Whatsapp: ವಾಟ್ಸಾಪ್ ನಲ್ಲಿ ಚಾಟ್ ಮಾಡುವವರಿಗೆ ಹೊಸ ಸೇವೆ ಆರಂಭ, ಈಗ ಚಾಟ್ ಮಾಡುವುದು ಇನ್ನಷ್ಟು ಸುಲಭ.
ವಾಟ್ಸಾಪ್ ಈಗ ಹೊಸ ಫೀಚರ್ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ.
Whatsapp New Feature: ವಾಟ್ಸಾಪ್ (WhatsApp) ಮೆಸೇಜಿಂಗ್ ಅಪ್ಲಿಕೇಶನ್ ಕಾಲಕಾಲಕ್ಕೆ ಹೊಸ ನವೀಕರಣಗಳೊಂದಿಗೆ ಬಳಕೆದಾರರನ್ನು ಆಕರ್ಷಿಸುತ್ತಿದೆ. ಹೌದು ಈಗಿನ ಕಾಲದಲ್ಲಿ ಮೊಬೈಲ್ ಬಳಸುವ ಎಲ್ಲಾ ಜನರು ವಾಟ್ಸಾಪ್ ಬಳಸುತ್ತಾರೆ ಎಂದು ಹೇಳಬಹುದು. ಹೌದು ಸಂದೇಶ ಕಳುಹಿಸಲು ಮತ್ತು ಇತರೆ ದಾಖಲೆಗಳನ್ನ ಕಳುಹಿಸಲು ಈಗಿನ ಕಾಲದಲ್ಲಿ ಜನರು ವಾಟ್ಸಾಪ್ ಬಳಸುತ್ತಿದ್ದಾರೆ ಎಂದು ಹೇಳಬಹುದು.
ಈಗಾಗಲೇ ವಾಟ್ಸಾಪ್ ವಿಭಿನ್ನ ಅಪ್ಲಿಕೇಶನ್ ಅನ್ನು ಹೊಂದಿದೆ ಅಂದರೆ ಕಂಪನಿಯು ಚಾಟ್ ಲಾಕ್, ವೀಡಿಯೊ ಕರೆಗಳ ಸಮಯದಲ್ಲಿ ಸ್ಕ್ರೀನ್ ಹಂಚಿಕೆ ಮತ್ತು HD ಫೋಟೋ ಹಂಚಿಕೆಯಂತಹ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಿದೆ. ವಾಟ್ಸಾಪ್ ಈಗ ಹೊಸ ಫೀಚರ್ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ.
ಏನಿದು ವಾಟ್ಸಾಪ್ ನ ಹೊಸ ಫೀಚರ್
ವಾಟ್ಸಾಪ್ ಚಾಟ್ ಬಾರ್ ನಲ್ಲಿ ನಾವು ಸಂದೇಶ ಕಳುಹಿಸುವ ಎಲ್ಲಾ ಜನರ ಸಂಪರ್ಕಗಳನ್ನು ಹೊಂದಿರುತ್ತದೆ. ಇದು ವೈಯಕ್ತಿಕ ಚಾಟ್ ಗಳು, ಸ್ನೇಹಿತರು, ವೃತ್ತಿಪರ ಅಥವಾ ವ್ಯವಹಾರ ಸಂಬಂಧಿತ, ಇವೆಲ್ಲವೂ ಒಟ್ಟಿಗೆ ಬರುತ್ತವೆ. ನಾವು ಬಯಸುವ ವ್ಯಕ್ತಿಯೊಂದಿಗೆ ಚಾಟ್ ಮಾಡಲು ಬಯಸಿದರೆ, ನಾವು ಅಂತಹ ಉದ್ದವಾದ ಪಟ್ಟಿಯನ್ನು ಹುಡುಕಬೇಕು ಅಥವಾ ಸರ್ಚ್ ಬಾರ್ ಅನ್ನು ಬಳಸಬೇಕು.
ವಾಟ್ಸಾಪ್ ವೈಯಕ್ತಿಕ ಇಂಟರ್ ಫೇಸ್ ನಲ್ಲಿ ಬದಲಾವಣೆಗಳನ್ನು ಮಾಡುತ್ತಿದೆ, ಇದರಿಂದಾಗಿ ಸರ್ಚ್ ಬಾರ್ ನ ಅಗತ್ಯವಿಲ್ಲದೆ ಚಾಟ್ ಗಳನ್ನೂ ಸುಲಭವಾಗಿ ಪ್ರವೇಶಿಸಬಹುದು. ನೀವು ವಾಟ್ಸಾಪ್ ತೆರೆದ ತಕ್ಷಣ, ಬಾರ್ ಮೇಲ್ಭಾಗದಲ್ಲಿ ಕಾಣಿಸಿಕೊಳ್ಳುತ್ತದೆ. ಇದು ಎಲ್ಲಾ ಓದದ, ವೈಯಕ್ತಿಕ ಮತ್ತು ವ್ಯವಹಾರ ಟ್ಯಾಬ್ ಗಳನ್ನು ಒಳಗೊಂಡಿದೆ. ಇದು ನಿಮ್ಮ ಚಾಟ್ ಗಳನ್ನು ಹುಡುಕುವುದನ್ನು ಸುಲಭಗೊಳಿಸುತ್ತದೆ.
ಕ್ಯಾಮೆರಾ ಮತ್ತು ಹುಡುಕಾಟ ಆಯ್ಕೆಗಳು ಮೇಲ್ಭಾಗದಲ್ಲಿ ಇರಲಿದ್ದು ಚಾಟ್ ಮಾಡುವ ಸಮಯದಲ್ಲಿ ಈ ಫೀಚರ್ ಬಹಳ ಉಪಕಾರಿ ಆಗಲಿದೆ ಎಂದು ಹೇಳಬಹುದು. ಕೆಳಗೆ ಚಾಟ್, ಸ್ಟೇಟಸ್, ಸಂಪರ್ಕಗಳು ಮತ್ತು ಕರೆಗಳ ಆಯ್ಕೆಗಳಿವೆ. ಆದಾಗ್ಯೂ, ವಾಟ್ಸಾಪ್ ಪ್ರಸ್ತುತ ಹೊಸ ಆವೃತ್ತಿಯ ಅಭಿವೃದ್ಧಿ ಹಂತದಲ್ಲಿದೆ. ವಾಟ್ಸಾಪ್ ನ ಈ ಹಂತ ಹಂತವಾದ ವಿಭಿನ್ನ ಬದಲಾವಣೆಗಳಿಂದ ಜನ ಮೆಚ್ಚಿದ app ಇದಾಗಿರುತ್ತದೆ.
ಮೊಬೈಲ್ ನಲ್ಲಿ ವಾಟ್ಸಾಪ್ ಮೆಸೇಜಿಂಗ್ ಅಪ್ಲಿಕೇಶನ್ ಇಲ್ಲದೆ ಇರುವವರು ಕಡಿಮೆ. ಬಹಳ ಬೇಗ ಸಂದೇಶ ರವಾನೆಗೆ ಇದು ಬೆಸ್ಟ್ app ಆಗಿರುತ್ತದೆ. ಕೇವಲ ಮೆಸೇಜ್ ಮಾತ್ರ ವಲ್ಲದೆ, ನಾರ್ಮಲ್ ಕರೆ, ವಿಡಿಯೋ ಕರೆ, ಇನ್ನಿತರ ಅಪ್ಲಿಕೇಶನ್ ಅನ್ನು ವಾಟ್ಸಾಪ್ ಹೊಂದಿದೆ .