RBI: 2000 ರೂ ನೋಟುಗಳ ಮೇಲೆ ಇನ್ನೊಂದು ಘೋಷಣೆ ಮಾಡಿದ RBI, ಹೊಸ ನಿಯಮ ಜಾರಿಗೆ.

2000 ರೂ ನೋಟುಗಳ ಮೇಲೆ RBI ಇನ್ನೊಂದು ಘೋಷಣೆಯನ್ನ ಮಾಡಿದೆ.

RBI About 2000 note Exchange: ಬ್ಯಾಂಕುಗಳು 2,000 ರೂಪಾಯಿ ನೋಟುಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿದ ನಂತರ ಜನರು ಈಗ 2,000 ರೂಪಾಯಿ ನೋಟುಗಳನ್ನು ಬದಲಾಯಿಸಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ನ 19 ಕಚೇರಿಗಳಲ್ಲಿ ಸರದಿಯಲ್ಲಿ ನಿಲ್ಲಲು ಪ್ರಾರಂಭಿಸಿದ್ದಾರೆ.

ಈ ವರ್ಷ ಮೇ 19 ರಂದು ಆರ್‌ಬಿಐ 2,000 ರೂಪಾಯಿ ನೋಟುಗಳನ್ನು ಹಿಂಪಡೆಯುವುದಾಗಿ ಘೋಷಿಸಿತ್ತು. 2016 ರಲ್ಲಿ ನೋಟು ಅಮಾನ್ಯೀಕರಣದ ನಂತರ ಈ ನೋಟನ್ನು ಪರಿಚಯಿಸಲಾಯಿತು. ಆ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಚಲಾವಣೆಯಿಂದ 500 ಮತ್ತು 1000 ರೂ ನೋಟುಗಳನ್ನು ಹಿಂಪಡೆಯುವುದಾಗಿ ಘೋಷಿಸಿದ್ದರು. 

RBI About 2000 note Exchange
Image Credit: Original Source

2000 ರೂಪಾಯಿ ನೋಟುಗಳ ವ್ಯವಹಾರ ರದ್ದು

ಈ ವರ್ಷ 2000 ರೂಪಾಯಿ ನೋಟುಗಳನ್ನು ಹಿಂಪಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧರಿಸಿದೆ. RBI 2000 ನೋಟುಗಳನ್ನು ಬದಲಾಯಿಸಿಕೊಳ್ಳಲು ಜನಸಾಮಾನ್ಯರಿಗೆ ಗಡುವು ವಿಧಿಸಿತ್ತು. ಈ ಹಿಂದೆ ಜನರು ಬ್ಯಾಂಕ್‌ಗಳಲ್ಲಿ 2000 ನೋಟುಗಳನ್ನು ಬದಲಾಯಿಸಿಕೊಳ್ಳಬಹುದಿತ್ತು, ಆದರೆ ಈಗ ಜನರು RBI ಕಚೇರಿಗಳಲ್ಲಿ 2000 ರೂಪಾಯಿ ನೋಟುಗಳನ್ನು ಬದಲಾಯಿಸಿಕೊಳ್ಳಲು ಹೊರಗೆ ಸರತಿ ಸಾಲುಗಳಲ್ಲಿ ನಿಂತಿದ್ದಾರೆ.

ಬ್ಯಾಂಕ್‌ನಲ್ಲಿ ನೋಟುಗಳನ್ನು ಬದಲಾಯಿಸಲು ಸಾಧ್ಯವಾಗುವುದಿಲ್ಲ

ಇತ್ತೀಚಿನ ಪ್ರಕಟಣೆಯಲ್ಲಿ ಆರ್‌ಬಿಐ ಸಾರ್ವಜನಿಕರು ಮತ್ತು ಸಂಸ್ಥೆಗಳಿಗೆ ಸೆಪ್ಟೆಂಬರ್ 30 ರೊಳಗೆ ಬ್ಯಾಂಕ್ ಶಾಖೆಗಳಲ್ಲಿ 2,000 ರೂ ನೋಟುಗಳನ್ನು ಠೇವಣಿ ಮಾಡಲು ಅಥವಾ ಬದಲಾಯಿಸಲು ಅವಧಿ ನಿಗದಿಸಿತು . ನಂತರ ಈ ದಿನಾಂಕವನ್ನು ಅಕ್ಟೋಬರ್ 7 ರವರೆಗೆ ವಿಸ್ತರಿಸಲಾಯಿತು. ಇದಾದ ನಂತರ, ಈ ನೋಟುಗಳನ್ನು ಠೇವಣಿ ಮಾಡುವ ಅಥವಾ ಬದಲಾಯಿಸುವ ಸೌಲಭ್ಯಗಳನ್ನು ಬ್ಯಾಂಕ್ ನಿಲ್ಲಿಸಲಾಯಿತು. ಈಗ ಜನರು RBI Office ಗಳಲ್ಲಿ ಮಾತ್ರ 2000 ರೂಪಾಯಿ ನೋಟುಗಳನ್ನು ಬದಲಾಯಿಸಿಕೊಳ್ಳಬಹುದು.

2000 note Exchange Latest Update
Image Credit: Original Source

ಕೋಟಿಗಟ್ಟಲೆ ನೋಟುಗಳು ಇನ್ನೂ ಚಲಾವಣೆಯಲ್ಲಿವೆ

ಕಳೆದ ಶುಕ್ರವಾರ RBI Governor Shaktinata Das ಅವರು ಒಟ್ಟು 3.43 ಲಕ್ಷ ಕೋಟಿ ರೂ.2,000 ನೋಟುಗಳು ವಾಪಸ್ ಬಂದಿದ್ದು, ಸುಮಾರು 12,000 ಕೋಟಿ ರೂ.ಗಳ ನೋಟುಗಳು ಇನ್ನೂ ಚಲಾವಣೆಯಲ್ಲಿವೆ ಎಂದು ಹೇಳಿದ್ದರು.  2000 ರೂಪಾಯಿ ನೋಟುಗಳನ್ನು ಬದಲಾಯಿಸಿಕೊಳ್ಳಲು ದೆಹಲಿ ಸೇರಿದಂತೆ ವಿವಿಧ ಆರ್‌ಬಿಐ ಕಚೇರಿಗಳಲ್ಲಿ ಜನರು ಸರತಿ ಸಾಲಿನಲ್ಲಿ ನಿಂತಿರುವುದು ಕಂಡುಬಂದಿತು. ವ್ಯಕ್ತಿಗಳು ಅಥವಾ ಸಂಸ್ಥೆಗಳು RBI ಕಚೇರಿಗಳಲ್ಲಿ ಒಂದು ಬಾರಿಗೆ 20,000 ರೂ.ಗಳ ಮಿತಿಯವರೆಗೆ 2,000 ರೂ ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದು.

Leave A Reply

Your email address will not be published.