WhatsApp Key: ಈಗ ನಿಮ್ಮ ವಾಟ್ಸಾಪ್ ನಲ್ಲಿ ಹಾಕಿಸಿಕೊಳ್ಳಿ ಪಾಸ್ ಕೀ, ಹೊಸ ಅಪ್ಡೇಟ್ ಜಾರಿಗೆ ತಂದ ವಾಟ್ಸಾಪ್.

WhatsApp ಬಳಕೆದಾರರ ಸುರಕ್ಷತೆಗಾಗಿ ಪಾಸ್‌ ಕೀ ಅಳವಡಿಕೆ.

Passkey Feature For Whatsapp User: Whatsapp ಇತೀಚಿನ ದಿನಗಳಲ್ಲಿ ಅನೇಕ ಬದಲಾವಣೆಯನ್ನು ಕಾಣುತ್ತಿದೆ ಆ ನಿಟ್ಟಿನಲ್ಲಿ whatsapp ಅನ್ನು ಹೆಚ್ಚಿನ ಬಳಕೆದಾರರು ಬಳಸುತ್ತಿರುವುದರಿಂದ ಅತ್ಯಂತ ಕಟ್ಟುನಿಟ್ಟಾಗಿ ಸುರಕ್ಷತೆಗೆ ಆದ್ಯತೆ ನೀಡುತ್ತಿದ್ದು, ಬಳಕೆದಾರರಿಗೆ ಪ್ರಯೋಜನಕಾರಿಯಾಗುಂತಹ ಹೊಸ ಹೊಸ ಫೀಚರ್ಸ್‌ಗಳನ್ನು ಕೂಡ ಜಾರಿಗೆ ತರುತ್ತಿದೆ.

ಜಾಲತಾಣಗಳಲ್ಲಿ ಹೆಚ್ಚು ಜನಪ್ರಿಯ ಹಾಗೂ ಪರಿಣಾಮಕಾರಿ ಎಂದೆನಿಸಿರುವ ವಾಟ್ಸಾಪ್ ಬಳಕೆದಾರರ ಸುರಕ್ಷತೆಗೆ ಹೆಚ್ಚಿನ ಮಹತ್ವ ನೀಡುತ್ತಿದೆ. ಜನರ ಗೌಪ್ಯತೆಯ ಉದ್ದೇಶದಿಂದ ವಾಟ್ಸಾಪ್ ಈಗ ಹೊಸ ಸೆಕ್ಯೂರಿಟಿ ಫೀಚರ್ ಜಾರಿಗೆ ತರಲು ತೀರ್ಮಾನವನ್ನ ಮಾಡಿದೆ ಎಂದು ಹೇಳಬಹುದು. 

whatsapp passkey feature
Image Credit: Livemint

ಸುರಕ್ಷಿತ ಪಾಸ್‌ವರ್ಡ್‌ ಸೌಲಭ್ಯ ಅವಶ್ಯಕ

ಫಿಶಿಂಗ್ ಮತ್ತು ಸ್ಕ್ಯಾಮಿಂಗ್ ಪ್ರಯತ್ನಗಳ ಹೆಚ್ಚಳವನ್ನು ಗಮನಿಸಿದರೆ, ನಮ್ಮನ್ನು ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿರಿಸಲು ಪಾಸ್‌ವರ್ಡ್‌ಗಳು ಸಾಕಾಗುವುದಿಲ್ಲ. ಇದಕ್ಕಾಗಿಯೇ ಗೂಗಲ್, ಆಪಲ್ ಮತ್ತು ಇತರ ಟೆಕ್ ಸಂಸ್ಥೆಗಳು ಪಾಸ್‌ವರ್ಡ್‌ಗಳನ್ನು ಬದಲಾಯಿಸಲು ಮತ್ತು ನಿಮ್ಮ ಆನ್‌ಲೈನ್ ಖಾತೆಗಳನ್ನು ಹೆಚ್ಚು ಸುರಕ್ಷಿತವಾಗಿಸಲು ಪಾಸ್‌ ಕೀ ಗಳನ್ನು ಅಳವಡಿಸುವತ್ತ ಗಮನ ಹರಿಸಿದೆ .

ಫೇಸ್ ಐಡಿ ಮೂಲಕ ಪಾಸ್‌ ಕೀ ಗಳು ಬಳಕೆ

ಈ ದಿನಗಳಲ್ಲಿ ಐಫೋನ್ ಬಳಕೆದಾರರಿಗೆ ಇರುವ ಏಕೈಕ ಬಯೋಮೆಟ್ರಿಕ್ ಆಯ್ಕೆಯಾಗಿರುವ ಫೇಸ್ ಐಡಿ ಮೂಲಕ ಪಾಸ್‌ಕೀಗಳು ಕಾರ್ಯನಿರ್ವಹಿಸುತ್ತವೆ. ವಾಟ್ಸಾಪ್ನ ಲ್ಲಿನ ಪಾಸ್‌ ಕೀ ವೈಶಿಷ್ಟ್ಯವು ಖಾತೆಯ ಭದ್ರತೆಗೆ ಹೆಚ್ಚುವರಿ ಲೇಯರ್ ಅನ್ನು ಸೇರಿಸುತ್ತದೆ. ನೀವು ಸಮ್ಮತಿಯನ್ನು ನೀಡಿದರೆ ಮಾತ್ರ ಇತರರಿಗೆ ನಿಮ್ಮ ಡಿವೈಸ್ ನೋಡಲು ಸಾಧ್ಯ. ಪಾಸ್‌ಕೀ ಬಳಸಿಕೊಂಡು ನಿಮ್ಮ ಫಿಂಗರ್‌ಪ್ರಿಂಟ್, ಮುಖ ಅಥವಾ ಸ್ಕ್ರೀನ್ ಲಾಕ್ ಪಿನ್/ಪ್ಯಾಟರ್ನ್ ಬಳಸಿ ನಿಮ್ಮ ಖಾತೆಗೆ ಸೈನ್ ಇನ್ ಮಾಡಬಹುದು.

passkey feature for whatsapp user
Image Credit: News18

ಪಾಸ್‌ವರ್ಡ್‌ಗಳನ್ನು ನೆನಪಿಟ್ಟುಕೊಳ್ಳುವ ಅಗತ್ಯ ಇನ್ನುಮುಂದೆ ಇರುವುದಿಲ್ಲ

ಇದೀಗ ವಾಟ್ಸಾಪ್, ಪಾಸ್‌ ಕೀ ಗಳ ಮೂಲಕ ಬಳಕೆದಾರರ ಲಾಗಿನ್‌ಗಳನ್ನು ಪರೀಕ್ಷಿಸುತ್ತಿದ್ದು, ನಿಮ್ಮ ಫೋನ್‌ನ ಬಯೋಮೆಟ್ರಿಕ್ ಸುರಕ್ಷತೆಯನ್ನು ಬಳಸಿಕೊಂಡು ಮಾಡಲಾಗುತ್ತದೆ ಹಾಗೂ ಪಾಸ್‌ವರ್ಡ್‌ಗಳನ್ನು ನೆನಪಿಟ್ಟುಕೊಳ್ಳುವ ಅಗತ್ಯ ಇರುವುದಿಲ್ಲ. ಟೆಕ್ ಧುರೀಣರಾದ ಗೂಗಲ್ ಹಾಗೂ ಆಪಲ್ ತಮ್ಮ ವೆಬ್ ಬ್ರೌಸರ್‌ಗಳಿಗೆ ಪಾಸ್‌ ಕೀ ಗಳನ್ನು ಅಳವಡಿಸಿಕೊಂಡಿದ್ದು ಮೆಟಾ ಸೇರಿದಂತೆ ಹೆಚ್ಚಿನ ಕಂಪನಿಗಳು ಕೂಡ ಪಾಸ್‌ಕೀಯನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿವೆ ಎಂಬುದೇ ವಿಶೇಷವಾಗಿದೆ.

WhatsApp ನ ಪಾಸ್‌ಕೀಗಳು ಬೀಟಾ ಆವೃತ್ತಿಗೆ ಬರುವ ನಿರೀಕ್ಷೆ

ವಾಟ್ಸಾಪ್ನ ಪಾಸ್‌ ಕೀ ಗಳು ಬೀಟಾ ಆವೃತ್ತಿಗೆ ಬರುತ್ತಿವೆ ಎಂಬ ಅಂಶವು ಮುಂಬರುವ ತಿಂಗಳುಗಳಲ್ಲಿ ಬಳಕೆದಾರರು ಮುಕ್ತವಾಗಿ ಬಳಸಬಹುದೆಂಬ ಸೂಚನೆಯನ್ನು ನೀಡುತ್ತಿದೆ. ಈ ವಾರ ಟೆಸ್ಟ್‌ಫ್ಲೈಟ್‌ನಲ್ಲಿ ಗುರುತಿಸಲಾದ ಸ್ಥಳೀಯ ಐಪ್ಯಾಡ್ ಆಯಪ್‌ ನಲ್ಲಿ WhatsApp ಕಾರ್ಯನಿರ್ವಹಿಸುತ್ತಿದೆ.

ಇಂಟರ್ಫೇಸ್ ಮ್ಯಾಕೋಸ್ ಮತ್ತು ವೆಬ್ ಆವೃತ್ತಿಗಳಿಗೆ ಹೋಲುತ್ತದೆ ಇದರಿಂದ ಬಳಕೆದಾರರಿಗೆ ಬಳಕೆ ಸುಲಭವಾಗಲಿದೆ. ಇದು ಲೈವ್ ಲೊಕೇಶನ್ ಶೇರಿಂಗ್ ಫೀಚರ್ ಅನ್ನು ಹೊಂದಿರುವುದಿಲ್ಲ ಆದರೆ ಮೊದಲ ದಿನದಿಂದಲೇ ವಿಡಿಯೋ ಹಾಗೂ ಆಡಿಯೋ ಕರೆಗಳನ್ನು ಬೆಂಬಲಿಸುತ್ತದೆ ಎಂಬ ನಿರೀಕ್ಷೆ ಇದೆ.

Leave A Reply

Your email address will not be published.