಾಪ್‌ ನ ಸರ್ಚ್ ಬಾರ್‌ನಲ್ಲಿ ಈ ರಹಸ್ಯ ಕೋಡ್ ಅನ್ನು ಸರಿಯಾಗಿ ನಮೂದಿಸುವ ಮೂಲಕ ಮಾತ್ರ ಲಾಕ್ ಆಗಿರುವ ಚಾಟ್‌ಗಳನ್ನು ನೀವು ವೀಕ್ಷಣೆ ಮಾಡಬಹುದಾಗಿದೆ. ಇತರ ಲಿಂಕ್ ಮಾಡಲಾದ ಡಿವೈಸ್‌ಗಳಲ್ಲಿನ ಚಾಟ್‌ಗಳನ್ನು ಸಹ ಈ ರೀತಿಯಲ್ಲಿ ಲಾಕ್ ಮಾಡಲು ವಾಟ್ಸಾಪ್‌ ಅನುಮತಿ ನೀಡಿದೆ.

Leave A Reply

Your email address will not be published.