Komaki: 200 ಕಿಮೀ ರೇಂಜ್‌ ನೀಡುವ ಎಲೆಕ್ಟ್ರಿಕ್‌ ಸ್ಕೂಟರ್‌ ಅಗ್ಗದ ಬೆಲೆಗೆ, ಹೊಸ ಸ್ಕೂಟರ್ ಇಂದೇ ಬುಕ್ ಮಾಡಿ.

200 ಕಿಮೀ ರೇಂಜ್‌ ನೀಡುವ ಎಲೆಕ್ಟ್ರಿಕ್‌ ಸ್ಕೂಟರ್‌ ಅಗ್ಗದ ಬೆಲೆಗೆ.

Komaki Electric Scooter: ದೇಶದೆಲ್ಲೆಡೆ ಎಲೆಕ್ಟ್ರಿಕ್ ಸ್ಕೂಟರ್ ಗಳ ಹವಾ ಹೆಚ್ಚಾಗುತ್ತಿದೆ. ಈಗ ಹೆಚ್ಚಿನವರು ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಹಳ ಇಷ್ಟ ಪಟ್ಟು ಖರೀದಿ ಮಾಡುತ್ತಿದ್ದು, ಅಷ್ಟೇ ಅಲ್ಲದೆ ಎಲೆಕ್ಟ್ರಿಕ್ ಸ್ಕೂಟರ್ ದಿನದಿಂದ ದಿನಕ್ಕೆ ಹೆಚ್ಚಿನ ವಿಶೇಶತೆಯನ್ನು ಪಡೆದುಕೊಳ್ಳುತ್ತಿದೆ,

ಬೇಡಿಕೆ ಹೆಚ್ಚಾಗುತ್ತಿದ್ದಂತೆ ಬೆಲೆ ಕೂಡ ಏರಿಕೆ ಆಗುತ್ತಿರುವ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಇನ್ನು ಬಹಳ ಡಿಸ್ಕೌಂಟ್ ನಲ್ಲಿ ಖರೀದಿಸುವ ಅವಕಾಶ ನಿಮ್ಮದಾಗಲಿದೆ. ಕೋಮಾಕಿ ಎಂಬ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನ ತಯಾರಿಕಾ ಕಂಪನಿಯೊಂದು ತನ್ನ ಸ್ಕೂಟರ್‌ಗಳ ಮೇಲೆ ಭಾರೀ ಡಿಸ್ಕೌಂಟ್‌ ಘೋಷಿಸಿದ್ದು ಬಹಳ ಅಗ್ಗದ ಬೆಲೆಯಲ್ಲಿ ಈ ಸ್ಕೂಟರ್ ಅನ್ನು ಖರೀದಿ ಮಾಡಬಹುದಾಗಿದೆ.

Komaki Electric Scooter
Image Credit: Zeebiz

ಕೋಮಕಿ ಎಲೆಕ್ಟ್ರಿಕ್ (Komaki Electric ) ಸ್ಕೂಟರ್ ವೈಶಿಷ್ಟತೆಗಳು

ಕೋಮಕಿ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ನಿಮಗೆ ಟಿಎಫ್‌ಟಿ ಡಿಸ್ಪ್ಲೇ ಇನ್ಸ್ಟ್ರುಮೆಂಟ್‌ ಕ್ಲಸ್ಟರ್‌ ದೊರಕುತ್ತಿದ್ದು, ಇದು ನಿಮ್ಮ ಸವಾರಿಯ ಅನುಭವವನ್ನು ಇನ್ನಷ್ಟು ಉತ್ತಮಗೊಳಿಸಲಿದೆ. ಈ ಬೈಕ್‌ನಲ್ಲು ಬ್ಲೂಟೂತ್‌ ಮೂಲಕ ಹಾಡುಗಳನ್ನು ಕನೆಕ್ಟ್‌ ಮಾಡುವ ವ್ಯವಸ್ಥೆಯೂ ಸಹ ಇದೆ. ಇದರ ಲೈಟಿಂಗ್‌ ವ್ಯವಸ್ಥೆಯಲ್ಲಿ ಎಲ್ಲವೂ ಎಲ್‌ಇಡಿ ಲೈಟ್‌ಗಳಾಗಿದ್ದು ಹೆಚ್ಚಿನ ಪ್ರಕಾಶವನ್ನು ಹೊರ ಹಾಕುತ್ತದೆ. ಕೋಮಾಕಿ ಸ್ಕೂಟರ್‌ ಚೆರ್ರಿ ರೆಡ್‌, ಮೆಟಲ್‌ ಗ್ರೇ, ಜೆಟ್‌ ಬ್ಲಾಕ್‌ ಸೇರಿದಂತೆ ವಿವಿಧ ಬಣ್ಣಗಳಲ್ಲಿ ಆಯ್ಕೆಯಿದೆ. ಇನ್ನು ಕೋಮಾಕಿಯ ಎಲ್‌ವೈ ಬೈಕ್ ಅನ್ನು ಕಡಿಮೆ ಬೆಲೆಗೆ ನೀಡುತ್ತಿರುವುದರಿಂದ ಜನ ಸಾಮಾನ್ಯರಿಗೂ ಎಲೆಕ್ಟ್ರಿಕ್‌ ಬೈಕ್‌ ಕೈಗೆಟಕುವಂತೆ ಆಗಿದೆ .

ಕೋಮಕಿ ಎಲೆಕ್ಟ್ರಿಕ್ (Komaki Electric ) ಸ್ಕೂಟರ್ ಬ್ಯಾಟರಿ ಪವರ್ ಹಾಗು ರೇಂಜ್

ಕೋಮಕಿ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ರಿಮೂವಬಲ್‌ ಬ್ಯಾಟರಿಯ ಸೌಲಭ್ಯವನ್ನು ಕಂಪನಿ ನೀಡುತ್ತಿದ್ದು, ಇದನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು ನಾಲ್ಕುಗಂಟೆ ಐವತ್ತೈದು ನಿಮಿಷಗಳು ಬೇಕಾಗುತ್ತದೆ. ಅಂದರೆ ಸುಮಾರು 5 ಗಂಟೆಯ ಅವಧಿಯಲ್ಲಿ ಈ ಸ್ಕೂಟರ್ ಫುಲ್‌ ಚಾರ್ಜ್‌ ಆಗಿ ಸವಾರಿಗೆ ಸಿದ್ದವಾಗಿ ನಿಲ್ಲುತ್ತದೆ.

ಈ ಸ್ಕೂಟರ್‌ ನಿಮಗೆ ಒಂದು ಚಾರ್ಜ್‌ಗೆ ಸುಮಾರು 85 ಕಿಮೀ ರೇಂಜ್‌ ನೀಡುತ್ತದೆ. ಆದರೆ ಇದೀ ಬೈಕ್‌ನ ಡ್ಯುಯಲ್‌ ಬ್ಯಾಟರಿಯ ಮಾದರಿಯಲ್ಲಿ ನಿಮಗೆ ಸುಮಾರು 200 ಕಿಮೀ ತನಕವೂ ರೇಂಜ್‌ ನೀಡುತ್ತಿದ್ದು ನೀವು ಯಾವುದೇ ಆತಂಕವಿಲ್ಲದೆ ದೂರದ ಪ್ರಯಾಣವನ್ನು ಮಾಡಬಹುದಾಗಿದೆ.

Komaki Electric Scooter Price
Image Credit: Rushlane

ಕೋಮಕಿ ಎಲೆಕ್ಟ್ರಿಕ್ (Komaki Electric ) ಸ್ಕೂಟರ್ ಬೆಲೆ ಹಾಗು ಆಫರ್

ಮೂಲತಃ ಕೋಮಕಿ ಎಲೆಕ್ಟ್ರಿಕ್ ಸ್ಕೂಟರ್‌ ಬೆಲೆ ಸುಮಾರು 96,968 ರೂ.ಗಳು ( ಎಕ್ಸ್‌ ಶೋರೂಮ್‌) ಆಗಿದ್ದು, ಸುಮಾರು 19,000 ರೂ.ಗಳ ಡಿಸ್ಕಂಟ್‌ ನಂತರ ಈಗ ಬರೀ 78,000 ರೂಪಾಯಿ ಬೆಲೆಗೆ ನಿಮಗೆ ಈ ಎಲೆಕ್ಟ್ರಿಕ್‌ ಸ್ಕೂಟರ್‌ ಲಭ್ಯವಾಗಲಿದೆ. ಇನ್ನು ಮಾಹಿತಿಗಳ ಪ್ರಕಾರ ಇದು ಲಿಮಿಟೆಡ್‌ ಅವಧಿಯ ಆಫರ್‌ ಆಗಿದ್ದು ಕೂಡಲೇ ಧಾವಿಸಿದರೆ ಕಡಿಮೆ ಬೆಲೆಗೆ ಈ ಸ್ಕೂಟರ್‌ ಅನ್ನು ಸ್ವಂತಗೊಳಿಸಬಹುದು. ಆದರೆ ಈ ಆಫರ್‌ ಎಂದಿನಿಂದ ಲಭ್ಯವಾಗಲಿದೆ ಎಂದು ಕಂಪನಿ ಇನ್ನೂ ಮಾಹಿತಿಯನ್ನು ಹೊರ ಹಾಕಿಲ್ಲ. ಕಡಿಮೆ ಬೆಲೆಯಾದರೂ ಇದು ಅಧಿಕ ರೇಂಜ್‌ ನೀಡುವ ಸ್ಕೂಟರ್‌ ಇದಾಗಿದೆ.

Leave A Reply

Your email address will not be published.