Yamaha Motor: ದಸರಾ ಹಬ್ಬದ ಆಫರ್ ಘೋಷಣೆ ಮಾಡಿದ ಯಮಹಾ, ಬೈಕ್ ಮೇಲೆ ಭರ್ಜರಿ ಆಫರ್ ಘೋಷಣೆ.
ಯಮಹ ಮೋಟರ್ಸ್ ನಿಂದ ದಸರಾ ಹಬ್ಬಕ್ಕೆ ಬಿಗ್ ಆಫರ್, ಇಂದೇ ಬೈಕ್ ಗಳನ್ನೂ ಬುಕ್ ಮಾಡಿ
Yamaha Motor India Special Offers: ದಸರಾ ಮತ್ತು ದೀಪಾವಳಿ ಹಬ್ಬ ಬರುತಿದೆ ಅಂತಾದರೆ ಸಾಮಾನ್ಯವಾಗಿ ಎಲ್ಲರೂ ವಾಹನಗಳ ಖರೀದಿ ಬಗ್ಗೆ ಗಮನ ಹರಿಸುತ್ತಾರೆ. ಈ ಹಬ್ಬಗಳಲ್ಲಿ ಹೆಚ್ಚಾಗಿ ಎಲ್ಲರೂ ವಾಹನಗಳನ್ನು ಖರೀದಿ ಮಾಡಿ ಖುಷಿ ಪಡುತ್ತಾರೆ. ಅದರಲ್ಲೂ ಬೈಕ್ ಪ್ರಿಯರು ಇದೆ ಹಬ್ಬಕ್ಕೆ ನಾನು ಬೈಕ್ ಖರೀದಿ ಮಾಡಬೇಕು ಎಂದು ಕಾಯುತ್ತ ಇರುತ್ತಾರೆ.
ಅಂತವರಿಗೆ ಈ ಸಲದ ಹಬ್ಬದ ಸೀಸನ್ ಬಹಳ ವಿಶೇಷವಾಗಿರುತ್ತದೆ ಹಬ್ಬದ ಸೀಸನ್ ಅನ್ನು ಉಪಯೋಗ ಮಾಡಿಕೊಳ್ಳುವ ಬೈಕ್ ಕಂಪನಿಗಳು ಹೊಸ ಆಫರ್ ಅನ್ನು ನೀಡುತ್ತದೆ. ಈಗ ಯಮಹಾ ಮೋಟರ್ಸ್ (Yamaha Motors) ಇಂಡಿಯಾ ದಸರಾ ಹಬ್ಬದ ಹಿನ್ನೆಲೆಯಲ್ಲಿ ವಿಶೇಷ ಕೊಡುಗೆಗಳನ್ನು ಘೋಷಿಸಿದೆ. ಈ ಕೊಡುಗೆಗಳು 31 ಅಕ್ಟೋಬರ್ 2023 ರವರೆಗೆ ಮಾತ್ರ ಲಭ್ಯವಿದೆ ಎನ್ನುವುದನ್ನು ಮರೆಯಬಾರದು.

ಯಮಹ ಮೋಟರ್ಸ್ ಕಂಪನಿಯಾ ವಾಹನಗಳಿಗೆ ಭರ್ಜರಿ ರಿಯಾಯಿತಿ
ದ್ವಿಚಕ್ರ ವಾಹನದಲ್ಲಿ ಮಂಚೂಣಿಯಲ್ಲಿ ಬರುವ ಹೆಸರು ಯಮಹಾ, ಈ ಕಂಪನಿಯು ಹಬ್ಬದ ಪ್ರಯುಕ್ತವಾಗಿ ಹಲವು ಆಫರ್ ಗಳನ್ನೂ ನೀಡಿ ತನ್ನ ಗ್ರಾಹಕರನ್ನು ಆಕರ್ಷಿಸುತ್ತಿದೆ. ಹಾಗಾದರೆ, ಯಮಹಾ ಮೋಟರ್ಸ್ ತನ್ನ ಎಲ್ಲಾ ಪ್ರೊಡಕ್ಟ್ ಗಳಿಗೆ ಯಾವ ರೀತಿಯ ಆಫರ್ ನೀಡುತ್ತಿದೆ ಎಂದು ನೋಡೋಣ.
ಯಮಹ ಕಂಪನಿಯು 3,000/ ರೂಪಾಯಿಗಳ ಇನ್ ಸ್ಟಂಟ್ ಕ್ಯಾಶ್ ಬ್ಯಾಕ್ ಸೌಲಭ್ಯ ನೀಡುತ್ತಿದೆ ಹಾಗು ಆಕರ್ಷಕ ಹಣಕಾಸು ಯೋಜನೆಗಳು ಮತ್ತು 2,999 ರೂಪಾಯಿಗಳಿಂದ ಆರಂಭವಾಗುವ ಅತ್ಯಂತ ಕಡಿಮೆ ಡೌನ್ ಪೇಮೆಂಟ್ ಸೌಲಭ್ಯ ಒದಗಿಸುತ್ತಿದೆ ಎನ್ನಲಾಗಿದೆ. ಈ ಆಫರ್ ಗಳು 150cc FZ-X ಮತ್ತು 125 Fi Hybrid ಸ್ಕೂಟರ್ ಗಳಿಗೆ ಮತ್ತು RayZR ಮತ್ತು Fascino ಮಾತ್ರ ಅನ್ವಯವಾಗುತ್ತದೆ.

ಯಮಹಾ ಮೋಟರ್ಸ್ ಕಂಪನಿ ಆಫರ್ ನೀಡಿರುವ ಬೈಕ್ ಗಳ ಪಟ್ಟಿ
ಯಮಹಾ ಮೋಟರ್ಸ್ ಕಂಪನಿ ರಿಯಾಯಿತಿಯಲ್ಲಿ YZF-R15 V4 (155cc), YZF-R15S V3 (155cc), MT-15 V2 (155cc), FZS-FI ಆವೃತ್ತಿ 4.0 (149cc), FZS-FI ಆವೃತ್ತಿ 3.0 (149cc), FZ-FI (149cc), FZ-X (149cc) ಈ ಬೈಕ್ ಗಳನ್ನೂ ಸೆಲ್ ಮಾಡುತ್ತಿದೆ.
ಯಮಹಾ ಮೋಟರ್ಸ್ ಕಂಪನಿ ಆಫರ್ ನೀಡಿರುವ ಸ್ಕೂಟರ್ ಗಳ ಪಟ್ಟಿ
ಯಮಹಾ ಮೋಟರ್ಸ್ ಕಂಪನಿ ರಿಯಾಯಿತಿಯಲ್ಲಿ Aerox 155 (155cc), Fascino 125 FI Hybrid (125cc), Ray ZR 125 FI Hybrid (125cc), Ray ZR Street Rally 125 FI Hybrid (125cc)ಈ ಸ್ಕೂಟರ್ ಗಳನ್ನೂ ಸೆಲ್ ಮಾಡುತ್ತಿದೆ.