Actress Samantha: ಶೀಘ್ರದಲ್ಲೇ ತಾಯಿಯಾಗಲಿರುವ ಸಮಂತಾ ರುತ್‌ ಪ್ರಭು…? ಮೆಚ್ಚಿದ ಅಭಿಮಾನಿಗಳು.

ಶೀಘ್ರದಲ್ಲಿ ತಾಯಿಯಾಗಿ ಕಾಣಿಸಿಕೊಳ್ಳಲಿದ್ದಾರೆ ನಟಿ ಸಮಂತಾ.

Actress Samantha Ruth Prabhu Latest News: ನಟಿ ಸಮಂತಾ ರುತ್‌ ಪ್ರಭು (samantha Ruth Prabhu) ಇವರು ಜನಪ್ರಿಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿದ ಈ ನಟಿ ದಿಗ್ಗಜ ನಟರ ಜೊತೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ. ನಟಿ ಸಮಂತಾ ಹಾಗು ನಟ ನಾಗಚೈತನ್ಯ ಹಲವು ವರ್ಷಗಳಿಂದ ಪ್ರೀತಿಸಿ, ಮನೆಯವರ ಒಪ್ಪಿಗೆ ಮೇರೆಗೆ ಹಸೆಮಣೆ ಏರಿ ವೈವಾಹಿಕ ಜೀವನ ಸಾಗಿಸಿದ್ದರು. ಅಭಿಮಾನಿಗಳ ಮೆಚ್ಚಿನ ಜೋಡಿಯಾಗಿದ್ದ ಈ ಜೋಡಿ, ಈಗ ಎರಡು ವರ್ಷಗಳ ಹಿಂದೆ ವಿಚ್ಛೇದನ ಪಡೆದರು. ಈ ಜೋಡಿ ಸಧ್ಯಕ್ಕೆ ಸಿನಿಮಾ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ.

Actress Samantha Ruth Prabhu Latest News
Image Credit: Filmibeat

ಹಿಟ್ ಮೇಲೆ ಹಿಟ್ ಸಿನಿಮಾ ಕೊಟ್ಟ ನಟಿ ಸಮಂತಾ

ತನ್ನ ವೈವಾಹಿಕ ಜೀವನದಿಂದ ಹೊರ ಬಂದ ಈ ನಟಿ ಹಲವು ಸಿನಿಮಾಗಳ ಕೆಲಸದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡರು. ಆದರೆ ಈ ನಟಿಗೆ ಇನ್ನೊಂದು ಶಾಕ್ ಎದುರಾಗಿತ್ತು ಅದೇನೆಂದರೆ ಒಂದು ವಿಭಿನ್ನ ಕಾಯಿಲೆ ಸಮಂತಾ ಅವರನ್ನು ಆವರಿಸಿ, ಅವರು ಹಲವು ಕಡೆ ವೈದ್ಯಕೀಯ ಚಿಕಿತ್ಯೆಗೆ ಒಳಗಾಗಬೇಕಾಯಿತು.

ಈಗ ಚೇತರಿಸಿಕೊಂಡಿರುವ ಈ ನಟಿ, ಶಿವ ನಿರ್ವಾಣ ನಿರ್ದೇಶನದ, ಕುಶಿ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಅವರೊಂದಿಗೆ ಕಾಣಿಸಿಕೊಂಡರು. ಇದು ಬಾಕ್ಸ್ ಆಫೀಸ್‌ನಲ್ಲಿ ಮುಗ್ಗರಿಸಿತು. ಈ ಸಿನಿಮಾ ನಂತರ ನಟಿ ಸಮಂತಾ ಕೊಂಚ ಬ್ರೇಕ್ ತೆಗೆದುಕೊಳ್ಳಲಿದ್ದಾರೆ ಎನ್ನಲಾಗಿದೆ.

Samantha Ruth Prabhu decides to adopt kids
Image Credit: Stylesatlife

ಶೀಘ್ರದಲ್ಲೇ ತಾಯಿಯಾಗಲಿದ್ದಾರೆ ಸಮಂತಾ ರುತ್‌ ಪ್ರಭು

ಸಮಂತಾ ರುತ್‌ ಪ್ರಭು ಶೀಘ್ರದಲ್ಲೇ ತಾಯಿಯಾಗಲಿದ್ದಾರೆ ಎಂಬ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ವರದಿಯ ಪ್ರಕಾರ, ಸಮಂತಾ ಸಿಂಗಲ್‌ ಪೇರೆಂಟ್‌ ಆಗಲು ಬಯಸಿದ್ದಾರಂತೆ. ಇಬ್ಬರು ಮಕ್ಕಳನ್ನು ದತ್ತು ತೆಗೆದುಕೊಳ್ಳಲು ಯೋಚಿಸುತ್ತಿದ್ದಾರಂತೆ. ತಾಯಿಯಾಗಿ ತಾನೇ ಸಾಕಲು ನಿರ್ಧರಿಸಿದ್ದಾರಂತೆ. ತನ್ನ ಫೌಂಡೇಶನ್ ‘ಪ್ರತ್ಯೂಷಾ ಸಪೋರ್ಟ್’ಗೆ ಹಣ ನೀಡುವುದರ ಜೊತೆಗೆ, ಸಮಂತಾ ಇಬ್ಬರು ಮಕ್ಕಳನ್ನು ಒಂದೇ ಬಾರಿಗೆ ದತ್ತು ತೆಗೆದುಕೊಳ್ಳುವ ಮೂಲಕ ತಾಯಿಯಾಗಲು ಬಯಸಿದ್ದಾರೆ ಎನ್ನಲಾಗಿದೆ.

Leave A Reply

Your email address will not be published.