PM Modi: ಕಳೆದ 9 ತಿಂಗಳಿಂದ ಪ್ರತಿದಿನ ಮಹಿಳೆಯಿಂದ ಬರುತ್ತಿದೆ ಪ್ರಧಾನಿ ಮೋದಿಗೆ ಪತ್ರ, ಅಷ್ಟಕ್ಕೂ ಪತ್ರದಲ್ಲಿ ಏನಿದೆ…?

ಕಳೆದ 9 ತಿಂಗಳಿಂದ ನರೇಂದ್ರ ಮೋದಿಗೆ ಪತ್ರ ಬರೆಯುತ್ತಿರುವ ಮಹಿಳೆ ಯಾರು...?

Women Wrote A Letter To Narendra Modi: ರಾಜ್ಯದಿಂದ ರಾಜ್ಯಕ್ಕೆ ಹಲವಾರು ಸಮಸ್ಯೆಗಳಿವೆ. ಅದನ್ನು ಕೆಲವರು ಪ್ರಶ್ನೆ ಮಾಡುತ್ತಾರೆ ಇನ್ನು ಕೆಲವರು ನನಗೇನು ಎಂಬಂತೆ ಸುಮ್ಮನಾಗಿ ಬಿಡುತ್ತಾರೆ. ನಮ್ಮ ತೊಂದರೆಗಳೇ ಹೆಚ್ಚಿದೆ ಬೇರೆಯವರ ಬಗ್ಗೆ ಚಿಂತೆ ಮಾಡುವವರ್ಯಾರು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

ಮಹಿಳೆಯೊಬ್ಬಳು ತನ್ನ ಸುತ್ತ ಮುತ್ತಲಿನ ಸಮಸ್ಯೆಗಳನ್ನು ತಿಳಿದುಕೊಂಡು ದೇಶದ ಪ್ರಧಾನ ಮಂತ್ರಿಗೆ ಪತ್ರ ಬರೆಯುತ್ತಿರುವ ಬಗ್ಗೆ ವರದಿ ಆಗಿದೆ. ಆ ಮಹಿಳೆ ತನ್ನ ಸ್ವಂತ ಕಷ್ಟದ ಬಗ್ಗೆ ಪತ್ರ ಬರೆಯದೇ ರಾಜ್ಯದ ಎಲ್ಲಾ ಜನರ ಹಿತಾದ್ರಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಪತ್ರ ಬರೆಯುತ್ತಿದ್ದಾರೆ. ಇದು ನಿಜಕ್ಕೂ ಗ್ರೇಟ್ ಅನ್ನಿಸುವ ವಿಷಯ ಆಗಿದೆ.

PM Modi Latest News
Image Credit: Original Source

ಗರ್ಭಿಣಿ ಮಹಿಳೆಯಿಂದ ಪ್ರಧಾನಿಯವರಿಗೆ ಪತ್ರ

ತಮಿಳುನಾಡಿನ ಕೊಯಮತ್ತೂರಿನ ಗಾಂಧಿನಗರದ ಕೃತಿಕಾ ಎಂಬ ಮಹಿಳೆ ಪ್ರಧಾನಿಯವರಿಗೆ ಪತ್ರ ಬರೆದವರಾಗಿದ್ದು. ಇವರ ಪತಿ ಪಳನಿಸ್ವಾಮಿ ಸರ್ಕಾರಿ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದಾರೆ. ಕೃತಿಕಾ ಈಗ ಗರ್ಭಿಣಿ. ಬಿಎಸ್​ಸಿ ಕಂಪ್ಯೂಟರ್ ಸೈನ್ಸ್​ ಪದವೀದರೆಯಾಗಿರುವ ಅವರು ಕಳೆದ ಮಾರ್ಚ್ 8ರಂದು ಮಹಿಳಾ ದಿನಾಚರಣೆಯಂದು ಪ್ರಧಾನಿ ಮೋದಿಗೆ ಮೊದಲ ಪತ್ರ ಬರೆದಿದ್ದರು.

ಅಡುಗೆ ಅನಿಲದ ಬೆಲೆ ಹೆಚ್ಚಾಗಿದ್ದು, ಕಡಿಮೆ ಮಾಡಬೇಕು ಎಂದು ಒತ್ತಾಯಿಸಿ ಪತ್ರ ಬರೆದಿದ್ದರು. ಇಲ್ಲಿಯವರೆಗೆ ಪ್ರತಿ ದಿನವೂ ಯಾವುದಾದರೊಂದು ಸಾರ್ವಜನಿಕ ವಿಷಯದ ಕುರಿತು ಮನವಿ ಪತ್ರ ಬರೆಯುತ್ತಿದ್ದಾರೆ. ಪ್ರತಿಬಾರಿಯು ಮೋದಿ ಅವರಿಂದ ಸೂಕ್ತ ಉತ್ತರವನ್ನೂ ಕೂಡ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.

ಪತ್ರಗಳಿಂದ ಸಮಸ್ಯೆಗಳಿಗೆ ಪರಿಹಾರ ದೊರೆಯಬಹುದು

ಕೃತಿಕಾ ಅವರು ಸ್ವತಃ ಈ ರೀತಿಯಾಗಿ ಹೇಳಿಕೆ ನೀಡಿದ್ದಾರೆ, ಗೃಹಿಣಿಯಾಗಿರುವುದು ಸರ್ಕಾರವನ್ನು ತಲುಪಲು ಮತ್ತು ನನ್ನ ಕುಂದುಕೊರತೆಗಳನ್ನು ವ್ಯಕ್ತಪಡಿಸಲು ಅಡ್ಡಿಯಾಗುವುದಿಲ್ಲ ಎಂದು ನಾನು ನಂಬುತ್ತೇನೆ. ಎಲ್ಲಾ ಗೃಹಿಣಿಯರು ಆಡಳಿತಗಾರರನ್ನುತಲುಪಬಹುದು ಎಂಬುದನ್ನ ಪ್ರೇರೇಪಿಸಲು ಬಯಸುತ್ತೇನೆ, ಎಂದು ಅವರು ಹೇಳಿದ್ದಾರೆ. ಕೃತಿಕಾ ತಮ್ಮ ಮಾತೃಭಾಷೆ ತಮಿಳಿನಲ್ಲೇ ಈ ಪತ್ರಗಳನ್ನು ಬರೆದಿದ್ದು, ಅದಕ್ಕೆ ಪ್ರಧಾನಿ ಕಚೇರಿಯಿಂದ ಉತ್ತರವನ್ನೂ ಪಡೆದಿದ್ದಾರೆ. ಕೆಲವೊಮ್ಮೆ ಪ್ರಧಾನಿ ಕಚೇರಿಯಿಂದ ಫೋನ್ ಕರೆಗಳು ಬಂದಿದ್ದು, ಸಮಸ್ಯೆಗಳ ಬಗ್ಗೆ ವಿವರ ಪಡೆದುಕೊಂಡಿದ್ದಾರೆ. ಅಲ್ಲದೆ ಆ ದೂರಿಗೆ ಸ್ವೀಕೃತಿ ಪತ್ರಗಳನ್ನು ಪಡೆದುಕೊಂಡಿದ್ದಾಗಿ ತಿಳಿಸಿದ್ದಾರೆ.

Women Wrote A Letter To Narendra Modi
Image Credit: NDTV

ಹಲವು ಸಮಸ್ಯೆಗಳ ಕುರಿತು ಪತ್ರ ಬರೆಯಲಾಗಿದೆ

ಕಳೆದ ಮಾರ್ಚ್ 8ರಿಂದ ಇಲ್ಲಿಯವರೆಗೆ 264 ಮನವಿ ಪತ್ರಗಳನ್ನು ಬರೆದು ಪ್ರಧಾನಿಗೆ ಕಳುಹಿಸಿದ್ದಾರೆ. ಅವರು ಇತ್ತೀಚೆಗೆ ತಮ್ಮ 264ನೇ ಪತ್ರ ಬರೆದಿದ್ದಾರೆ. ಇದರಲ್ಲಿ ಭಾರತದ ಪ್ರತಿಯೊಬ್ಬ ಪ್ರಜೆಗೂ ಮೂಲಭೂತ ಕರ್ತವ್ಯಗಳ ಬಗ್ಗೆ ಅರಿವು ಮೂಡಿಸಿ ಜಾಗೃತಿ ಮೂಡಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಇದಕ್ಕೂ ಮೊದಲು ಮಹಿಳೆಯರಿಗೆ ಶೇಕಡ 33 ಮೀಸಲಾತಿಗೆ ಒತ್ತಾಯ, ಆನ್‌ಲೈನ್ ರಮ್ಮಿಯನ್ನು ನಿಷೇಧ, ನಿರ್ಭಯಾ ವ್ಯವಸ್ಥೆಯಲ್ಲಿ ತಮಿಳುನಾಡಿಗೆ ಹೆಚ್ಚಿನ ಮಹತ್ವ ನೀಡುವುದು, ಬಿಎಸ್‌ಎನ್‌ಎಲ್ 5 ಜಿ ಸೇವೆಯನ್ನು ಒದಗಿಸುವುದು, ಪ್ರಸ್ತುತ ಇಸ್ರೇಲ್-ಗಾಜಾ ಯುದ್ಧವನ್ನು ನಿಲ್ಲಿಸುವುದು ಚುನಾವಣೆಯಲ್ಲಿ ಮತಪತ್ರ ವ್ಯವಸ್ಥೆಯನ್ನು ಮರು ಪರಿಚಯಿಸುವುದು ಸೇರಿ ಹಲವು ಸಾಮಾಜಿಕ ಸಮಸ್ಯೆಗಳ ಬಗ್ಗೆ ಕೃತಿಕಾ ಪತ್ರ ಬರೆದಿದ್ದಾರೆ.

ಪ್ರಧಾನಿ ಮೋದಿಯವರಿಂದ ಪ್ರತಿಕ್ರಿಯೆ

ದೇಶದ ಜನತೆಯ ವಿವಿಧ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ನಿರಂತರವಾಗಿ ಬರೆಯುತ್ತಿರುವ ಪತ್ರಕ್ಕೆ ಪ್ರಧಾನಿ ಮೋದಿಯವರ ಕಚೇರಿ ಮನ್ನಣೆ ನೀಡುತ್ತಿದೆ. ಪ್ರತಿದಿನ ಬೆಳಗ್ಗೆ 10 ಗಂಟೆಗೆ ಪ್ರಧಾನಿ ಕಚೇರಿಯಿಂದ ದೂರವಾಣಿ ಕರೆ ಮಾಡಿ ಅವರ ಮನವಿ ಕುರಿತು ಚರ್ಚಿಸುತ್ತಾರೆ. ನನ್ನ ಪತಿ ಸೇರಿದಂತೆ ಕುಟುಂಬದ ಎಲ್ಲ ಸದಸ್ಯರು ನನಗೆ ಸಂಪೂರ್ಣ ಬೆಂಬಲ ನೀಡುತ್ತಿದ್ದಾರೆ. ಅವರ ಬೆಂಬಲದಿಂದಾಗಿ ನಾನು ಜನರ ಸಮಸ್ಯೆಗಳಿಗೆ ಪ್ರಧಾನಿಗೆ ಪತ್ರ ಬರೆದಿದ್ದೇನೆ ಎಂದು ಕೃತಿಕಾ ಹೇಳಿದ್ದಾರೆ .

Leave A Reply

Your email address will not be published.