Yash And Sreeleela: ಈ ಒಂದು ಕಾರಣಕ್ಕೆ ಯಶ್ ಅವರನ್ನ ಭಾವ ಎಂದು ಕರೆಯುತ್ತಾರೆ ನಟಿ ಶ್ರೀಲೀಲಾ, ಇಬ್ಬರ ನಡುವಿನ ಭಾಂದವ್ಯ.
ಯಶ್ ಆವರನ್ನ ಭಾವ ಎಂದು ಕರೆಯುತ್ತಾರೆ ನಟಿ ಶ್ರೀಲೀಲಾ.
Yash And Sreeleela Relationship: ನಟ ಯಶ್ (Yash) ಕನ್ನಡ ಚಿತ್ರರಂಗ ಮತ್ತು ದೇಶದ ಚಿತ್ರರಂಗದ ಟಾಪ್ ನಟ ಎಂದು ಹೇಳಬಹುದು. KGF ಭಾಗ 1 ಮತ್ತು KGF ಭಾಗ 2 ರ ನಂತರ ನಟ ಯಶ್ ಅವರಿಗೆ ದೇಶದಲ್ಲಿ ಮಾಅತರ್ವಲ್ಲಾದೆ ಬೇರೆಬೇರೆ ದೇಶದಲ್ಲಿ ಕೂಡ ಅಭಿಮಾನಿಗಳು ಹುಟ್ಟುಕೊಂಡರು ಎಂದು ಹೇಳಿದ್ರೆ ತಪ್ಪಾಗಲ್ಲ.
ಇವರ ಇತ್ತೀಚಿನ ಸಿನಿಮಾ ಕೆಜಿಎಫ್ 1 ಮತ್ತು ಕೆಜಿಎಫ್ 2 ಬಹಳ ಹೆಸರುವಾಸಿಯಾಗಿದೆ. ಕೆಜಿಎಫ್ 2 ನ ನಂತರ ಯಾವುದೇ ಸಿನಿಮಾದ ಅನೌನ್ಸ್ ಮಾಡದ ಕಾರಣ ಅಭಿಮಾನಿಗಳು ಮುಂದಿನ ಸಿನಿಮಾಗಾಗಿ ಕಾಯುತ್ತಿದ್ದಾರೆ.

ಟಾಲಿವುಡ್ ನಟಿ ಶ್ರೀಲಿಲಾ
ಹಾಗೆ ಟಾಲಿವುಡ್ ನಟಿ ಶಿಲೀಲಾ (Sreeleela)ಟಾಪ್ ಹೀರೋಗಳ ಚಿತ್ರಗಳಲ್ಲಿ ನಟಿಸಿ ದೂಳೆಬ್ಬಿಸುತ್ತಿದ್ದಾರೆ. ಇದೀಗ ನಟಿ ಶ್ರೀಲೀಲಾ ಅವರು ಯಶ್ ಅವರನ್ನು ಜೀಜೂ ಎಂದು ಕರೆಯುತ್ತಾರೆ. ಹೀಗೆ ಕರೆಯುದರ ಹಿಂದಿನ ಇಂಟ್ರೆಸ್ಟಿಂಗ್ ಸ್ಟೋರಿ ಬಗ್ಗೆ ನಾವೀಗ ತಿಳಿದುಕೊಳ್ಳೋಣ.
ಯಶ್ ಅವರನ್ನು ಭಾವ ಎನ್ನುವ ಶ್ರೀಲಿಲಾ
ಶ್ರೀಲೀಲಾರವರ ತಾಯಿ ಸ್ವರ್ಣಲತಾ ಅವರು ಬೆಂಗಳೂರಿನಲ್ಲಿ ಹೆಸರಾಂತ ಸ್ತ್ರೀ ರೋಗ ತಜ್ಞೆಯಾಗಿ ಕೆಲಸ ಮಾಡುತ್ತಿದ್ದಾರೆ. ಶ್ರೀಲೀಲಾ ಅವರು ಹಾಗೂ ರಾಧಿಕಾ ಪಂಡಿತ್ ರವರ ಕುಟುಂಬದ ಮಧ್ಯೆ ಅವಿನಾಭಾವ ಸಂಬಂಧ ಇದೆ.

ಯಶ್ ಅವರ ಪತ್ನಿ ರಾಧಿಕಾ ಪಂಡಿತ್ ಹಾಗೂ ಶ್ರೀ ಲೀಲಾ ಅವರಿಗೂ ಮೊದಲಿನಿಂದಲೂ ಪರಿಚಯ ಇತ್ತು. ಹಾಗಾಗಿ ಶ್ರೀ ಲೀಲಾರವರು ರಾಧಿಕಾ ಪಂಡಿತ್ ರವರನ್ನು ಮೊದಲಿನಿಂದಲೂ ಅಕ್ಕ ಎಂದು ಕರೆಯುತ್ತಿದ್ದರು. ಹಾಗೆ ಯಶ್ ಅವರನ್ನು ಭಾವ( ಜೀಜೂ ) ಎಂದು ಕರೆಯುತ್ತಿದ್ದರು. ಶ್ರೀ ಲೀಲಾ ರವರು ಯಶ್ ರವರನ್ನು ಬಾವ ಎಂದು ಕರೆಯಲು ಅವರಿಬ್ಬರ ಕುಟುಂಬದ ಮಧ್ಯೆ ಇರುವ ಆಪ್ತತೆ ಕಾರಣ.