Records Of World Cup: ಒಂದೇ ಒಂದು ಪಂದ್ಯವನ್ನು ಸೋಲದೆ ವಿಶ್ವಕಪ್ ಗೆದ್ದ ಮೂರೂ ತಂಡಗಳು ಯಾವುದು…? ಈ ಬಾರಿಯ ವಿಶ್ವಕಪ್ ಯಾರಿಗೆ…?
ಈ ಮೂರೂ ತಂಡಗಳು ಒಂದೇ ಒಂದು ತಂಡ ಸೋಲದೆ ವಿಶ್ವಕಪ್ ವಿನ್ ಆಗಿದೆ.
World Cup Records: ಕ್ರಿಕೆಟ್ ಅಭಿಮಾನಿಗಳಿಗೆ ಐಸಿಸಿ (ICC) ಏಕದಿನ ವಿಶ್ವಕಪ್ (World Cup) ಪ್ರಾರಂಭ ಆಗುತ್ತಿದೆ ಎಂದ ಕೂಡಲೇ ಹಬ್ಬ ಆರಂಭ ಆದಂತೆ ಆಗುತ್ತದೆ. ಯಾಕೆಂದರೆ ಕ್ರಿಕೆಟ್ ಅಂದರೆ ಏನೋ ಒಂದು ಭಾವನೆ, ಪ್ರೀತಿ, ಹುಚ್ಚು ಎನ್ನಬಹುದು. ಪ್ರತಿ ನಾಲ್ಕು ವರ್ಷಗಳಿಗೊಮ್ಮೆಐಸಿಸಿ ಏಕದಿನ ವಿಶ್ವಕಪ್ ನಡೆಯುತ್ತದೆ.
ಐಸಿಸಿ ಏಕದಿನ ವಿಶ್ವಕಪ್ ಇದು ಪ್ರತಿಷ್ಠಿತ ಕ್ರಿಕೆಟ್ ಟೂರ್ನಮೆಂಟ್ ಆಗಿರುತ್ತದೆ. 1975ರಲ್ಲಿ ಈ ಟೂರ್ನಿಯನ್ನು ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಆಯೋಜಿಸಲು ಆರಂಭಿಸಿತು. ಅಂದಿನಿಂದ ಇದು ವಿಶ್ವದ ಅತ್ಯಂತ ಪ್ರತಿಷ್ಠಿತ ಏಕದಿನ ಪಂದ್ಯಾವಳಿ ಎನಿಸಿಕೊಂಡಿದೆ. ಈ ಪಂದ್ಯಾವಳಿ ಯಲ್ಲಿ ಹಲವು ದೇಶಗಳು ಗೆಲುವಿನ ಕಿರೀಟವನ್ನು ಪಡೆದು ಸೈ ಅನಿಸಿಕೊಂಡಿದೆ.

ವಿಶ್ವಕಪ್ ಟ್ರೋಫಿ ಗೆಲ್ಲುವುದು ಸುಲಭದ ಮಾತಲ್ಲಾ
ವಿಶ್ವಕಪ್ ಟೂರ್ನಿ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುತ್ತದೆ. ಹಲವು ದೇಶಗಳು ಇಲ್ಲಿ ಭಾಗವಹಿಸಿ ಗೆಲುವನ್ನು ಪಡೆಯಲು ಹರಸಾಹಸ ಮಾಡುತ್ತಾರೆ. ಹಾಗೆಯೆ ವಿಶ್ವಕಪ್ ಗೆಲ್ಲುವುದು ಒಂದು ಮಹತ್ವದ ಸಾಧನೆ ಆಗಿರುತ್ತದೆ. ಈಗಾಗಲೇ ಹಲವು ವಿಶ್ವಕಪ್ ಟೂರ್ನಿ ನಡೆದಿದ್ದು ಹಲವು ದೇಶಗಳು ಗೆಲುವಿನ ಕಿರೀಟವನ್ನು ಪಡೆದಿದ್ದಾರೆ. ವಿಶ್ವಕಪ್ ಗೆಲ್ಲುವುದು ಒಂದು ಸಾಧನೆ ಆದರೆ ಅದರಲ್ಲೂ ಒಂದು ಪಂದ್ಯವನ್ನು ಸೋಲದೆ ಗೆಲ್ಲುವುದು ಇನ್ನಷ್ಟು ದೊಡ್ಡ ಸಾಧನೆ ಆಗಿರುತ್ತದೆ.
ಒಂದು ಪಂದ್ಯವನ್ನು ಸೋಲದೆ ವಿಶ್ವಕಪ್ ಗೆದ್ದ ಇತಿಹಾಸ ಇದೆ
ಒಂದೇ ಒಂದು ಪಂದ್ಯವನ್ನು ಸೋಲದೆ ಇಡೀ ಟೂರ್ನಿ ಯನ್ನೇ ಗೆಲ್ಲುವುದೆಂದರೆ ಸಾಮಾನ್ಯವಾದ ಮಾತಲ್ಲಾ. ಕುತೂಹಲಕಾರಿ ಅಂಶವೆಂದರೆ ಏಕದಿನ ಕ್ರಿಕೆಟ್‌ನ ವಿಶ್ವಕಪ್ ಇತಿಹಾಸದಲ್ಲಿ ಹೀಗೆ ಒಂದೂ ಪಂದ್ಯವನ್ನು ಸೋಲದೆ ಚಾಂಪಿಯನ್ ಪಟ್ಟಕ್ಕೇರಿದ ಉದಾಹರಣೆಗಳು ಕೇವಲ ಮೂರು ಬಾರಿ ಮಾತ್ರವೇ ಸಾಧ್ಯವಾಗಿದೆ. ಆದರೆ ಒಂದು ತಂಡ ಮಾತ್ರ ಸತತ ಎರಡು ಟೂರ್ನಿಗಳಲ್ಲಿ ಈ ಸಾಧನೆ ಮಾಡಿ ಮೆರೆದಾಡಿದೆ.
ಟೂರ್ನಿಯುದ್ದಕ್ಕೂ ಆ ತಂಡ ಎಂಥಾ ಅದ್ಭುತವಾದ ಆಟವನ್ನು ಸ್ಥಿರವಾಗಿ ಆಡುತ್ತಾ ಬಂದುದೆ ಎನ್ನುವುದನ್ನು ಸ್ಪಷ್ಟವಾಗಿ ಹೇಳುತ್ತದೆ. ಒಂದೂ ಪಂದ್ಯವನ್ನು ಸೋಲದೆ ವಿಶ್ವಕಪ್ ಟೂರ್ನಿಯನ್ನು ಗೆಲ್ಲುವುದಿದೆಯಲ್ಲಾ, ಅದು ನಿಜಕ್ಕೂ ಆ ತಂಡ ಚಾಂಪಿಯನ್ ಪಟ್ಟಕ್ಕೇರಲು ಅರ್ಹ ಎನಿಸುವ ಭಾವನೆ ಮೂಡಿಸುತ್ತದೆ. ಯಾವುದೇ ಎದುರಾಳಿಗೂ ತನ್ನ ವಿರುದ್ಧ ಉಸಿರೆತ್ತಲು ಅವಕಾಶವೇ ಇಲ್ಲದಂತೆ ಮಾಡಿರುತ್ತದೆ.

ವಿಶ್ವಕಪ್ ಟೂರ್ನಿಯಲ್ಲಿ ಒಂದೂ ಪಂದ್ಯ ಸೋಲದೆ ಚಾಂಪಿಯನ್ ಎನಿಸಿಕೊಂಡ ಮೂರು ತಂಡಗಳ ಮಾಹಿತಿ ಇಲ್ಲಿದೆ.
1975ರಲ್ಲಿ ವೆಸ್ಟ್ ಇಂಡೀಸ್ ಒಂದು ಪಂದ್ಯ ಸೋಲದೆ ವಿಶ್ವಕಪ್ ಪಡೆದಿದೆ
1975ರಲ್ಲಿ ವಿಶ್ವಕಪ್ ಮೊದಲನೇದಾಗಿ ಪ್ರಾರಂಭ ಆಗಿತ್ತು. ಏಕದಿನ ವಿಶ್ವಕಪ್‌ನ ಉದ್ಘಾಟನಾ ಆವೃತ್ತಿಯಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಕಟ್ಟಿ ಹಾಕಲು ಯಾವುದೇ ತಂಡಕ್ಕೂ ಸಾಧ್ಯವಾಗಿರಲೇ ಇಲ್ಲ. ಮೊದಲಿಗೆ ಗ್ರೂಪ್ ಹಂತದಲ್ಲಿ ಎಲ್ಲಾ ಮೂರು ಪಂದ್ಯಗಳಲ್ಲಿಯೂ ವಿಂಡೀಸ್ ಗೆದ್ದು ಸೆಮಿಫೈನಲ್‌ಗೆ ಪ್ರವೇಶಿಸಿತ್ತು. ಬಳಿಕ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯದಲ್ಲಿಯೂ ಗೆದ್ದು ಬೀಗಿತ್ತು. ಯಾವುದೇ ಪಂದ್ಯವನ್ನೂ ಸೋಲದೆ ವೆಸ್ಟ್ ಇಂಡೀಸ್ ತಂಡ ಚಾಂಪಿಯನ್ ಎನಿಸಿಕೊಂಡಿತ್ತು.
ವಿಶ್ವಕಪ್‌ನಲ್ಲಿ ಶ್ರೀಲಂಕಾ ಕೂಡ ಅಜೇಯ
1996ರಲ್ಲಿ ಶ್ರೀಲಂಕಾ ಅತ್ಯಂತ ಸ್ಥಿರವಾಗಿ ಅಮೋಘ ಪ್ರದರ್ಶನ ನೀಡಿತ್ತು. ಏಷ್ಯಾದ ರಾಷ್ಟ್ರಗಳೇ ಆಯೋಜಿಸಿದ್ದ ಈ ವಿಶ್ವಕಪ್‌ನಲ್ಲಿ ಶ್ರೀಲಂಕಾ ತಂಡ ಒಂದೂ ಪಂದ್ಯವನ್ನು ಸೋಲದೆ ಟೂರ್ನಿಯನ್ನು ಗೆದ್ದು ಬೀಗಿತ್ತು. ಶ್ರೀಲಂಕಾ ತಂಡ ಕೂಡ ವಿಶ್ವಕಪ್ ಟ್ರೋಫಿಯನ್ನು ಗೆದ್ದ ಸಾಧನೆ ಮಾಡಿತ್ತು. ಈ ಟೂರ್ನಿಯಲ್ಲಿ ಶ್ರೀಲಂಕಾ ತಂಡ ಅರ್ಜುನ ರಣತುಂಗಾ ನೇತೃತ್ವದಲ್ಲಿ ಟೂರ್ನಿಯುದ್ದಕ್ಕೂ ಗ್ರೂಪ್ ‘ಎ’ಯಲ್ಲಿದ್ದ ಶ್ರೀಲಂಕಾ ಈ ಹಂತದ ಎಲ್ಲಾ ಐದು ಪಂದ್ಯಗಳನ್ನು ಗೆದ್ದುಕೊಂಡಿತ್ತು. ಬಳಿಕ ನಾಕೌಟ್ ಪಂದ್ಯಗಳನ್ನು ಗೆದ್ದು ಚಾಂಪಿಯನ್ ಪಟ್ಟಕ್ಕೇರಿತ್ತು.

ಒಂದೂ ಪಂದ್ಯ ಸೋಲದೆ ಚಾಂಪಿಯನ್ ಆದ ಆಸ್ಟ್ರೇಲಿಯಾ
2000ನೇ ದಶಕದಲ್ಲಿ ರಿಕಿ ಪಾಂಟಿಂಗ್ ನೇತೃತ್ವದಲ್ಲಿ ಆಸ್ಟ್ರೇಲಿಯಾ ತಂಡ ಒಂದೂ ಪಂದ್ಯವನ್ನು ಸೋಲದೆ ಬರೊಬ್ಬರಿ ಎರಡು ವಿಶ್ವಕಪ್‌ಗಳನ್ನು ಗೆದ್ದುಕೊಂಡಿತ್ತು. ಆಸ್ಟ್ರೇಲಿಯಾ ಕ್ರಿಕೆಟ್ ತಂಡವನ್ನು ಮಣಿಸುವುದು ಅಸಾಧ್ಯ ಎನ್ನುವುವ ಮಾತನ್ನು ಸತತ ಎರಡು ವಿಶ್ವಕಪ್ ಟೂರ್ನಿಯಲ್ಲಿ ಆಸಿಸ್ ಪಡೆ ಅಕ್ಷರಶಃ ನಿಜ ಮಾಡಿಬಿಟ್ಟಿತ್ತು 2003ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ವಿಶ್ವಕಪ್ ಹಾಗೂ 2007 ರಲ್ಲಿ ವೆಸ್ಟ್ ಇಂಡೀಸ್ ಆತಿಥ್ಯದಲ್ಲಿ ನಡೆದ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾವನ್ನು ಮಣಿಸುವ ಸಾಮರ್ಥ್ಯ ಯಾವ ತಂಡಕ್ಕೂ ಇರಲಿಲ್ಲ.