World Cup 2023: ವಿಶ್ವಕಪ್ ತಂಡದಿಂದ ಹೊರಬಿದ್ದ ಇಬ್ಬರು ಸ್ಟಾರ್ ಪ್ಲೇಯರ್ಸ್! ಬದಲಿಯಾಗಿ ಈ ಆಟಗಾರರಿಗೆ ಸ್ಥಾನ
ವಿಶ್ವಕಪ್ ತಂಡದಿಂದ ಹೊರಬಿದ್ದ ಇಬ್ಬರು ಆಟಗಾರರು, ತಂಡದಲ್ಲಿ ಬಾರಿ ಬದಲಾವಣೆ
ODI ವಿಶ್ವಕಪ್ 2023 ಅಕ್ಟೋಬರ್ 5 ರಿಂದ ಪ್ರಾರಂಭವಾಗಲಿದ್ದು, ಅಂತಿಮ ಪಂದ್ಯವು ನವೆಂಬರ್ 19 ರಂದು ನಡೆಯಲಿದೆ. ಈ ಟೂರ್ನಿಗೆ ಇದುವರೆಗೆ 17 ತಂಡಗಳು ತಮ್ಮ ತಂಡವನ್ನು ಪ್ರಕಟಿಸಿವೆ. ಆದರೆ ಒಂದು ತಂಡವು ಇದ್ದಕ್ಕಿದ್ದಂತೆ ದೊಡ್ಡ ಬದಲಾವಣೆಯನ್ನು ಮಾಡಿದ್ದು, ಇಬ್ಬರು ಸ್ಟಾರ್ ಆಟಗಾರರನ್ನು ಹೊರಗಿಟ್ಟಿದೆ. ಬದಲಿಯಾಗಿ ಮತ್ತಿಬ್ಬರು ಆಟಗಾರರ ಹೆಸರನ್ನು ಸೂಚಿಸಲಾಗಿದೆ.
ಆರೋಗ್ಯ ಸಮಸ್ಯೆಯಿಂದ ತಂಡದಿಂದ ಹೊರಬಿದ್ದ ಆಟಗಾರರು
2023ರ ಐಸಿಸಿ ವಿಶ್ವಕಪ್ 2023ಕ್ಕೂ ಮುನ್ನ ದಕ್ಷಿಣ ಆಫ್ರಿಕಾ ದೊಡ್ಡ ಹಿನ್ನಡೆ ಅನುಭವಿಸಿದೆ. ಅನ್ರಿಚ್ ನಾರ್ಟ್ಜೆ ಮತ್ತು ಸಿಸಂಡಾ ಮಗಾಲಾ ಅವರು ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫಲರಾಗಿದ್ದಾರೆ. ಅನ್ರಿಚ್ ನಾರ್ಟ್ಜೆ ಬೆನ್ನುನೋವಿನಿಂದ ಬಳಲುತ್ತಿದ್ದರೆ, ಸಿಸಂಡಾ ಮಗಲಾ ಎಡ ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದಾರೆ.
ತಂಡಕ್ಕೆ ಹೊಸ ಆಟಗಾರರ ಆಯ್ಕೆ
ಗಾಯಗೊಂಡಿರುವ ವೇಗದ ಬೌಲರ್ ಅನ್ರಿಚ್ ನಾರ್ಟ್ಜೆ ಮತ್ತು ಸಿಸಂಡಾ ಮಗಾಲಾ ಇವರ ಜಾಗದಲ್ಲಿ ಆಂಡಿಲ್ ಫೆಹ್ಲುಕ್ವಾಯೊ ಮತ್ತು ಲಿಜಾಡ್ ವಿಲಿಯಮ್ಸ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಫೆಹ್ಲುಕ್ವಾಯೊ ಆಸ್ಟ್ರೇಲಿಯಾ ವಿರುದ್ಧದ ಎರಡು ODI ಪಂದ್ಯಗಳಲ್ಲಿ ಭಾಗವಹಿಸಿ 2 ವಿಕೆಟ್ ಪಡೆದಿದ್ದರು.
ODI ವಿಶ್ವಕಪ್ 2023ಗಾಗಿ ದಕ್ಷಿಣ ಆಫ್ರಿಕಾ ತಂಡದ ಆಟಗಾರರ ಪಟ್ಟಿ
ಟೆಂಬಾ ಬವುಮಾ (ನಾಯಕ), ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಜೆರಾಲ್ಡ್ ಕೊಯೆಟ್ಜಿ, ಕ್ವಿಂಟನ್ ಡಿ ಕಾಕ್ (ವಿಕೀ), ರೀಜಾ ಹೆಂಡ್ರಿಕ್ಸ್, ಮಾರ್ಕೊ ಜಾನ್ಸೆನ್, ಹೆನ್ರಿಚ್ ಕ್ಲಾಸೆನ್, ಕೇಶವ್ ಮಹಾರಾಜ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಲುಂಗಿ ಎನ್ಗಿಡಿ, ಕಗಿಸೊ ರಬಾಡ, ತಬ್ರೈಜ್ ಸ್ಹಮ್‌ಸಿ, ತಬ್ರೈಜ್ ಸ್ಹಾಮ್‌ಸಿ, ಲಿಜಾಡ್ ವಿಲಿಯಮ್ಸ್ ಆಯ್ಕೆಯಾಗಿರುವ ಆಟಗಾರರ ಪಟ್ಟಿ ಇದಾಗಿದೆ