Whatsapp Scam: ಈ 6 ವಾಟ್ಸಾಪ್ ಸಂದೇಶಗಳನ್ನ ಕ್ಲಿಕ್ ಮಾಡಿದರೆ ನಿಮ್ಮ ವಾಟ್ಸಾಪ್ ಖಾತೆ ಹ್ಯಾಕ್ ಆಗುವುದು ಪಕ್ಕ, ಎಚ್ಚರ.
ವಾಟ್ಸಾಪ್ ಈ ಸಂದೇಶ ಕ್ಲಿಕ್ ಮಾಡಿದರೆ ನಿಮ್ಮ ವಾಟ್ಸಾಪ್ ಹ್ಯಾಕ್ ಆಗಲಿದೆ.
Whatsapp Scam Alert: ದೇಶದಲ್ಲಿ ಪ್ರತಿಯೊಬ್ಬರು ಸ್ಮಾರ್ಟ್ ಫೋನ್ (Smart Phone) ಬಳಕೆ ಮಾಡುತ್ತಿದ್ದಾರೆ. ಹಾಗು WhatsApp ಬಳಕೆ ಕೂಡ ಈಗ ಸಹಜ ಆಗಿದೆ. WhatsApp ದಿನದಿಂದ ದಿನಕ್ಕೆ ಹೆಚ್ಚು ವಿಶೇಷತೆ ಹೊಂದಿದ್ದು, ಅದರ ಜೊತೆಗೆ ಬಳಕೆದಾರರ ಗೌಪ್ಯತೆ ಹಾಗು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ.
ನಾವು ಇಂದಿನ ಕಾಲದಲ್ಲಿ ಎಷ್ಟೇ ಜಾಗರೂಕರಾಗಿದ್ದರು ಮೋಸ ಹೋಗುವ ಸಂಭವ ಇರುತ್ತದೆ. ಯಾಕೆಂದರೆ ಸೈಬರ್ ಖದೀಮರು ಹ್ಯಾಕ್ ಮಾಡಲು ಅಥವಾ ಹಣವನ್ನು ಕದಿಯಲು ಎಸ್‌ಎಂಎಸ್ ಅಥವಾ ವಾಟ್ಸಾಪ್ನಲ್ಲಿ ಕಳುಹಿಸುವ ಕೆಲವು ಅಪಾಯಕಾರಿ ಸಂದೇಶ ಗಳನ್ನೂ ಅಸ್ತ್ರ ವಾಗಿ ಬಳಸುತ್ತಿದ್ದಾರೆ. ಹಾಗಾಗಿ ನಾವು ಕೆಲವು ಸಂದೇಶಗಳಿಂದ ದೂರ ಇರುವುದು ಉತ್ತಮ ಅಂದರೆ ಅಂತಹ ಸಂದೇಶಗಳ ಮೇಲೆ ನಾವು ಯಾವತ್ತು ಕ್ಲಿಕ್ ಮಾಡಬಾರದು.

ನಕಲಿ ಸಂದೇಶಗಳು ನಮ್ಮ ಖಾತೆಯನ್ನು ಖಾಲಿ ಮಾಡುತ್ತದೆ
ಇತೀಚಿನ ದಿನಗಳಲ್ಲಿ ನಮ್ಮ ಎಲ್ಲಾ ಮಾಹಿತಿಗಳು ಅಥವಾ ನಮ್ಮ ಬ್ಯಾಂಕಿಂಗ್ ಮಾಹಿತಿಗಳೆಲ್ಲ ನಮ್ಮ ಮೊಬೈಲ್ ನಲ್ಲೆ ಇರುವುದರಿಂದ ನಾವು ಮೋಸ ಹೋಗುವ ಸಾಧ್ಯತೆ ಹೆಚ್ಚಾಗಿರುತ್ತದೆ . ಅದೇಗೆಂದರೆ ನಮಗೆ ಕೆಲವು ನಕಲಿ ಸಂದೇಶ ಬರುತ್ತದೆ ಅವುಗಳನ್ನು ನಾವು ಓಪನ್ ಮಾಡಿದಾಗ ಹ್ಯಾಕರ್ ಗಳು ನಮ್ಮ ಬಗ್ಗೆ ಸಂಪೂರ್ಣ ಮಾಹಿತಿ ಹಾಗು ನಮ್ಮ ಬ್ಯಾಂಕಿನ ಸಂಪೂರ್ಣ ಮಾಹಿತಿ ಪಡೆದು ನಮ್ಮ ಖಾತೆಯಲ್ಲಿರುವ ಎಲ್ಲಾ ಹಣವನ್ನು ಕೊಳ್ಳೆ ಹೊಡೆಯುತ್ತಾರೆ.
ಭಾರತೀಯರು ಪ್ರತಿದಿನ ಇಮೇಲ್, ಪಠ್ಯ ಅಥವಾ ಸಾಮಾಜಿಕ ಮಾಧ್ಯಮಗಳ ಮೂಲಕ ಸುಮಾರು 12 ನಕಲಿ ಸಂದೇಶಗಳು ಅಥವಾ ಹಗರಣಗಳನ್ನು ಸ್ವೀಕರಿಸುತ್ತಾರೆ ಎಂದು ಮಾಹಿತಿ ತಿಳಿಸುತ್ತದೆ ಹಾಗು 82% ಭಾರತೀಯರು ಇಂತಹ ನಕಲಿ ಸಂದೇಶಗಳನ್ನು ಕ್ಲಿಕ್ ಮಾಡಿದ್ದಾರೆ ಅಥವಾ ಅವರಿಂದ ಮೋಸಹೋಗಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ನೀವು ಕಡ್ಡಾಯವಾಗಿ ಈ ಸಂದೇಶಗಳ ಮೇಲೆ ಕ್ಲಿಕ್ ಮಾಡಬೇಡಿ
ಬ್ಯಾಂಕ್ ಅಲರ್ಟ್ URL ಸಂದೇಶಗಳು
ಬ್ಯಾಂಕ್ ನಿಂದ ಕರೆ ಬಂದಿದೆ ಎಂದಾಗ , ಒಟಿಪಿ ಶೇರ್ ಮಾಡುವುದು, ಇನ್ನಿತರ ನಮ್ಮ ಬ್ಯಾಂಕ್ ಖಾತೆಯ ಮಾಹಿತಿಯನ್ನು ಹಂಚಿಕೊಳ್ಳುವುದರಿಂದ ಅಥವಾ ಬ್ಯಾಂಕ್ ನಿಂದ ಬಂದ ಸಂದೇಶ ಎಂದು ಅದರ ಮೇಲೆ ಕ್ಲಿಕ್ ಮಾಡುವುದರಿಂದ ನಮ್ಮ ಖಾತೆ ಖಾಲಿ ಆಗುತ್ತದೆ.

ಉದ್ಯೋಗ ಅವಕಾಶ ಇರುವುದಾಗಿ ಸಂದೇಶ ಕಳುಹಿಸಲಾಗುತ್ತದೆ
ಉದ್ಯೋಗ ಹುಡುಕುತ್ತಿರುವಾಗ ಉದ್ಯೋಗ ಖಾಲಿ ಎಂಬ ಸಂದೇಶ ಬಂದರೆ ಪ್ರತಿಯೊಬ್ಬರು ಒಮ್ಮೆ ಇಂತಹ ಸಂದೇಶಗಳಿಗೆ ಗಮನ ಕೊಡುವುದು ಸಹಜ ಆಗಿರುತ್ತದೆ. ನೆನಪಿನಲ್ಲಿಡಬೇಕಾದ ವಿಷಯವೆಂದರೆ ಉದ್ಯೋಗ ಆಫರ್ ಗಳು ಎಂದಿಗೂ ವಾಟ್ಸಾಪ್ ಅಥವಾ SMS ನಲ್ಲಿ ಬರುವುದಿಲ್ಲ. ಆದ್ದರಿಂದ ಅಂತಹ ಸಂದೇಶಗಳ ಮೇಲೆ ಕ್ಲಿಕ್ ಮಾಡಬೇಡಿ.
ಬಹುಮಾನ ಗೆದ್ದಿರುವುದಾಗಿ ಆಮಿಷ ಒಡ್ಡಲಾಗುತ್ತದೆ
ಹಲವರು ಈ ಸಂದೇಶದಿಂದ ಮೋಸಕ್ಕೆ ಒಳಗಾಗುವ ಸಾಧ್ಯತೆ ಇದೆ ಯಾಕೆಂದರೆ, ಬಹುಮಾನ ಅಥವಾ ಲಾಟರಿ ಗೆದ್ದಿದ್ದೀರಿ ಅಂದ ಕೂಡಲೇ ಜನರು ಆಸೆಗೆ ಒಳಗಾಗುತ್ತಾರೆ. ಇಂತಹ ಸಂದೇಶಗಳಿಂದ ವಂಚನೆಗೆ ಒಳಗಾಗುವ ಸಂಭವ 99% ಇರುತ್ತದೆ ಹಾಗು ಇದರಿಂದ ಬಳಕೆದಾರರು ನಮ್ಮ ಖಾತೆಯಲ್ಲಿನ ಎಲ್ಲಾ ಹಣವನ್ನು ಕಳೆದುಕೊಳ್ಳುತ್ತಾರೆ.
ಶಾಪ್ಪಿಂಗ್ ಆಪ್ ಗಳಿಂದ ಬರುವ ನಕಲಿ ಸಂದೇಶಗಳು
ಆಫರ್ ಗಳಿವೆ, ರಿಯಾಯಿತಿಗಳಿವೆ ಎಂಬ ಸಂದೇಶಗಳಿಗೆ, ನೀವು ನಿಮ್ಮ ಮಾಹಿತಿಯನ್ನು ಅದರಲ್ಲಿ ಹಂಚಿಕೊಂಡರೆ ನಿಮ್ಮ ಖಾತೆಯಲ್ಲಿನ ಎಲ್ಲಾ ಹಣವನ್ನು ಹ್ಯಾಕರ್ ಗಳು ಕೊಳ್ಳೆ ಹೊಡೆಯುತ್ತಾರೆ ಎಚ್ಚರದಿಂದಿರಿ.

ಅಮೆಜಾನ್ ಫೇಕ್ ಡೆಲವರಿ ಮಿಸ್ ಆಗಿರುವ ಕುರಿತು ಸಂದೇಶ
ಆನ್ಲೈನ್ ಶಾಪಿಂಗ್ ಬಗ್ಗೆ ನಿಮ್ಮ ಡೆಲಿವರಿ ರದ್ದುಗೊಂಡಿದೆ ಅಥವಾ ತಪ್ಪಿಹೋಗಿದೆ ಎಂದು ಎಸ್‌ಎಂಎಸ್ ಅಥವಾ ವಾಟ್ಸಾಪ್ನಲ್ಲಿ ಸಂದೇಶ ಬಂದರೆ, ಈ ರೀತಿಯ ಸಂದೇಶವು ವಂಚನೆಯಾಗಬಹುದು.
ಒಟಿಟಿ ಚಂದಾದಾರಿಕೆ ನವೀಕರಣದ ಸಂದೇಶ
ಸ್ಕ್ಯಾಮರ್ಗಳು ನೆಟ್ಫ್ಲಿಕ್ಸ್ ಅಥವಾ ಇತರ ಒಟಿಟಿ ಚಂದಾದಾರಿಕೆಗಳ ಸುತ್ತ ಸಂದೇಶ ಕಳುಹಿಸುವ ಮೂಲಕ ಸ್ಮಾರ್ಟ್ಫೋನ್ ಬಳಕೆದಾರರನ್ನು ಆಕರ್ಷಿಸಲು ಪ್ರಯತ್ನಿಸುತ್ತಾರೆ. ಈ ಉಚಿತ ಕೊಡುಗೆಗಳು ಸ್ಪ್ಯಾಮ್ ಆಗಿರಬಹುದು. ಹಾಗಾಗಿ ಇಂತಹ ಸಂದೇಶಗಳಿಂದ ಆದಷ್ಟು ಜಾಗರೂಕರಾಗಿರಿ.