Yuva Nidhi Update: ಡಿಪ್ಲೋಮ ಮತ್ತು ಪದವಿ ಮಾಡಿದವರಿಗೆ ಗುಡ್ ನ್ಯೂಸ್, ಯುವ ನಿಧಿ ಯೋಜನೆಯ ಇನ್ನೊಂದು ಬಿಗ್ ಅಪ್ಡೇಟ್.
ಯುವನಿಧಿ ಯೋಜನೆ ಜಾರಿಯ ಕುರಿತು ಸರ್ಕಾರದಿಂದ ಹೇಳಿಕೆ, ಶೀಘ್ರದಲ್ಲಿ ಯುವನಿಧಿ ಯೋಜನೆ ಪ್ರಾರಂಭ ಆಗಲಿದೆ.
Yuva Nidhi Scheme Latest Update: ರಾಜ್ಯ ಸರ್ಕಾರದ ಹಲವು ಯೋಜನೆಗಳು ಈಗಾಗಲೇ ಜಾರಿಗೆ ಬಂದಿದ್ದು ಅದರಲ್ಲಿ ಯುವನಿಧಿ ಯೋಜನೆ ಮಾತ್ರ ಇನ್ನು ಜಾರಿಗೆ ಬಂದಿಲ್ಲ. ಕಾಂಗ್ರೆಸ್ ಸರ್ಕಾರದ 05 ಗ್ಯಾರೆಂಟಿ ಯೋಜನೆಯಲ್ಲಿ ಯುವನಿಧಿ ಯೋಜನಾ ಕೂಡ ಒಂದಾಗಿತ್ತು.
ಗ್ರಹಲಕ್ಷೀ, ಶಕ್ತಿ ಭಾಗ್ಯ, ಗ್ರಹಜ್ಯೋತಿ,ಅನ್ನಭಾಗ್ಯ ಹಾಗು ಯುವನಿಧಿ ಎಂಬ 05 ಯೋಜನೆಯ ಬಗ್ಗೆ ಕಾಂಗ್ರೆಸ್ ಪಕ್ಷ ಭರವಸೆ ನೀಡಿದ್ದು, ಈಗ 04 ಯೋಜನೆಗಳು ರಾಜ್ಯದಲ್ಲಿ ಜಾರಿ ಇದೆ, ಆದರೆ ಯುವನಿಧಿ ಯೋಜನೆ ಮಾತ್ರ ಇನ್ನು ಜಾರಿಗೆ ಬಂದಿಲ್ಲ. ಇನ್ನು ಈ ಯೋಜನೆಯ ಬಗ್ಗೆ ಸರ್ಕಾರ ಮಹತ್ವದ ಹೇಳಿಕೆ ನೀಡಿದೆ.

ಡಿಪ್ಲೋಮಾ ಹಾಗು ಪದವಿ ಪಡೆದವರಿಗೆ ಯುವನಿಧಿ ಯೋಜನೆ
ಯುವನಿಧಿ ಯೋಜನೆ ಇದು ಯುವಪೀಳಿಗೆಗೆ ಅನುಕೂಲಕರವಾಗುವುದಾಗಿದೆ. ಡಿಪ್ಲೋಮಾ ಹಾಗು ಪದವಿ ಪಡೆದವರು ಈ ಯೋಜನೆಯಡಿ ಅರ್ಜಿ ಹಾಕಬಹುದು. ಈ ಯೋಜನೆಯಡಿ ಡಿಪ್ಲೋಮಾ ಹಾಗು ಪದವಿ ಪಡೆದವರ ಖಾತೆಗೆ ಹಣ ಜಮೆ ಮಾಡಲಾಗುತ್ತದೆ. ಡಿಸೆಂಬರ್ ತಿಂಗಳಿನಲ್ಲಿ ಯೋಜನೆ ಜಾರಿ ಮಾಡುವುದಾಗಿ ಡಾ.ಶರಣ ಪ್ರಕಾಶ್ ಪಾಟೀಲ್ ಅವರು ಹೇಳಿದ್ದಾರೆ. ಅವರು ಈ ಬಗ್ಗೆ ರಾಯಚೂರಿನಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತ ಮಾಹಿತಿ ನೀಡಿದರು.
ಯುವನಿಧಿ ಯೋಜನೆ ಜಾರಿ ಬಗ್ಗೆ ಸರ್ಕಾರದ ಹೇಳಿಕೆ
ಡಾ.ಶರಣ ಪ್ರಕಾಶ್ ಪಾಟೀಲ್ ಅವರು ರಾಯಚೂರಿನಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ನಾಲ್ಕು ಯೋಜನೆಗಳನ್ನು ಜನತೆಗೆ ನೀಡಲಾಗಿದ್ದು, ಬಾಕಿ ಉಳಿದಿರುವ ಇನ್ನೊಂದು ಯೋಜನೆಯಾದ ಯುವನಿಧಿಯನ್ನು ಡಿಸೆಂಬರ್ ತಿಂಗಳಿನಲ್ಲಿ ಬಿಡುಗಡೆ ಮಾಡಲಾಗುವುದು ಅಂತ ಹೇಳಿದರು.

ಇನ್ನೂ ಇದೇ ವೇಳೆ ಅವರು ತಮ್ಮ ವಿರುದ್ದ ವ್ಯಕ್ತಿಯೊಬ್ಬರ ಆತ್ಮಹತ್ಯೆ ಕೇಸಿಗೆ ಸಂಬಂಧಪಟ್ಟ ಕೇಳಿ ಬಂದಿರುವ ಆರೋಪ ಸುಳ್ಳಾಗಿದ್ದು, ಆ ವ್ಯಕ್ತಿ ನನಗೆ ಪರಿಚಯವಿಲ್ಲ, ಇದಲ್ಲದೇ ಸದ್ಯ ಈ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದ್ದು, ಸತ್ಯ ತನಿಖೆ ಬಳಿಕ ಬರಲಿದೆ ಅಂತ ಅವರು ಹೇಳಿದರು. ಇವರ ಹೇಳಿಕೆಯ ಆಧಾರದ ಮೇಲೆ ಡಿಸೆಂಬರ್ ತಿಂಗಳಿನಿಂದ ಯುವನಿಧಿ ಯೋಜನೆ ಜಾರಿಗೆ ಬರಬಹುದು.