Yuva Nidhi Update: ಯುವ ನಿಧಿ ಯೋಜನೆಯ ಇನ್ನೊಂದು ಬಿಗ್ ಅಪ್ಡೇಟ್, ಪದವಿ ಮತ್ತು ಡಿಪ್ಲೋಮ ಆದವರು ಈ ದಾಖಲೆ ರೆಡಿ ಮಾಡಿಕೊಳ್ಳಿ.

ಶೀಘ್ರದಲ್ಲೇ ಯುವನಿಧಿ ಯೋಜನೆ ಜಾರಿಗೆ ಬರಲಿದೆ ಎಂದು ಸರ್ಕಾರದಿಂದ ಘೋಷಣೆ.

Yuva Nidhi Scheme News Update: ರಾಜ್ಯ ಸರ್ಕಾರದ ಬಹಳ ಮುಖ್ಯವಾದ 5 ಗ್ಯಾರೆಂಟಿ ಯೋಜನೆ ಶಕ್ತಿ ಯೋಜನೆ, ಗೃಹಜ್ಯೋತಿ ಯೋಜನೆ , ಅನ್ನಭಾಗ್ಯ ಯೋಜನೆ , ಗೃಹಲಕ್ಷ್ಮೀ ಯೋಜನೆ ಹಾಗು ಯುವನಿಧಿ ಯೋಜನೆಗಳಾಗಿದೆ. ಈ 5 ಯೋಜನೆಯಲ್ಲಿ 4 ಯೋಜನೆಗಳು ಈಗಾಗಲೇ ಜಾರಿಗೆ ಬಂದಿದೆ.

ಈಗ ಯುವನಿಧಿ ಯೋಜನೆ ಮಾತ್ರ ನಿಧಾನಗತಿಯಲ್ಲಿ ಸಾಗುತ್ತಿದ್ದು, ಹೊಸ ವರ್ಷದಲ್ಲಿ ಆರಂಭ ಆಗುವ ಎಲ್ಲ ಸಂಭವ ಇದೆ ಎನ್ನಲಾಗಿದೆ. 2024ರ ಜನವರಿ ಮೊದಲ ವಾರವೇ ಡಿಪ್ಲೋಮಾ, ಪದವೀಧರರಿಗೆ 1,500 ರೂ. ಹಾಗೂ 3,000 ರೂ. ನೀಡುವ ಯುವನಿಧಿ ಯೋಜನೆಯನ್ನು ಜಾರಿಗೆ ತರಲು ಸಕಲ ಸಿದ್ಧತೆ ನಡೆಸಲಾಗಿದೆ.

Yuva Nidhi Scheme
Image Credit: rsdcindia

ಯುವನಿಧಿ ಯೋಜನೆಯ ಸೌಲಭ್ಯಗಳು

ಯುವನಿಧಿ ಯೋಜನೆಯು ಯುವಪೀಳಿಗೆಯ ವಿದ್ಯಾರ್ಥಿಗಳಿಗೆ ಸಂಬಂಧಿಸಿದ್ದಾಗಿದೆ. ಯುವನಿಧಿ ಯೋಜನೆಯನ್ನು 2024 ರ ಜನವರಿ ಮೊದಲ ವಾರವೇ ಜಾರಿಗೆ ತರಲು ಸರ್ಕಾರ ಈಗಾಗಲೇ ಸಿದ್ಧತೆ ನಡೆಸಿದೆ ಎನ್ನಲಾಗಿದೆ. ಯುವನಿಧಿ ಯೋಜನೆಯಡಿ ಡಿಪ್ಲೋಮಾ ಹಾಗೂ ಪದವೀಧರರಿಗೆ ಮಾಸಿಕ 1,500 ರೂ. ಹಾಗೂ 3,000 ರೂ. ವಿತರಿಸಲಾಗುತ್ತದೆ. ಡಿಸೆಂಬರ್ ಅಂತ್ಯಕ್ಕೆ ಡಿಪ್ಲೋಮಾ, ಪದವೀಧರರಿಗೆ ಯುವನಿಧಿ ಯೋಜನೆಯನ್ನು ಜಾರಿಗೆ ತರಬಹುದು.

Yuva Nidhi Scheme News Update
Image Credit: Kannada News Today

ಯುವನಿಧಿ ಯೋಜನೆಗೆ ಅರ್ಜಿ ಹಾಕಲು ಬೇಕಾಗಿರುವ ಕಡ್ಡಾಯ ದಾಖಲೆಗಳು

ಯುವನಿಧಿ ಯೋಜನೆಯ ಫಲಾನುಭವಿಯಾಗಲು ಅಭ್ಯರ್ಥಿಯ ಆಧಾರ್ ಕಾರ್ಡ್, ಆದಾಯ ಪ್ರಮಾಣ ಪತ್ರ, ಶಿಕ್ಷಣ ಸಂಸ್ಥೆಯಿಂದ ಪಡೆದ ಪ್ರಮಾಣ ಪತ್ರ ಹಾಗೂ ಅಂಕಪಟ್ಟಿ, ಬ್ಯಾಂಕ್ ಖಾತೆಯ ವಿವರ, ಇ-ಮೇಲ್ ಐಡಿ, ಮೊಬೈಲ್ ಸಂಖ್ಯೆ, ಭಾವಚಿತ್ರ, ಪದವಿ ಹಾಗೂ ಡಿಪ್ಲಮೋ ಮುಗಿಸಿದವರ ಕೊನೆಯ ವರ್ಷದ ಅಂಕಪಟ್ಟಿ ಈ ಎಲ್ಲಾ ದಾಖಲೆಗಳು ಕಡ್ಡಾಯವಾಗಿ ಸರಕಾರಕ್ಕೆ ಸಲ್ಲಿಸತಕ್ಕದ್ದು. ಇಲ್ಲ ಅಂತಾದರೆ ಈ ಯೋಜನೆಯ ಹಣವನ್ನು ಪಡೆಯಲು ಸಾಧ್ಯವಿಲ್ಲ.

Leave A Reply

Your email address will not be published.