PM Kisan Money: ಕಿಸಾನ್ 15 ನೇ ಕಂತಿನ ಹಣ ಇನ್ನು ಬಂದಿಲ್ಲ ಅಂದರೆ ತಕ್ಷಣ ಈ ಕೆಲಸ ಮಾಡಿ, ಕೇಂದ್ರದ ಆದೇಶ.

ಕಿಸಾನ್ ಸಮ್ಮಾನ್ ಹಣ ಬಂದಿಲ್ಲ ಅಂದರೆ ತಕ್ಷಣ ಈ ಕೆಲಸ ಮಾಡಿ.

PM Kisan Samma Scheme 15th Installment: ಕೇಂದ್ರ ಸರ್ಕಾರದ ಬಹಳ ಪ್ರಮುಖ ಯೋಜನೆಯಾದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (Pradhan Mantri Kisan Samman Nidhi) ಯೋಜನೆಯ 15ನೇ ಕಂತಿನ ಹಣವನ್ನು ನವೆಂಬರ್ 15, 2023 ರಂದು, ಪಿಎಂ ನರೇಂದ್ರ ಮೋದಿ ಸ್ವತಃ ಬಿಡುಗಡೆ ಮಾಡಿದ್ದು, ಫಲಾನುಭವಿಗಳ ಖಾತೆಯನ್ನು ಸೇರಿದೆ ಕಿಸಾನ್ ಹಣ. ಇದುವರೆಗೆ ಈ ಯೋಜನೆಯಡಿ 14 ಕಂತಿನ ಹಣವನ್ನು ವರ್ಷಕ್ಕೆ 6000 ರೂಪಾಯಿಯಂತೆ ವಿತರಣೆ ಮಾಡಲಾಗಿತ್ತು.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ, 8 ಕೋಟಿಗೂ ಹೆಚ್ಚು ರೈತರು 15 ನೇ ಕಂತಿನ ಪ್ರಯೋಜನವನ್ನು ಪಡೆದಿದ್ದಾರೆ. ಆದರೆ ಇನ್ನು ಹಲವರು ಕೆಲವು ಕಾರಣಗಳಿಂದ ಕಿಸಾನ್ ಹಣ ಪಡೆದಿಲ್ಲ ಹಾಗಿದ್ದಲ್ಲಿ ಅಂತವರು ತಪ್ಪದೆ ಈ ಕೆಲಸವನ್ನು ಮಾಡಿದರೆ ಕಿಸಾನ್ ಹಣ ನಿಮ್ಮ ಖಾತೆಗೆ ವರ್ಗಾವಣೆ ಆಗಲಿದೆ.

PM Kisan Samman Nidhi Latest Update
Image Credit: India

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ರೈತರ ಯೋಜನೆ ಆಗಿದೆ

ರೈತರನ್ನು ಆರ್ಥಿಕವಾಗಿ ಬೆಂಬಲಿಸುವ ದ್ರಷ್ಟಿಯಿಂದ ಈ ಯೋಜನೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಜಾರಿಗೆ ತಂದರು. ಈ ಯೋಜನೆಯಡಿ 08 ಕೋಟಿಗೂ ಅಧಿಕ ರೈತರು ಕಿಸಾನ್ ಹಣವನ್ನು ಈಗಾಗಲೇ ಪಡೆದಿದ್ದಾರೆ. ಹಾಗು ಈ ಯೋಜನೆ ಬಹಳ ಯಶಶ್ವಿಯಾಗಿ ಮುಂದುವರೆಯುತ್ತಿದ್ದು, 15 ನೇ ಕಂತಿನ ಹಣವನ್ನು ಮೋದಿ ಬಿಡುಗಡೆ ಮಾಡಿದ್ದಾರೆ. ಹಾಗಾದರೆ ರೈತರು ಆದಷ್ಟು ಬೇಗೆ ತಮ್ಮ ಖಾತೆಗೆ ಹಣ ಜಮಾ ಆಗಿದೀಯ ಎಂದು ಚೆಕ್ ಮಾಡಿಕೊಳ್ಳತಕ್ಕದ್ದು.

ಕಿಸಾನ್ 15 ನೇ ಕಂತಿನ ಹಣ ಬರದೇ ಇರಲು ಕಾರಣಗಳು

ತಪ್ಪು ಬ್ಯಾಂಕ್ ಮಾಹಿತಿ ಹಾಗು ಇ-ಕೆವೈಸಿ ಮಾಡಿಸದೇ ಇರುವುದು

ಪಿಎಂ ಕಿಸಾನ್ ಯೋಜನೆಯಡಿ ರೈತರು 15 ನೇ ಕಂತಿನಿಂದ ವಂಚಿತರಾಗಿದ್ದರೆ , ಅವರ ಬ್ಯಾಂಕ್ ಖಾತೆ ಮಾಹಿತಿ ತಪ್ಪಾಗಿದೆ ಅಥವಾ ಅವರ ಫಾರ್ಮ್ನಲ್ಲಿ ತಪ್ಪು ಇದೆ. ಆದ್ದರಿಂದ ಇದನ್ನು ಸರಿ ಪಡಿಸಿಕೊಳ್ಳುವ ಕೆಲಸವನ್ನು ತಕ್ಷಣವೇ ಮಾಡುವ ಮೂಲಕ ನೀವು ಕಂತಿನ ಲಾಭವನ್ನು ಪಡೆಯಬಹುದು. ಇ-ಕೆವೈಸಿ ಮಾಡದ ರೈತರ 15 ನೇ ಕಂತು ಸ್ಥಗಿತಗೊಂಡಿದೆ. ಆದಾಗ್ಯೂ, ನಿಯಮಗಳ ಅಡಿಯಲ್ಲಿ, ಯೋಜನೆಗೆ ಸಂಬಂಧಿಸಿದ ಎಲ್ಲಾ ರೈತರು ಅದನ್ನು ಮಾಡುವುದು ಕಡ್ಡಾಯವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಈ ಕೆಲಸವನ್ನು ತಕ್ಷಣವೇ ಮಾಡಬೇಕು, ಇದರಿಂದ ನೀವು ಪ್ರಯೋಜನವನ್ನು ಪಡೆಯಬಹುದು.

PM Kisan Yojana latest update
Image Credit: Zeebiz

ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಕಡ್ಡಾಯ

ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸುವಂತೆ ಸರಕಾರ ಈ ಹಿಂದೆಯೇ ಆದೇಶಿಸಿತು ಒಂದು ವೇಳೆ ನೀವು ಇನ್ನು ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸದೇ ಇದ್ದಲ್ಲಿ ಈ ಬಾರಿ ಕಿಸಾನ್ 15 ನೇ ಕಂತಿನಿಂದ ವಂಚಿತರಾಗಿದ್ದೀರಿ. ನೀವು ಬ್ಯಾಂಕಿಗೆ ಹೋಗುವ ಮೂಲಕ ಈ ಕೆಲಸವನ್ನು ತಕ್ಷಣ ಮಾಡಬಹುದು, ಅದರ ನಂತರ ನೀವು ಕಂತಿನ ಪ್ರಯೋಜನವನ್ನು ಪಡೆಯಬಹುದು. ಅಷ್ಟೇ ಅಲ್ಲದೆ ಬೇರೆ ಯಾವುದಾದರು ಸಮಸ್ಯೆ ಇದೆಯಾ ಎಂದು ಕೂಡ ನೀವು ನಿಮ್ಮ ಪಂಚಾಯತ್ ನಲ್ಲಿ ವಿಚಾರಿಸಿಕೊಳ್ಳಬಹುದಾಗಿದೆ.

Leave A Reply

Your email address will not be published.