Jeep: ಹಬ್ಬಕ್ಕೆ ಹೊಸ ಕಾರ್ ಖರೀದಿ ಮಾಡುವವರಿಗೆ ಬಂಪರ್ ಗುಡ್ ನ್ಯೂಸ್, ಕಾರುಗಳ ಮೇಲೆ ಭರ್ಜರಿ ಆಫರ್ ಘೋಷಣೆ.

ಹಬ್ಬಕ್ಕೆ ಹೊಸ ಕಾರು ಕೊಳ್ಳಲು ಬಯಸುವವರಿಗೆ ಇಲ್ಲಿದೆ ಗುಡ್ ನ್ಯೂಸ್.

Jeep Compass In Best Price: ಈ ಸಲದ ಗೌರಿ ಗಣೇಶ ಹಬ್ಬ ಬಂದಾಯಿತು, ಹಬ್ಬಕ್ಕೆ ಹೊಸ ಕಾರು ಖರೀದಿಸಲು ಬಯಸುವವರಿಗೆ ಒಳ್ಳೆಯ ಸುದ್ದಿ. ಹೊಸ ಕಾರೊಂದು ಮಾರುಕಟ್ಟೆಗೆ ಪ್ರವೇಶಿಸಿದೆ. ಕಡಿಮೆ ಬೆಲೆಯ, ಗರಿಷ್ಠ ಮೈಲೇಜ್ ಕೊಡುವ, ಸೂಪರ್ ಲುಕ್ ಇರುವ ಕಾರು ಈಗ ನಿಮ್ಮ ಮುಂದೆ ಗಮನ ಸೆಳೆಯಲಿದೆ. ಕಾರು ಖರೀದಿ ಮಾಡುವ ಆಸೆ ಇದ್ದವರಿಗೆ ಜೀಪ್ ಇಂಡಿಯಾ ಇತ್ತೀಚೆಗೆ ಹೊಸ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

Jeep Compass Price
Image Credit: Teamcardelight

JEEP COMPASS 2023 ಅನಾವರಣಗೊಂಡಿದೆ

Jeep 2023ರ ಮಾದರಿಯನ್ನು ಕಂಪಾಸ್ ನಲ್ಲಿ ಅನಾವರಣಗೊಳಿಸಲಾಗಿದೆ ಈ ಕಾರಿನ ಬೆಲೆ ಹಿಂದಿನ ಮಾದರಿಗಳಿಗಿಂತ ತುಂಬಾ ಕಡಿಮೆ ಎಂದು ಹೇಳಬಹುದು. ಆದ್ದರಿಂದ ಜೀಪ್ ಕಾರನ್ನು ಖರೀದಿಸಲು ಬಯಸುವವರು ಈ ಹೊಸ ಮಾದರಿಯನ್ನು ನೋಡಬಹುದು.

ಈ ಹೊಸ ಕಾರಿನ ವೈಶಿಷ್ಟ್ಯಗಳು

ಜೀಪ್ ಇಂಡಿಯಾ ಹೊಸ ರೂಪಾಂತರದೊಂದಿಗೆ ಬಂದಿದೆ. ಜೀಪ್ ಮೆರಿಡಿಯನ್ ಓವರ್ ಲ್ಯಾಂಡ್ ಎಡಿಷನ್ ಎಸ್ ಯುವಿಯನ್ನು ತಂದಿದೆ. ಈ ಕಾರು ಗಮನಾರ್ಹ ನವೀಕರಣಗಳನ್ನು ಒಳಗೊಂಡಿದೆ. ಹೊಸ ಅಲಾಯ್ ಚಕ್ರಗಳು, ನವೀಕರಿಸಿದ ಗ್ರಿಲ್ ಮಾದರಿ, ಬಾಡಿ ಬಣ್ಣದ ಬಂಪರ್ ಗಳನ್ನು ಹೊಂದಿದೆ. ಆದಾಗ್ಯೂ, ಕಂಪನಿಯು ಹೊಸ ಜೀಪ್ ಮೆರಿಡಿಯನ್ ರೂಪಾಂತರದ ಬೆಲೆಯನ್ನು ಘೋಷಿಸಿಲ್ಲ.

ಜೀಪ್ ಕಂಪಾಸ್ 2023 ಕಾರಿನಲ್ಲಿ  ಗ್ಲಾಸಿ ಬ್ಲ್ಯಾಕ್ 18 ಇಂಚಿನ ಅಲಾಯ್ ವ್ಹೀಲ್ ಗಳು, ಫ್ರಂಟ್ ಎಲ್ ಇಡಿ ರಿಫ್ಲೆಕ್ಟರ್ ಹೆಡ್ ಲೈಟ್ ಗಳು, ಸ್ಟ್ಯಾಂಡರ್ಡ್ ಎಲ್ ಇಡಿ ಟೈಲ್ ಲ್ಯಾಂಪ್ ಗಳು, ಎಲ್ ಇಡಿ ಫಾಗ್ ಲ್ಯಾಂಪ್ ಗಳು ಮತ್ತು ಎಲ್ ಇಡಿ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಗಳನ್ನು ಹೊಂದಿದೆ.  ಯುನಿಕ್ ಇಗ್ನಿಟಾ ರೆಡ್ ಹೈಲೈಟ್ ಗಳನ್ನು ಹೊಂದಿದೆ.

Jeep Compass Price
Image Credit: Drive

JEEP COMPASS 2023 ಕಾರಿನ ಇಂಜಿನ್ ಹಾಗು ಮೈಲೇಜ್

ಈ ಕಾರು 10.1-ಇಂಚಿನ ಇನ್ಫೋಟೈನ್ ಮೆಂಟ್ ಸಿಸ್ಟಂ, 10.25-ಇಂಚಿನ ಫ್ರೇಮ್ ಲೆಸ್ ಫುಲ್ ಕಲರ್ ಡಿಜಿಟಲ್ ಟಿಎಫ್ ಟಿ ಗೇಜ್ ಕ್ಲಸ್ಟರ್, ಪನೋರಮಿಕ್ ಸನ್ ರೂಫ್, ವೈರ್ ಲೆಸ್ ಚಾರ್ಜಿಂಗ್ ಪ್ಯಾಡ್, ಲೈನ್ 4-ಸಿಲಿಂಡರ್ ಎಂಜಿನ್ ನಲ್ಲಿ 2-ಲೀಟರ್ ಇಂಜೆಕ್ಟೆಡ್ ಟರ್ಬೋಚಾರ್ಜ್, 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಅಥವಾ 9-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಮತ್ತು ಎಂಜಿನ್ ಸ್ಟಾಪ್ ಸ್ಟಾರ್ಟ್ ತಂತ್ರಜ್ಞಾನವನ್ನು ಹೊಂದಿದೆ. ಈ ಕಾರು 0 ರಿಂದ 100 ಕಿ.ಮೀ ವೇಗವನ್ನು 9.8 ಸೆಕೆಂಡುಗಳಲ್ಲಿ ಕ್ರಮಿಸುತ್ತದೆ ಎಂದು ಕಂಪನಿ ಹೇಳಿದೆ.

ಜೀಪ್ ಕಂಪಾಸ್ 2023 ಕಾರಿನ ಬೆಲೆ

ಜೀಪ್ ಕಂಪಾಸ್ 2023 ರ ಬೆಲೆಯು ಈಗ ರೂ.20.49 ಲಕ್ಷಗಳಾಗಿದೆ. ಇದು ಎಕ್ಸ್ ಶೋರೂಂ ಬೆಲೆಯಾಗಿದೆ. ಎಂಟ್ರಿ ಲೆವೆಲ್ ಕಾರಿನ ಬೆಲೆ ಸುಮಾರು 1 ಲಕ್ಷ ರೂ.ಗಳಷ್ಟು ಕಡಿಮೆಯಾಗಿದೆ. ಸ್ವಯಂಚಾಲಿತ ಶ್ರೇಣಿಯ ಕಾರುಗಳ ಬೆಲೆ ರೂ.  23.99 ಲಕ್ಷ ರೂ.ಗಳಿಂದ ಪ್ರಾರಂಭವಾಗುತ್ತದೆ. ಇದು ಎಕ್ಸ್ ಶೋರೂಂ ಬೆಲೆಯೂ ಆಗಿದೆ.

ಹಿಂದಿನ ಮಾದರಿಗೆ ಹೋಲಿಸಿದರೆ. ದರವು ಶೇಕಡಾ 20 ರಷ್ಟು ಕಡಿಮೆಯಾಗಿದೆ. ಇದರರ್ಥ ಸ್ವಯಂಚಾಲಿತ ರೂಪಾಂತರವು ಈಗ ಗ್ರಾಹಕರಿಗೆ ಹೆಚ್ಚು ಕೈಗೆಟುಕುವ ಬೆಲೆಯಲ್ಲಿ ಬರುತ್ತಿದೆ. ಇದರ ಬೆಲೆ ಸುಮಾರು 6 ಲಕ್ಷ ಆಗಿರುತ್ತದೆ.

Leave A Reply

Your email address will not be published.