WhatsApp: ಹಳೆಯ ಸಂದೇಶಗಳನ್ನ ಈಗ ಸುಲಭವಾಗಿ ಹುಡುಕಿ, ವಾಟ್ಸಾಪ್ ಬಳಸುವವರಿಗೆ ಹೊಸ ಫೀಚರ್.

ಇನ್ನುಮುಂದೆ Whatsapp ನಲ್ಲಿ ಎಷ್ಟು ಹಳೆಯ ಸಂದೇಶ ಆದರೂ ಬಹಳ ಸುಲಭವಾಗಿ ನೋಡಬಹುದಾಗಿದೆ.

WhatsApp Old Message Search Feature: ಈಗಿನ ಕಾಲದಲ್ಲಿ ಪ್ರತಿಯೊಬ್ಬರು ಸ್ಮಾರ್ಟ್ ಫೋನ್ ಅನ್ನು ಬಳಸುತ್ತಿದ್ದು, ಅಂತಹ ಸ್ಮಾರ್ಟ್ ಫೋನ್ ನಲ್ಲಿ Whatsaap ಬಳಕೆ ಮಾಡದೇ ಇರಲು ಸಾಧ್ಯವೇ ಇಲ್ಲ ಯಾಕೆಂದರೆ ವಾಟ್ಸಪ್ಪ್ ಈಗ ಕೇವಲ ಮೆಸೇಜಿಂಗ್ ಆಪ್ ಆಗಿರದೇ ಹಲವು ವೈಶಿಷ್ಟತೆಯೊಂದಿಗೆ ಅಪ್ಡೇಟ್ ಆಗಿದೆ.

ಹಾಗೆಯೆ WhatsApp ಈಗ ಹೊಸ ವೈಶಿಷ್ಟ್ಯವನ್ನು ತರುತ್ತಿದೆ. WhatsApp ನಲ್ಲಿ ಸಾಮನ್ಯವಾಗಿ ಹಳೆಯ ಸಂದೇಶಗಳ ಅವಶ್ಯಕತೆ ಇದ್ದಾಗ ಹುಡುಕಾಟ ಪ್ರಾರಂಭಿಸುತ್ತೇವೆ ಅದನ್ನು ಹುಡುಕಿ ತೆಗೆಯುವ ತನಕ ಸಾಕಾಗಿ ಹೋಗಿರುತ್ತದೆ. ಆದ್ರೆ ಇನ್ನು ಮುಂದೆ ಇಷ್ಟೆಲ್ಲ ಹುಡುಕುವ ಅವಶ್ಯಕತೆ ಇರುವುದಿಲ್ಲ ಬಹಳ ಸುಲಭವಾಗಿ ಹಳೆಯ ಸಂದೇಶವನ್ನು ತೆಗೆಯಬಹುದಾಗಿದೆ.             

whatsapp new feature
Image Credit: Timeoutabudhabi

 

ಬಹಳ ಸುಲಭ ವಿಧಾನದ ಮೂಲಕ ಹಳೆಯ ಸಂದೇಶ ನೋಡಬಹುದು

whatsapp ನ ಅನೇಕ ವೈಶಿಷ್ಟತೆಗಳ ಜೊತೆಗೆ ಹಳೆಯ ಸಂದೇಶ ನೋಡುವ ಸೌಲಭ್ಯ ಕೂಡ whatsapp ಬಳಕೆದಾರರಿಗೆ ಸಹಾಯಕ ಆಗಲಿದೆ. WhatsApp ನ ಈ ಹೊಸ ವೈಶಿಷ್ಟ್ಯದ ಸಹಾಯದಿಂದ ಬಳಕೆದಾರರು ದಿನಾಂಕದ ಸಹಾಯದಿಂದ ಹಳೆಯ ಸಂದೇಶಗಳನ್ನು ಕಂಡುಹಿಡಿಯಬಹುದು. ಪ್ರಸ್ತುತ ಪರೀಕ್ಷೆಯ ಹಂತದಲ್ಲಿರುವ ಈ ವೈಶಿಷ್ಟ್ಯವು ಶೀಘ್ರದಲ್ಲೇ ಎಲ್ಲಾ ಬಳಕೆದಾರರಿಗೆ ಲಭ್ಯವಾಗಲಿದೆ. ಈ ಹೊಸ ವೈಶಿಷ್ಟ್ಯದಲ್ಲಿ, ಹುಡುಕಾಟ ಬಾಕ್ಸ್ ಅನ್ನು ತೆರೆದಾಗ ದಿನಾಂಕಗಳೊಂದಿಗೆ ಕ್ಯಾಲೆಂಡರ್ ಕಾಣಿಸಿಕೊಳ್ಳುತ್ತದೆ. ಇದರಲ್ಲಿ ನೀವು ಸಂದೇಶಗಳನ್ನು ಹುಡುಕಲು ಬಯಸುವ ದಿನಾಂಕವನ್ನು ನಮೂದಿಸಬೇಕು.

whatsapp latest update
Image Credit: Whatsapp

WhatsApp ನ ಹೊಸ ವೈಶಿಷ್ಟ್ಯ ಬಳಕೆದಾರರಿಗೆ ಅನೇಕ ರೀತಿಯಲ್ಲಿ ಉಪಯುಕ್ತ ಆಗಿದೆ

ಪ್ರಸ್ತುತ ಈ ವೈಶಿಷ್ಟ್ಯದ ವೆಬ್ ಆವೃತ್ತಿಯನ್ನು ಬೀಟಾ ಬಳಕೆದಾರರಿಗೆ ಲಭ್ಯವಾಗುವಂತೆ ಮಾಡಲಾಗಿದೆ. ಇದು ಶೀಘ್ರದಲ್ಲೇ ಇತರರಿಗೆ ಲಭ್ಯವಾಗಲಿದೆ. ದಿನಾಂಕ, ತಿಂಗಳು, ವರ್ಷದ ಆಧಾರದ ಮೇಲೆ ನಿಮಗೆ ಬೇಕಾದ ಸಂದೇಶವನ್ನು ನೀವು ಹುಡುಕಬಹುದು. ಧ್ವನಿ ಸಂದೇಶಗಳ ಜೊತೆಗೆ ಪಠ್ಯ ಸಂದೇಶಗಳು ಸಹ ಗೋಚರಿಸುತ್ತವೆ. ಅಷ್ಟೇ ಅಲ್ಲದೇ ಇನ್ನು ಮುಂದಿನ ಹಂತದಲ್ಲಿ ಈ ವೈಶಿಷ್ಟತೆ ಇನ್ನಷ್ಟು ಅಪ್ಡೇಟ್ ಕಾಣಲಿದೆ ಎಂದು ವರದಿ ಹೇಳುತ್ತದೆ.

Leave A Reply

Your email address will not be published.