Nokia: ಹಾಳಾದರೆ ಮನೆಯಲ್ಲೇ ರಿಪೇರಿ ಮಾಡಬಹುದು, ಕಡಿಮೆ ಬೆಲೆಗೆ ಇನ್ನೊಂದು ನೋಕಿಯಾ ಮೊಬೈಲ್ ಲಾಂಚ್.

ಮನೆಯಲ್ಲೇ ರಿಪೇರಿ ಮಾಡುವ ಮೊಬೈಲ್ ಲಾಂಚ್ ಮಾಡಿದ ನೋಕಿಯಾ.

Nokia G42 5G Smart Phone: ಒಂದು ಕಾಲದ ಟಾಪ್ ಮೊಬೈಲ್ ಕಂಪನಿ ಆಗಿರುವ ನೋಕಿಯಾ (Nokia) ಈಗ ತನ್ನ ಹೆಸರನ್ನ ಉಳಿಸಿಕೊಳ್ಳಲು 5G ಮೊಬೈಲ್ ಗಳನ್ನ ಮಾರುಕಟ್ಟೆಗೆ ಲಾಂಚ್ ಮಾಡುತ್ತಿದೆ ಎಂದು ಹೇಳಬಹುದು. ನೋಕಿಯಾ ಕಂಪನಿಯನ್ನು ಎವರ್‌ಗ್ರೀನ್‌ ಮೊಬೈಲ್ ಕಂಪನಿ ಎಂದು ಕರೆಯಲಾಗುತ್ತದೆ. ನೋಕಿಯಾ ತನ್ನ ಬ್ರ್ಯಾಂಡ್‌ ಫೋನ್‌ಗಳಲ್ಲಿ ಹಲವು ಹೊಸತನಗಳನ್ನು ಪರಿಚಯಿಸಿದೆ.

ಅದೇ ಹಾದಿಯಲ್ಲಿ ಮುಂದೆ ಸಾಗುತ್ತಿರುವ ನೋಕಿಯಾ ಹೆಚ್‌ಎಮ್‌ಡಿ ಗ್ಲೋಬಲ್‌ ಇದೀಗ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆಯಲು ಸಜ್ಜಾಗಿದೆ. ಅದೇನೆಂದರೇ, ಬಳಕೆದಾರರಿಗೆ ತಮ್ಮ ಫೋನ್‌ ಅನ್ನು ಮನೆಯಲ್ಲಿಯೇ ಸರಿಪಡಿಸುವ ಸಾಮರ್ಥ್ಯವನ್ನು ಒದಗಿಸಲಿದೆ.

Nokia G42 5G Smart Phone price
Image Credit: Digitaltrends

ನೋಕಿಯಾ ಕಂಪನಿಯ ಹೊಸ ಸ್ಮಾರ್ಟ್ ಫೋನ್ 

Nokia HMD Global ಹೊಸದಾಗಿ Nokia G42 5G ಸ್Smart Phone ಅನ್ನು ಬಿಡುಗಡೆ ಮಾಡಲು ಸಜ್ಜಾಗಿದ್ದು, ಇದೇ ಸೆಪ್ಟೆಂಬರ್ 11 ರಂದು ಅಧಿಕೃತವಾಗಿ ಭಾರತದಲ್ಲಿ ಈ ಫೋನ್ ಲಾಂಚ್ ಆಗಲಿದೆ. ಈ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ತಮ್ಮ ಫೋನ್‌ ಅನ್ನು ಮನೆಯಲ್ಲಿಯೇ ಸರಿಪಡಿಸುವ ಸಾಮರ್ಥ್ಯವನ್ನು ಒದಗಿಸಲಿದೆ ಎಂದು ಹೇಳಲಾಗಿದೆ. ನೋಕಿಯಾ G42 5G ಫೋನ್‌ ಸಂಸ್ಥೆಯ ಮೊದಲ ಬಳಕೆದಾರರೇ ರಿಪೇರಿ ಮಾಡಬಹುದಾದ 5G ಡಿವೈಸ್‌ ಆಗಿದೆ. ಸಾಕಷ್ಟು ನಿರೀಕ್ಷೆ ಮೂಡಿಸಿರುವ ಈ ಫೋನ್‌ ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಡಲು ಸಜ್ಜಾಗಿದೆ.

ನೋಕಿಯಾ G42 5G ಪ್ರೊಸೆಸರ್‌ 

ನೋಕಿಯಾ G42 5G ಫೋನ್‌ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 480+ ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದೆ. ಜೊತೆಗೆ ಗ್ರಾಫಿಕ್ಸ್‌ಗಾಗಿ Adreno GPU ಸಪೋರ್ಟ್‌ ಕೂಡಾ ಪಡೆದುಕೊಂಡಿದೆ. ಅಲ್ಲದೇ ಈ ಫೋನ್‌ 4GB/6GB RAM ಮತ್ತು 128GB ಆಂತರೀಕ ಸ್ಟೋರೇಜ್‌ ಆಯ್ಕೆ ಪಡೆದಿದ್ದು, ಮೈಕ್ರೊ ಎಸ್‌ಡಿ ಕಾರ್ಡ್ ಸ್ಲಾಟ್ ಮೂಲಕ ಮೆಮೊರಿ ವಿಸ್ತರಿಸಬಹುದಾಗಿದೆ. ಜೊತೆಗೆ 5GB ವರ್ಚುವಲ್ RAM ಬೆಂಬಲವಿದೆ. ನೋಕಿಯಾ G42 5G ಫೋನ್ ಪರ್ಪಲ್‌ ಕಲರ್‌ ಆಯ್ಕೆಯಲ್ಲಿ ಲಭ್ಯವಾಗುವ ನಿರೀಕ್ಷೆಗಳಿವೆ. ಆದಾಗಿಯೂ ಸಂಸ್ಥೆಯು ಫೋನ್‌ ಬಿಡುಗಡೆ ವೇಳೆ ಹೊಸ ಕಲರ್‌ ಆಯ್ಕೆಯಲ್ಲಿ ಪರಿಚಯಿಸಬಹುದು.

Nokia's new smart phone
Image Credit: News18

 

ನೋಕಿಯಾ G42 5G ಕ್ಯಾಮೆರಾ ಸೆನ್ಸಾರ್‌ ವಿನ್ಯಾಸ

ನೋಕಿಯಾ G42 5G ಫೋನ್‌ ತ್ರಿವಳಿ ಕ್ಯಾಮೆರಾ ರಚನೆಯನ್ನು ಪಡೆದುಕೊಂಡಿದೆ. ನೋಕಿಯಾ G42 5G ಫೋನಿನ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸಲ್‌ ಸೆನ್ಸಾರ್‌ ಆಗಿದ್ದು, ಸೆಕೆಂಡರಿ ಕ್ಯಾಮೆರಾವು 2 ಮೆಗಾ ಪಿಕ್ಸಲ್‌ ಮ್ಯಾಕ್ರೋ ಲೆನ್ಸ್ ಮತ್ತು ತೃತೀಯ ಕ್ಯಾಮೆರಾವು 2 ಮೆಗಾ ಪಿಕ್ಸಲ್‌ ಡೆಪ್ತ್ ಮಾಡ್ಯೂಲ್ ಹೊಂದಿವೆ. ಇದರೊಂದಿಗೆ ಸೆಲ್ಫಿ ಮತ್ತು ವೀಡಿಯೊ ಕರೆಗಾಗಿ ಮುಂಭಾಗದಲ್ಲಿ 8 ಮೆಗಾ ಪಿಕ್ಸಲ್‌ ಸೆನ್ಸಾರ್‌ ಕ್ಯಾಮೆರಾ ಒದಗಿಸಲಾಗಿದೆ. ನೋಕಿಯಾ G42 5G ಮೊಬೈಲ್‌ 6.56 ಇಂಚಿನ IPS LCD ಹೆಚ್‌ಡಿ+ ಡಿಸ್‌ಪ್ಲೇ ಅನ್ನು ಪಡೆದಿದೆ.

ನೋಕಿಯಾ G42 5G ಮೊಬೈಲ್ ನ ಬೆಲೆ ಹಾಗೂ ಬ್ಯಾಟರಿ 
ನೋಕಿಯಾ G42 5G ಫೋನ್‌ ಇತ್ತೀಚಿಗೆ ಯುರೋಪ್‌ ನಲ್ಲಿ ಅನಾವರಣ ಆಗಿದ್ದು, €249 ಬೆಲೆಯನ್ನು ಪಡೆದಿದೆ. ಭಾರತದಲ್ಲಿ ಅಂದಾಜು 22,300 ರೂಪಾಯಿ ಎನ್ನಲಾಗಿದೆ. ನೋಕಿಯಾ G42 5G ಫೋನ್ 5,000 mAh Battery Backup ಅನ್ನು ಪಡೆದಿದ್ದು, ಇದಕ್ಕೆ ಪೂರಕವಾಗಿ 20W ಫಾಸ್ಟ್‌ ಚಾರ್ಜಿಂಗ್ ಸಪೋರ್ಟ್‌ ಕೂಡಾ ಒಳಗೊಂಡಿದೆ. ಹಾಗೆಯೇ ಕನೆಕ್ಟಿವಿಟಿ ಸೌಲಭ್ಯಗಳಲ್ಲಿ 5G, 4G LTE, Wi-Fi, ಬ್ಲೂಟೂತ್, GPS ಮತ್ತು USB ಟೈಪ್-C ಪೋರ್ಟ್ ಆಯ್ಕೆಗಳನ್ನು ಒಳಗೊಂಡಿದೆ. ಅಂದಹಾಗೆ ನೋಕಿಯಾ G42 5G ಫೋನ್‌ ಇತ್ತೀಚಿನ ಆಂಡ್ರಾಯ್ಡ್ 13 ಓಎಸ್‌ ಸಪೋರ್ಟ್‌ನಲ್ಲಿ ಕೆಲಸ ಮಾಡಲಿದೆ.

Leave A Reply

Your email address will not be published.