RBI: 10 ರೂ ನಾಣ್ಯಕ್ಕೆ ಬೆಲೆ ಇಲ್ಲ, ಸುದ್ದಿಗೆ ಸ್ಪಷ್ಟನೆ ನೀಡಿದ ರಿಸರ್ವ್ ಬ್ಯಾಂಕ್.

10 ರೂಪಾಯಿ ಮುಖಬೆಲೆಯ ನಾಣ್ಯ ಇನ್ನು ಚಲಾವಣೆಯಲ್ಲಿದೆಯಾ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ.

10 Rs Coin Latest Update: ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಹಾಗು ನಾಣ್ಯದ ಬಗ್ಗೆ ಸಾರ್ವಜನಿಕರಿಗಿರುವ ಗೊಂದಲವನ್ನು ಅವಾಗವಾಗ ಸರಿ ಮಾಡುತ್ತಿರುತ್ತದೆ. ಕೆಲವರು ಹಬ್ಬಿಸುವ ಊಹಾಪೋಹಗಳನ್ನು ಕೇಳಿ ಜನ ಸಾಮಾನ್ಯರು ನೋಟು ಅಥವಾ ನಾಣ್ಯ ಚಲಾವಣೆ ಇಲ್ಲವೆಂದು ಗೊಂದಲಕ್ಕೆ ಒಳಪಡುತ್ತಿರುತ್ತಾರೆ.

ವಹಿವಾಟು ಮತ್ತು ಪಾವತಿಗಾಗಿ ರೂ.10 ರೂಪಾಯಿ ನಾಣ್ಯವನ್ನು ಸ್ವೀಕರಿಸಲು ಅಂಗಡಿಯವರು, ವ್ಯಾಪಾರಿಗಳು ಮತ್ತು ಸಾಮಾನ್ಯ ಸಾರ್ವಜನಿಕರು ರೂ.10 ನಾಣ್ಯಗಳ ಸ್ವೀಕಾರ ಮತ್ತು ಬಳಕೆಯನ್ನು ನಿರಾಕರಿಸುವುದು ಕಂಡು ಬಂದಿದೆ. ಹಾಗೆಯೇ ಈಗ 10 ರೂಪಾಯಿ ನಾಣ್ಯದ ಸಮಸ್ಯೆಯ ಬಗ್ಗೆ RBI ಸರಿಯಾದ ಮಾಹಿತಿ ನೀಡಿದೆ.

10 Rs Coin Latest Update
Image Credit: Allaboutbelgaum

ಜಿಲ್ಲಾಧಿಕಾರಿ ಡಾ.ಕೆವಿ ರಾಜೇಂದ್ರ ಸ್ಪಷ್ಟನೆ ನೀಡಿದ್ದಾರೆ

10 ರೂ ನಾಣ್ಯ ಚಲಾವಣೆಯಲ್ಲಿದೆ ಎಂದು ರಿಸರ್ವ್ ಬ್ಯಾಂಕ್ (RBI) ಸ್ಪಷ್ಟನೆ ನೀಡಿದೆ, ಕೇಂದ್ರ ಸರ್ಕಾರ ಕೂಡ ಹಿಂಪಡೆದಿಲ್ಲ. ಆದ್ದರಿಂದ ಸಾರ್ವಜನಿಕರು ಯಾವುದೇ ವದಂತಿ ನಂಬದೇ ಈ ನಾಣ್ಯವನ್ನು ಸ್ವೀಕರಿಸಬಹುದಾಗಿದೆ. ಒಂದು ವೇಳೆ 10 ರೂ ನಾಣ್ಯ ಸ್ವೀಕರಿಸದಿದ್ದಲ್ಲಿ ನಾಣ್ಯ ಕಾಯ್ದೆಯ ಉಲ್ಲಂಘನೆಯಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

Dr K V Rajendra clarified about 10 rs coin
Image Credit: Timesofindia

ಸುಳ್ಳು ವದಂತಿಗಳ ಪ್ರಚಾರ
ನಾಣ್ಯ ಹಾಗು ನೋಟುಗಳ ವಿಷಯವಾಗಿ ಹಲವು ಊಹಾಪೋಹಗಳು ಅವಾಗವಾಗ ಹರಡುತ್ತಲೇ ಇರುತ್ತದೆ. ಯಾವ ಹಣಕಾಸಿನ ಸಂಸ್ಥೆಯು ಹೊರಡಿಸದ ಕಾನೂನುಗಳನ್ನು ಜನರೇ ಊಹಿಸಿಕೊಂಡು ನೋಟು ಹಾಗು ನಾಣ್ಯಗಳನ್ನು ಬ್ಯಾನ್ ಮಾಡುತ್ತಿದ್ದಾರೆ. ಈ ರೀತಿಯ ಸುಳ್ಳು ವದಂತಿಗಳು ಜನಸಾಮಾನ್ಯರ ಗೊಂದಲಕ್ಕೆ ಕಾರಣವಾಗಿದ್ದು ನೋಟು ಹಾಗು ನಾಣ್ಯಗಳನ್ನು ಉಪಯೋಗಿಸಲು ಭಯ ಪಡುವಂತಾಗಿದೆ.

Leave A Reply

Your email address will not be published.