Personal Loan: ಬ್ಯಾಂಕ್ ಸಾಲ ಮಾಡುವ ಎಲ್ಲರಿಗೂ RBI ನಿಂದ ಜಾರಿಗೆ ಬಂತು ಹೊಸ ರೂಲ್ಸ್, ಸಾಲ ಸಿಗುವುದು ಬಹಳ ಕಷ್ಟ.

ವಯಕ್ತಿಕ ಸಾಲ ಮತ್ತು ಕ್ರೆಡಿಟ್ ವಿಷಯವಾಗಿ ಹೊಸ ನಿಯಮ ಜಾರಿಗೆ ತಂದ RBI.

Personal Loan Rules Changes: ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India) ಆಗಾಗ ತನ್ನ ನಿಯಮದಲ್ಲಿ ಬದಲಾವಣೆ ಮಾಡುತ್ತಿರುತ್ತದೆ. ಪ್ರತಿಯೊಂದು ಬದಲಾವಣೆಗೂ ಪ್ರಬಲವಾದ ಕಾರಣ ಇರುತ್ತದೆ. ಹಾಗೆಯೆ ಈಗ ಗುರುವಾರದ ಷೇರುಪೇಟೆ ಮೇಲೆ ಭಾರೀ ಪ್ರಭಾವ ಬೀರಿದ್ದು, ಬ್ಯಾಂಕುಗಳು, ಎನ್‌ಪಿಎಫ್‌ಸಿಗಳು ಷೇರುಗಳು ಕುಸಿತವನ್ನು ದಾಖಲಿಸಿವೆ ವೈಯಕ್ತಿಕ ಸಾಲಗಳು (Personal loans) ಮತ್ತು ಕ್ರೆಡಿಟ್ ಕಾರ್ಡ್ಸ್‌ಗೆ (Credit Cards) ಸಂಬಂಧಿಸಿದ ನಿಯಮಗಳನ್ನು ಮತ್ತಷ್ಟು ಕಠಿಣಗೊಳಿಸಿದೆ. ಆರ್‌ಬಿಐ ರಿಸ್ಕ್ ವೇಯ್ಟ್ (risk weights) ಪ್ರಮಾಣ ಹೆಚ್ಚಿಸಿದ್ದರಿಂದ ಗ್ರಾಹಕರಿಗೆ ವೈಯಕ್ತಿಕ ಸಾಲ ಹಾಗೂ ಕ್ರೆಡಿಟ್ ಕಾರ್ಡ್ ಸಾಲ ಪಡೆಯುವುದು ಮತ್ತಷ್ಟು ಕಷ್ಟವಾಗಲಿದೆ.

RBI Loan Repayment Rule
Image Credit: Original Source

ರಿಸ್ಕ್ ವೇಯ್ಟ್ ಪ್ರಮಾಣವನ್ನು ಹೆಚ್ಚಿಸಲಾಗಿದೆ

ಸಾಲ ನೀಡುವ ಅನುಪಾತಕ್ಕೆ ಮೀಸಲಿಡುವ ಮೊತ್ತವನ್ನೇ ರಿಸ್ಕ್ ವೇಯ್ಟೇಡ್ ಅಸೆಟ್ಸ್(RWA) ಎಂದು ಕರೆಯಲಾಗುತ್ತದೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಬುಧವಾರ ಸಂಜೆ, ಬ್ಯಾಂಕ್‌ಗಳು ಮತ್ತು ಬ್ಯಾಂಕೇತರ ಹಣಕಾಸು ಕಂಪನಿಗಳಿಗೆ (ಎನ್‌ಬಿಎಫ್‌ಸಿ) ರಿಸ್ಕ್ ವೇಯ್ಟ್ ಪ್ರಮಾಣವನ್ನು ಶೇ.25ರಿಂದ 125ವರೆಗೂ ಹೆಚ್ಚಿಸುವ ನಿರ್ಧಾರ ಕೈಗೊಂಡಿದೆ. ಅಂದರೆ, ಸಾಲ ನೀಡುವಾಗ ಬ್ಯಾಂಕುಗಳು ಸಾಲ ನೀಡುವ ಪ್ರಮಾಣಕ್ಕೆ ರಿಸ್ಕ್ ವೇಯ್ಟ್ ಆಗಿ ಒಂದಿಷ್ಟು ಮೊತ್ತವನ್ನು ಮೀಸಲಿಡಬೇಕಾಗುತ್ತದೆ. ಈಗ ಆರ್‌ಬಿಐ ಈ ಮೀಸಲು ಮೊತ್ತದ ಪ್ರಮಾಣವನ್ನು ಹೆಚ್ಚಿಸಿದ್ದರಿಂದ ಬ್ಯಾಂಕುಗಳು ವೈಯಕ್ತಿಕ ಸಾಲ ಹಾಗೂ ಕ್ರೆಡಿಟ್ ಕಾರ್ಡ್ ಸಾಲ ನೀಡುವುದು ಕಷ್ಟಕರವಾಗಲಿದೆ.

ಈ ನಿಯಮವನ್ನು ಜಾರಿಗೆ ತರಲು ಕಾರಣ

ಆರ್‌ಬಿಐ ರಿಸ್ಕ್ ವೇಯ್ಟ್ಸ್ ನಿಯಮ ಬಿಗಿ ಮಾಡಿದ ಸಾರಾಂಶ ಎಂದರೆ, ಸಾಲ ನೀಡಲು ಬ್ಯಾಂಕುಗಳು ಹೆಚ್ಚಿನ ಪ್ರಮಾಣದ ಬಂಡವಾಳವನ್ನು ತೊಡಗಿಸಬೇಕಾಗುತ್ತದೆ. ಅದರರ್ಥ, ಗ್ರಾಹಕರಿಗೆ ಸಾಲಗಳು ಮತ್ತಷ್ಟು ತುಟ್ಟಿಯಾಗಲಿವೆ. ಬ್ಯಾಂಕುಗಳು ಬೇಕಾಬಿಟ್ಟಿಯಾಗಿ ಸಾಲ ನೀಡುವುದನ್ನು ತಪ್ಪಿಸಲು ಅಥವಾ ದಿವಾಳಿಯಾಗುವುದನ್ನು ತಡೆಯಲು ಆರ್‌ಬಿಐ ನಿಯಮವನ್ನು ಜಾರಿಗೆ ತಂದಿದೆ.

RBI Latest News Update
Image Credit: Thebegusarai

ಜತೆಗೆ, ಬ್ಯಾಂಕ್ ಠೇವಣಿದಾರರು ಮತ್ತು ಹೂಡಿಕೆದಾರರನ್ನು ರಕ್ಷಿಸಲು ಹೊಂದಿರಬೇಕಾದ ಕನಿಷ್ಠ ಪ್ರಮಾಣದ ಬಂಡವಾಳವನ್ನು ಗುರುತಿಸಲು ಬಳಸಲಾಗುವ ಆಸ್ತಿ ವರ್ಗೀಕರಣ ವ್ಯವಸ್ಥೆಯನ್ನು ಇದು ಸೂಚಿಸುತ್ತದೆ. ರಿಸ್ಕ್ ವೇಯ್ಟ್ಸ್ ಹೆಚ್ಚಿಸಿದ ಪರಿಣಾಮ ಬ್ಯಾಂಕುಗಳು ಮತ್ತು ಎನ್‌ಬಿಎಫ್‌ಸಿ ಗಳಿಗೆ ತಮ್ಮ ಲಾಭವನ್ನು ಸಮತೋಲನಗೊಳಿಸಲು ಹೆಚ್ಚಿನ ಪ್ರಮಾಣದ ಬಂಡವಾಳ ಬೇಕಾಗುತ್ತದೆ. ಅಲ್ಲದೇ ಇದು ರಿಟರ್ನ್ ಆನ್ ಈಕ್ವಿಟಿ ಮೇಲೂ ಪರಿಣಾಮವನ್ನು ಬೀರುತ್ತದೆ.

ಷೇರು ಪೇಟೆಯಲ್ಲಿ ಅಧಿಕ ಅಸ್ಥಿರತೆ

ಆರ್‌ಬಿಐ ರಿಸ್ಕ್ ವೇಯ್ಟ್ಸ್ ಪ್ರಮಾಣನ್ನು ಹೆಚ್ಚಿಸಿದ್ದರಿಂದ ಷೇರುಪೇಟೆ ತಲ್ಲಣಗೊಂಡಿದೆ. ಷೇರುಗಳು ವಿಶೇಷ ಬ್ಯಾಂಕಿಂಗ್ ವಲಯದಲ್ಲಿ ಭಾರೀ ಕುಸಿತವನ್ನು ದಾಖಲಿಸಿವೆ. ಎಸ್‌ಬಿಐ ಕಾರ್ಡ್ಸ್ ಷೇರುಗಳು ಶೇ.5ರಷ್ಟು ಕುಸಿತ ಕಂಡಿವೆ. ಎಸ್‌ಬಿಐ ಕಾರ್ಡ್ಸ್ ಹೆಚ್ಚು ನಷ್ಟವನ್ನು ಅನುಭವಿಸಿದೆ.

ನಂತರದ ಸ್ಥಾನದಲ್ಲಿ ಚೋಲಮಂಡಲಂ ಇನ್‌ವೆಸ್ಟ್‌ಮೆಂಟ್ ಆಯಂಡ್ ಫೈನಾನ್ಸ್ ಕಂಪನಿ ಶೇ.3, ಎಸ್‌ಬಿಐ ಮತ್ತು ಆಯಕ್ಸಿಸ್ ಬ್ಯಾಂಕುಗಳು ಶೇ. 2, ಬಜಾಜ್ ಫೈನಾನ್ಸ್ ಮತ್ತು ಶ್ರೀರಾಮ್ ಫೈನಾನ್ಸ್ ಶೇ.1ರಷ್ಟು ಕುಸಿತ ದಾಖಲಿಸಿವೆ. ಇನ್ನು ಎಚ್‌ಡಿಎಫ್‌ಸಿ ಬ್ಯಾಂಕು, ಐಸಿಐಸಿಐ ಬ್ಯಾಂಕ್, ಬಜಾಬ್ ಫಿನ್‌ಸರ್ವ್, ಕೋಟಕ್ ಮಹೀಂದ್ರಾ ಬ್ಯಾಂಕ್‌ ಷೇರುಗಳು ಶೇ.0.06ನಿಂದ 0.08ರವರೆಗೆ ಕುಸಿತ ಕಂಡಿವೆ ಎನ್ನಲಾಗಿದೆ.

Leave A Reply

Your email address will not be published.