Bajaj Chetak: ಹೊಸ ಅವತಾರದಲ್ಲಿ ಬಂತು ಬಜಾಜ್ ಚೇತಕ್, ಕಡಿಮೆ ಬೆಲೆ 108 ಕಿಲೋಮೀಟರ್ ಮೈಲೇಜ್.

ಎಲೆಕ್ಟ್ರಿಕ್ ಅವತಾರದಲ್ಲಿ ಬಂತು ಬಜಾಜ್ ಚೇತಕ್.

Bajaj Chetak Urbane Electric Scooter: ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಈಗ ಎಲೆಕ್ಟ್ರಿಕ್ ವಾಹನಗಳದ್ದೇ ಕಾರುಬಾರು. ಎಲ್ಲಿ ಕೇಳಿದರು, ಎಲ್ಲಿ ನೋಡಿದರು ಎಲ್ಲಾ ಕಡೆ ಎಲೆಕ್ಟ್ರಿಕ್ ವಾಹನಗಳೇ ಕಾಣುತ್ತಿದೆ ಅದರಲ್ಲೂ ಎಲೆಕ್ಟ್ರಿಕ್ ಸ್ಕೂಟರ್ ಗಳಂತೂ ದಿನದಿಂದ ದಿನಕ್ಕೆ ಅನೇಕ ವಿಶೇಶತೆಗಳೊಂದಿಗೆ ರಸ್ತೆಗೆ ಇಳಿಯುತ್ತಿದೆ ಅಂತಹ ವಿಶೇಶತೆ ಇರುವ ಇನ್ನೊಂದು ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ನಾವು ಇಲ್ಲಿ ತಿಳಿಯೋಣ ಅದ್ಯಾವುದೆಂದರೆ ಬಜಾಜ್, ಹೊಸ ಚೇತಕ್ ಅರ್ಬೇನ್ ಎಲೆಕ್ಟ್ರಿಕ್ ಸ್ಕೂಟರ್. ದೇಶದ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಬಜಾಜ್ ನ ಈ ಸ್ಕೂಟರ್ ದೇಶದಲ್ಲಿ ಬಹಳ ಜನಪ್ರಿಯತೆಯನ್ನು ಪಡೆದುಕೊಂಡಿದೆ.

Bajaj Chetak Urbane Electric Scooter
Image Credit: Zigwheels

ಎಲೆಕ್ಟ್ರಿಕ್ ರೂಪದಲ್ಲಿ ಚೇತಕ್ ಅರ್ಬೇನ್(Chetak Urbane) ಸ್ಕೂಟರ್

ದೇಶದಲ್ಲಿ ಫ್ಯಾಮಿಲಿ ಸ್ಕೂಟರ್ ಎಂದು ಜನಪ್ರಿಯವಾಗಿದ್ದ ಇಂಧನ ಚಾಲಿತ ಬಜಾಜ್ ಚೇತಕ್, ದಶಕದ ಹಿಂದೆಯೇ ಸ್ಥಗಿತಗೊಂಡರು ಜನರ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ಈ ಸ್ಕೂಟರ್‌ನೊಂದಿಗೆ ಕೇವಲ ಜನರಿಗೆ ಮಾತ್ರವಲ್ಲ, ಕಂಪನಿಗೂ ಅಷ್ಟೇ ಬಾಂಧವ್ಯವಿದೆ. ಇದೇ ಕಾರಣಕ್ಕೆ ಎಲೆಕ್ಟ್ರಿಕ್ ರೂಪದಲ್ಲಿ ಚೇತಕ್ ಅನ್ನು ಪರಿಚಯಿಸಿದೆ. ಹಾಗಾಗಿ ಹೊಸ ಚೇತಕ್ ಅರ್ಬೇನ್ ಸ್ಕೂಟರ್ ಅನ್ನು ಕಂಪನಿ ಇದೀಗ ಹೆಚ್ಚಿನ ರೇಂಜ್ ಹಾಗೂ ಹೊಸ ಫೀಚರ್‌ಗಳೊಂದಿಗೆ ಬಿಡುಗಡೆ ಮಾಡಿದೆ.

ಚೇತಕ್ ಅರ್ಬೇನ್‌( Chetak Urbane )ಸ್ಕೂಟರ್ ನ ರಚನೆ

ಹೊಸ ಚೇತಕ್ ಅರ್ಬೇನ್‌ನಲ್ಲಿ ಈ ಹಿಂದಿನ ಪ್ರೀಮಿಯಂ ವೇರಿಯೆಂಟ್‌ನ ಅದೇ ಬಣ್ಣದ LCD ಡಿಸ್ಪ್ಲೇಯನ್ನು ನೀಡಲಾಗಿದೆ. ಸ್ಟ್ಯಾಂಡರ್ಡ್ ರೂಪದಲ್ಲಿ, ಅರ್ಬೇನ್ 63kph ಗರಿಷ್ಠ ವೇಗವನ್ನು ನೀಡುತ್ತತ್ತು. ಜೊತೆಗೆ ಕೇವಲ ಒಂದು ರೈಡಿಂಗ್ ಮೋಡ್‌ (ಇಕೋ)ನೊಂದಿಗೆ ಬರುತ್ತಿತ್ತು. ಆದರೆ “Tecpac” ಅನ್ನು ತರುವುದರೊಂದಿಗೆ, ಗರಿಷ್ಠ ವೇಗವು 73kph ಗೆ ಏರುತ್ತಿದ್ದು, ಜೊತೆಗೆ ಸ್ಪೋರ್ಟ್ ಎಂಬ ರೈಡಿಂಗ್ ಮೋಡ್ ಸಹ ನೀಡಲಾಗಿದೆ.

Bajaj Chetak Urbane Electric Scooter Feature
Image Credit: Financialexpress

ಚೇತಕ್ ಅರ್ಬೇನ್‌ ( Chetak Urbane )ಸ್ಕೂಟರ್ ನ ಬ್ಯಾಟರಿ ಸಾಮರ್ಥ್ಯ

ಚೇತಕ್ ಅರ್ಬೇನ್‌ ಸ್ಕೂಟರ್ ನ ಸ್ಟ್ಯಾಂಡರ್ಡ್ ಚಾರ್ಜರ್‌ನ ಚಾರ್ಜಿಂಗ್ ದರವು 800W ನಿಂದ 650W ಗೆ ಇಳಿದಿದೆ, ಇದರ ಪರಿಣಾಮವಾಗಿ, ಚಾರ್ಜಿಂಗ್ ಸಮಯವು 3 ಗಂಟೆ 50 ನಿಮಿಷಗಳಿಂದ 4 ಗಂಟೆ 50 ನಿಮಿಷಗಳಿಗೆ ಏರಿದೆ. ಅರ್ಬೇನ್ ವೇರಿಯೆಂಟ್ ಎರಡೂ ತುದಿಗಳಲ್ಲಿ ಡ್ರಮ್ ಬ್ರೇಕ್‌ ಗಳೊಂದಿಗೆ ಮಾತ್ರ ಬರುತ್ತದೆ.

ರಿಯಲ್ ವರ್ಲ್ಡ್ ಅರ್ಬೇನ್ ಸ್ವಲ್ಪ ಕಡಿಮೆ ರೇಂಜ್ ನೀಡುವ ಸಾಧ್ಯತೆಯಿದೆ, ಆದರೂ ನಿಖರವಾಗಿ ಈ ಬಗ್ಗೆ ಹೇಳಲಾಗುವುದಿಲ್ಲ. ಈಗಷ್ಟೆ ಬಿಡುಗಡೆಯಾಗಿರುವುದರಿಂದ ರೇಂಜ್ ಟೆಸ್ಟ್ ಬಳಿಕ ನೋಡಬೇಕಾಗಿದೆ. ಬಜಾಜ್ ವೆಬ್‌ಸೈಟ್ ದೃಢೀಕರಿಸುವುದೇನೆಂದರೆ, ಹೊಸ ಚೇತಕ್ ಅರ್ಬೇನ್ ಪ್ರಸ್ತುತ ಮಾದರಿಯಲ್ಲಿರುವ ಅದೇ 2.9kWh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ.

ಚೇತಕ್ ಅರ್ಬೇನ್‌ ( Chetak Urbane )ಸ್ಕೂಟರ್ ನ ರೇಂಜ್

ಹೊಸ ಬಜಾಜ್ ಚೇತಕ್ ಅರ್ಬೇನ್‌ ಸ್ಕೂಟರ್ ಪ್ರಸ್ತುತ ಹಳೆಯ ಚೇತಕ್ ನೀಡುವ 108 ಕಿ.ಮೀಗಿಂತ ಸ್ವಲ್ಪ ಹೆಚ್ಚಿನ ರೇಂಜ್ 113 ಕಿ.ಮೀ ನೀಡುತ್ತದೆ ಎಂದು ಕಂಪನಿ ಹೇಳಿದೆ. ಇದು ಬಜಾಜ್ ಚೇತಕ್ ಅರ್ಬೇನ್‌ನ IDC-ಪ್ರಮಾಣೀಕೃತ ರೇಂಜ್ ಆಗಿದೆ. ಆದರೆ ಪ್ರಸ್ತುತ ಹಳೆಯ ಚೇತಕ್ ಇವಿ ಪ್ರೀಮಿಯಂ, 108km ರಿಯಲ್ ವರ್ಲ್ಡ್ ರೇಂಜ್ ಎಂದು ಕ್ಲೈಮ್ ಮಾಡಿದ್ದರೂ ಅದರ IDC ರೇಟಿಂಗ್ 126km ಇದೆ.

Bajaj Chetak Urbane Electric Price
Image Credit: Autocarindia

ಚೇತಕ್ ಅರ್ಬೇನ್‌( Chetak Urbane ) ಸ್ಕೂಟರ್ ನ ಬೆಲೆ

ಬಜಾಜ್ ತನ್ನ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಚೇತಕ್ ಅರ್ಬೇನ್ ಸ್ಟ್ಯಾಂಡರ್ಡ್ ವೇರಿಯೆಂಟ್ ಅನ್ನು 1.15 ಲಕ್ಷ ರೂ. ಮತ್ತು ಹೆಚ್ಚುವರಿ “Tecpac” ಗೆ 1.21 ಲಕ್ಷ ರೂ.ವನ್ನು ನಿಗದಿ ಮಾಡಿ ಇತ್ತೀಚಿಗೆ ಬಿಡುಗಡೆ ಮಾಡಿದೆ. ಈ ಟಾಪ್ ವೇರಿಯೆಂಟ್ ಹೆಚ್ಚಿನ ವೈಶಿಷ್ಟ್ಯಗಳು ಮತ್ತು ಪರ್ಫಾಮೆನ್ಸ್ ಅನ್ನು ಅನ್‌ಲಾಕ್ ಮಾಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

Leave A Reply

Your email address will not be published.