Turbo Ventilators: ಕಾರ್ಖಾನೆಗಳ ಮೇಲ್ಛಾವಣಿಯ ಮೇಲೆ ಈ ರೀತಿಯ ತಿರುಗುವ ಮಷೀನ್ ಗಳನ್ನು ಯಾಕೆ ಇಟ್ಟಿರುತ್ತಾರೆ ಗೊತ್ತಾ…?

ಕಾರ್ಖಾನೆಗಳಲ್ಲಿ ಈ ತಿರುಗುವ ಮಷೀನ್ ಬಹಳ ಮುಖ್ಯವಾಗಿದೆ, ಈ ಮಷೀನ್ ಇಲ್ಲದೆ ಕಾರ್ಖಾನೆಯಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ.

Wind Turbo Ventilator In Factory: ನಾವು ಹೆಚ್ಚಾಗಿ ದೊಡ್ಡ ದೊಡ್ಡ ಕಾರ್ಖಾನೆಗಳ ಮೇಲ್ಛಾವಣಿಯ ಮೇಲೆ ಸ್ಟೇನ್‌ಲೆಸ್ ಸ್ಟೀಲ್‌ನಿಂದ ಮಾಡಿದ ಸಣ್ಣ ಪಾತ್ರೆಯಂತಹ ಆಕಾರವನ್ನು ನೋಡಿರುತ್ತೇವೆ. ಆದರೆ ನಮಗಿನ್ನೂ ತಿಳಿದಿಲ್ಲ ಯಾಕೆ ಈ ರೀತಿಯ ತಿರುಗುವ ಪಾತ್ರೆಯನ್ನು ಮೇಲೆ ಇಡಲಾಗಿದೆ ಎಂದು. ಸೂರ್ಯನ ಬೆಳಕಿನಲ್ಲಿ ಇದು ತುಂಬಾ ಪ್ರಕಾಶಮಾನವಾಗಿ ಕಾಣುತ್ತದೆ.

ಸಾಮಾನ್ಯವಾಗಿ ನಾವೆಲ್ಲರೂ ತಿಳಿಯಬೇಕೆನ್ನುವ ವಿಷಯಗಳಲ್ಲಿ,ಫ್ಯಾಕ್ಟರಿಗಳ ಮೇಲೆ ಸ್ಟೀಲ್​​​​ ಪಾತ್ರೆಯಂತೆ ಕಾಣುವ ತಿರುಗುವ ಮಷೀನ್ ಕೂಡ ಒಂದು. ಸಾಮಾನ್ಯವಾಗಿ ದೊಡ್ಡ ಕಾರ್ಖಾನೆಗಳು ಹಾಗೂ ಅನೇಕ ದೊಡ್ಡ ರೈಲು ನಿಲ್ದಾಣಗಳ ಮೇಲ್ಛಾವಣಿಗಳ ಮೇಲೆ ತಿರುಗುವುದನ್ನು ಸಹ ಕಾಣಬಹುದು. ಈ ಮಷೀನ್ ಗಳನ್ನು Wind Turbo Ventilator ಎಂದು ಕರೆಯುತ್ತಾರೆ. ಇದಲ್ಲದೇ ಏರ್ ವೆಂಟಿಲೇಟರ್, ಟರ್ಬೈನ್ ವೆಂಟಿಲೇಟರ್, ರೂಫ್ ಎಕ್ಸ್‌ಟ್ರಾಕ್ಟರ್ ಮುಂತಾದ ಹಲವು ಹೆಸರುಗಳಿಂದ ಕರೆಯಲಾಗುತ್ತದೆ.

Advantages of Turbo Ventilator
Image Credit: TV9 Kannada

ಈ ತಿರುಗುವ ಮಷೀನ್ ಕಾರ್ಖಾನೆಗಳಲ್ಲಿನ ಬಿಸಿ ಶಾಖವನ್ನು ಹೊರಹಾಕುತ್ತದೆ

ಕಾರ್ಖಾನೆಗಳಲ್ಲಿ ಈ Turbo Ventilator ಗಳ ಫ್ಯಾನ್‌ಗಳು ಬಹಳ ಮುಖ್ಯ ಆಗಿರುತ್ತದೆ. ಕಾರ್ಖಾನೆಯ ಮೇಲ್ಛಾವಣಿಯಲ್ಲಿ ಅಳವಡಿಸಲಾಗಿರುವ ಟರ್ಬೊ ವೆಂಟಿಲೇಟರ್‌ಗಳ ಫ್ಯಾನ್‌ಗಳು ಮಧ್ಯಮ ವೇಗದಲ್ಲಿ ಚಲಿಸುತ್ತವೆ. ಕಾರ್ಖಾನೆಗಳು ಅಥವಾ ಆವರಣದೊಳಗೆ ಮಷೀನ್ ಗಳು ಹೆಚ್ಚು ಕೆಲಸ ಮಾಡುವುದರಿಂದ ಶಾಖ ಉತ್ಪತ್ತಿಯಾಗುತ್ತದೆ ಇದರಿಂದ ಕೆಲಸಗಾರರಿಗೆ ಬಿಸಿ ಎನಿಸುತ್ತದೆ ಇದು ಅವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಈ ಬಿಸಿ ಶಾಖವನ್ನು ಹೊರ ಹಾಕಲು Wind Turbo Ventilator ಬಳಸಲಾಗುತ್ತದೆ.

Wind Turbo Ventilator In Factory
Image Credit: Windventilators

ತಾಜಾ ಮತ್ತು ನೈಸರ್ಗಿಕ ಗಾಳಿಯನ್ನು ಈ ತಿರುಗುವ ಮಷೀನ್ ನೀಡುತ್ತದೆ

ವಿಂಡ್ ಟರ್ಬೋ ವೆಂಟಿಲೇಟರ್ ತಿರುಗುವ ಮಷೀನ್ ಇದು ಬಿಸಿಗಾಳಿಯನ್ನು ಹೊರಹಾಕಿದಾಗ, ಕಿಟಕಿ ಮತ್ತು ಬಾಗಿಲುಗಳಿಂದ ಬರುವ ತಾಜಾ ಮತ್ತು ನೈಸರ್ಗಿಕ ಗಾಳಿಯು ಕಾರ್ಖಾನೆಗಳಲ್ಲಿ ದೀರ್ಘಕಾಲ ಉಳಿಯುತ್ತದೆ, ಇದು ಉದ್ಯೋಗಿಗಳಿಗೆ ಸಾಕಷ್ಟು ಪರಿಹಾರವನ್ನು ನೀಡುತ್ತದೆ. ಟರ್ಬೊ ವೆಂಟಿಲೇಟರ್ ಬಿಸಿ ಗಾಳಿಯನ್ನು ಹೊರಹಾಕುವುದು ಮಾತ್ರವಲ್ಲದೆ ಕಾರ್ಖಾನೆಗಳಿಂದ ಕೆಟ್ಟ ವಾಸನೆಯನ್ನು ಹೊರಹಾಕುತ್ತದೆ. ಅಷ್ಟೇ ಅಲ್ಲ ಹವಾಮಾನ ಬದಲಾದಾಗ ಒಳಗಿನ ತೇವಾಂಶವನ್ನೂ ಹೊರಹಾಕುತ್ತದೆ. ಹೀಗೆ ಅನೇಕ ರೀತಿಯ ಉಪಯೋಗಕ್ಕಾಗಿ ವಿಂಡ್ ಟರ್ಬೋ ವೆಂಟಿಲೇಟರ್ ತಿರುಗುವ ಮಷೀನ್ ಅನ್ನು ಕಾರ್ಖಾನೆಗಳಲ್ಲಿ ಬಳಸಲಾಗುತ್ತದೆ.

Leave A Reply

Your email address will not be published.