Housing Loan: ಸ್ವಂತ ಮನೆ ಕಟ್ಟುವವರಿಗೆ ಗುಡ್ ನ್ಯೂಸ್ ನೀಡಿದ ನರೇಂದ್ರ ಮೋದಿ ಸರ್ಕಾರ, ಹೊಸ ಯೋಜನೆ ಜಾರಿಗೆ.

ಮನೆ ಕಟ್ಟುವ ಆಸೆ ಇರುವವರಿಗೆ ಕೇಂದ್ರದ ಮೋದಿ ಸರ್ಕಾರದಿಂದ ಬಂಪರ್ ಕೊಡುಗೆ

Modi Government New Housing Scheme: ಪ್ರತಿಯೊಬ್ಬ ವ್ಯಕ್ತಿಯು ತನ್ನದೇ ಆದ ಚಿಕ್ಕ ಮನೆಯನ್ನು ಹೊಂದಬೇಕು ಎಂಬ ಕನಸನ್ನು ಹೊಂದಿರುತ್ತಾನೆ. ಸ್ವಂತ ಮನೆ ಎಂಬುವುದು ಪ್ರತಿ ಕುಟುಂಬದ ಆಸೆ. ಆದ್ರೆ ಈಗಿನ ಕಾಲದಲ್ಲಿ ಒಂದು ಮನೆ ಕಟ್ಟುವುದೆಂದರೆ ಜೀವನ ಪೂರ್ತಿ ದುಡಿದರು ಅಸಾಧ್ಯ ಎನಿಸುತ್ತದೆ.

ಇಂದಿನ ಹಣದುಬ್ಬರ ಕಾಲದಲ್ಲಿ ಜೀವನ ನೆಡೆಸುವುದೇ ಕೆಲವರಿಗೆ ಹರಸಾಹನ ಅಂತದರಲ್ಲಿ ಮನೆ ಕಟ್ಟುವುದಂದರೆ ಬಹಳ ಕಷ್ಟ.ಹಲವರು ಹಬ್ಬ ಹರಿದಿನಗಳಲ್ಲಿ ಸರ್ಕಾರ ಹೊಸ ಯೋಜನೆ ಪ್ರಕಟಿಸುತ್ತದೆ ಎಂಬ ಕಾಯುತ್ತಾ ಇರುತ್ತಾರೆ ಹಾಗೆಯೇ ಮನೆ ಕಟ್ಟುವ ಕನಸನ್ನು ನನಸು ಮಾಡಲು ನರೇಂದ್ರ ಮೋದಿ ಸರ್ಕಾರ ಹೊಸ ವಸತಿ ಯೋಜನೆಗೆ ಮುಂದಾಗಿದೆ.      

PM Modi Latest News
Image Credit: NDTV

ನಗರ ಪ್ರದೇಶದ ಬಡ ಮತ್ತು ಮಧ್ಯಮ ವರ್ಗದವರಿಗೆ ಹೊಸ ವಸತಿ ಯೋಜನೆ

ಮುಂದಿನ ಅವಧಿಯಲ್ಲಿ ಪ್ರಮುಖ ರಾಜ್ಯಗಳಲ್ಲಿ ಚುನಾವಣೆಗಳು ನಡೆಯಲಿವೆ. ಇದಲ್ಲದೇ 2024ರಲ್ಲಿ ಲೋಕಸಭೆ ಚುನಾವಣೆಯೂ ಇದೆ. ಚುನಾವಣೆಗೂ ಮುನ್ನ ಸರ್ಕಾರ ವಿವಿಧ ಪರಿಹಾರ ಹಾಗು ಯೋಜನೆಗಳನ್ನು ಜಾರಿಗೆ ತರುತ್ತಿದೆ.

ಕೇಂದ್ರ ಸರ್ಕಾರ ನಗರ ಪ್ರದೇಶದ ಬಡ ಮತ್ತು ಮಧ್ಯಮ ವರ್ಗದವರಿಗೆ ಸರ್ಕಾರವು 60,000 ಕೋಟಿ ರೂಪಾಯಿಗಳ ಹೊಸ ಬಡ್ಡಿ ಸಬ್ಸಿಡಿಯನ್ನು ಶೀಘ್ರದಲ್ಲೇ ಪ್ರಾರಂಭಿಸಲಿದೆ. ಈ ನಿಟ್ಟಿನಲ್ಲಿ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಪ್ರಸ್ತಾವನೆಯನ್ನು ಖರ್ಚು ಹಣಕಾಸು ಸಮಿತಿ (ಇಎಫ್‌ಸಿ) ಈಗಾಗಲೇ ಅನುಮೋದಿಸಿದೆ. ಹೊಸ ಯೋಜನೆಯಡಿ ಅರ್ಹ ಮನೆಗಳ ಕಾರ್ಪೆಟ್ ಪ್ರದೇಶವು ಹೆಚ್ಚು ಹೆಚ್ಚಾಗುವ ಸಾಧ್ಯತೆಯಿದೆ.

Modi Government New Housing Scheme
Image Credit: Indiafirstlive

ಬಡ್ಡಿಯಲ್ಲಿ ರಿಯಾಯಿತಿ

ವರದಿಯ ಪ್ರಕಾರ, ಸರ್ಕಾರದ ಈ ಯೋಜನೆಯು ಐದು ವರ್ಷಗಳವರೆಗೆ ಇರುತ್ತದೆ. ಈ ಮೂಲಕ 50 ಲಕ್ಷ ರೂ. ವರೆಗಿನ ಗೃಹ ಸಾಲದ ಮೊತ್ತಕ್ಕೆ ವರ್ಷಕ್ಕೆ ಶೇ.3-6ರಷ್ಟು ಬಡ್ಡಿ ರಿಯಾಯಿತಿ ನೀಡುವ ಯೋಜನೆ ಇದೆ. ಇಎಫ್‌ಸಿ ಪ್ರಸ್ತಾವನೆಯನ್ನು ಅನುಮೋದಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆದರೆ, ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯ ಮತ್ತು ಹಣಕಾಸು ಸಚಿವಾಲಯ ಈ ಬಗ್ಗೆ ಇನ್ನೂ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಮೋದಿ ಸಂಪುಟ ಶೀಘ್ರದಲ್ಲೇ ಇದನ್ನು ಪರಿಗಣಿಸಲಿದೆ ಎಂದು ನಂಬಲಾಗಿದೆ. ಹಾಗಾಗಿ ನಗರ ಪ್ರದೇಶದ ಬಡ ಮತ್ತು ಮಧ್ಯಮ ವರ್ಗದವರಿಗೆ ಹೊಸ ವಸತಿ ಯೋಜನೆಯನ್ನು ಘೋಷಿಸಲಿದೆ ಎನ್ನಲಾಗಿದೆ.

Leave A Reply

Your email address will not be published.