Asia Cup 2023: ಮೈದಾನದಲ್ಲಿ ಕೆಲಸ ಮಾಡುವ ಜನರಿಗೆ ಸಿರಾಜ್ ಕೊಟ್ಟ ಹಣ ಎಷ್ಟು…? ಇಡೀ ದೇಶವೇ ಮೆಚ್ಚಿದೆ ಈ ಕೆಲಸಕ್ಕೆ.

ಸಿರಾಜ್ ರವರ ಈ ನಿರ್ಧಾರಕ್ಕೆ ಕ್ರಿಕೆಟ್ ವಲಯದಲ್ಲಿ ಭಾರಿ ಮೆಚ್ಚುಗೆ.

Asia Cup 2023: ಈ ಬಾರಿ ಏಷ್ಯಾಕಪ್ (Asia Cup) ಟೂರ್ನಿಯಲ್ಲಿ ನಡೆದ ಬಹುತೇಕ ಎಲ್ಲಾ ಪಂದ್ಯಗಳಿಗೂ ಮಳೆ ಅಡಚಣೆ ಉಂಟು ಮಾಡಿತ್ತು. ಅದರಲ್ಲೂ ಶ್ರೀಲಂಕಾದಲ್ಲಿ ನಡೆದ ಪಂದ್ಯಗಳಿಗೆ ಮಳೆಯ ಅಬ್ಬರ ಹೆಚ್ಚಾಗಿತ್ತು. ಈ ವೇಳೆ ಮೈದಾನದ ಸಿಬ್ಬಂದಿ ಅತ್ಯಂತ ಚುರುಕುತನ ಮತ್ತು ವೇಗದಿಂದ ಕಾರ್ಯನಿರ್ವಹಿಸಿದರು. ದೇಶ, ವಿದೇಶಗಳ ಕ್ರಿಕೆಟ್‌ ಪ್ರೇಮಿಗಳು ಮತ್ತು ಮಾಜಿಹಾಲಿ ಕ್ರಿಕೆಟಿಗರಿಂದ ಪ್ರಶಂಸೆಯ ಸುರಿಮಳೆಯಾಗಿತ್ತು.

ನಿಜ ಹೇಳಬೇಕೆಂದರೆ ಏಷ್ಯಾಕಪ್​ ಪ್ರಶಸ್ತಿಯನ್ನು (Asia Cup 2023) ಗೆದ್ದಿದ್ದು ಭಾರತವೇ ಆದರೂ ಹೃದಯ ಗೆದ್ದದ್ದು ಮಾತ್ರ ಕೊಲೊಂಬೊ ಆರ್​ ಪ್ರೇಮದಾಸ ಮೈದಾನದ (R.Premadasa Stadium, Colombo) ಸಿಬ್ಬಂದಿ. ಅನಿರೀಕ್ಷಿತ ಮಳೆ, ಗುಡುಗು-ಸಿಡಿಲುಗಳ ಆರ್ಭಟದ ನಡುವೆ ಮೈದಾನ ಮತ್ತು ಪಿಚ್​​​ ಅನ್ನು ನೆನೆಯದಂತೆ ನೋಡಿಕೊಂಡ ಅವರು, ಟೂರ್ನಿ ಯಶಸ್ವಿಯಾಗಲು ಪ್ರಮುಖ ಕಾರಣರಾದರು.

Asia cup 2023
Image Credit: Thehindu

ಕೊಲೊಂಬೊ ಆರ್​ ಪ್ರೇಮದಾಸ ಮೈದಾನದ ಸಿಬ್ಬಂದಿಗಳ ಪರಿಶ್ರಮ

ಶ್ರೀಲಂಕಾದಲ್ಲಿ ನೆಡೆದ ಪ್ರತಿ ಪಂದ್ಯಕ್ಕೂ ಸಿಕ್ಕಾಪಟ್ಟೆ ಮಳೆ ಬೀಳುತ್ತಿತ್ತು, ಆ ಸಂದರ್ಭದಲ್ಲಿ ಅಲ್ಲಿನ ಸಿಬ್ಬಂದಿಯ ಅಚಲ ಬದ್ಧತೆ ಮತ್ತು ಕಠಿಣ ಪರಿಶ್ರಮವು ಏಷ್ಯಾಕಪ್ 2023 ಅನ್ನು ಮರೆಯಲಾಗದ ಚಮತ್ಕಾರವನ್ನಾಗಿ ಮಾಡಿದೆ. ಪಿಚ್ ಪರಿಪೂರ್ಣತೆಯಿಂದ ಸೊಂಪಾದ ಔಟ್‌ ಫೀಲ್ಡ್‌ಗಳವರೆಗೆ ರೋಮಾಂಚಕ ಕ್ರಿಕೆಟ್ ಕ್ಷಣಗಳಿಗೆ ಸಾಕ್ಷಿಯಾದರು.

ಪಂದ್ಯಶ್ರೇಷ್ಠ ಪ್ರಶಸ್ತಿ ಮೊತ್ತ ನೀಡಿದ ಸಿರಾಜ್

ಉತ್ತಮ ​ ಬೌಲಿಂಗ್​​ ಮೂಲಕ ಭಾರತದ ಗೆಲುವಿಗೆ ಕಾರಣರಾದ ಸಿರಾಜ್​ಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಲಾಯಿತು. ಆದರೆ ಸಿರಾಜ್​ ಈ ಪಂದ್ಯಶ್ರೇಷ್ಠ ಪ್ರಶಸ್ತಿಯ ಮೊತ್ತವನ್ನು ಮೈದಾನದ ಸಿಬ್ಬಂದಿಗೆ ನೀಡಿದರು. ಅವರಿಗೆ ಸಿಕ್ಕ ಪ್ರಶಸ್ತಿಯ ಮೊತ್ತ 5 ಸಾವಿರ ಡಾಲರ್. ಅಂದರೆ ಭಾರತೀಯ ಕರೆನ್ಸಿಯಲ್ಲಿ 4 ಲಕ್ಷಕ್ಕೂ (4.15 ಲಕ್ಷ) ಅಧಿಕ ಮೊತ್ತ. ಸಿರಾಜ್​ ಅವರ ಕಾರ್ಯಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.

Mohammed Siraj donates his ‘player of the match’ prize money to Sri Lankan groundsmen.
Image Credit: Crictoday

ಜಗತ್ತಿನ ಕ್ರಿಕೆಟ್​​ ಪ್ರೇಮಿಗಳು ಅವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದರು

ಮಳೆಯ ಹನಿ ನೆಲಕ್ಕೆ ಬೀಳುವುದಕ್ಕೂ ಮುನ್ನವೇ ಅತ್ಯಂತ ಚುರುಕುತನದಿಂದ ಕೆಲಸ ಮಾಡುವ ಮೂಲಕ ಇಡೀ ಮೈದಾನವನ್ನು ಕವರ್​ಗಳಿಂದ ಮುಚ್ಚುತ್ತಿದ್ದರು. ಇದೀಗ ಅವರಿಗೆ ಬಹುಮಾನ ಘೋಷಣೆ ಮಾಡಲಾಗಿದೆ. ಏಷ್ಯಾಕಪ್​ ಟೂರ್ನಿಯ ಪಂದ್ಯಗಳು ನಡೆದ ಮೈದಾನದ ಪಿಚ್​ ಕ್ಯುರೇಟರ್​ ಮತ್ತು ಸಿಬ್ಬಂದಿಗೆ ಬಿಸಿಸಿಐ 50 ಸಾವಿರ ಡಾಲರ್​​ ಬಹುಮಾನವನ್ನು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಘೋಷಿಸಿದೆ. ಅಂದರೆ, 42 ಲಕ್ಷಕ್ಕೂ ಅಧಿಕ ರೂಪಾಯಿ ನಗದು ಬಹುಮಾನ ಬಿಸಿಸಿಐ ಘೋಷಣೆ ಮಾಡಿದೆ.

ಎಲೆ ಮರೆಯ ತಾರೆಗಳಿಗೆ ಅಭಿನಂದನೆಗಳು, ಟೂರ್ನಿ ಯಶಸ್ವಿಯಾಗಿದ್ದು ಅವರಿಂದಲೇ

ಬಹುಮಾನ ಘೋಷಣೆ ಮಾಡಿರುವ ಕುರಿತು ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಎಕ್ಸ್​ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಕ್ರಿಕೆಟ್​​ನ ಎಲೆ ಮರೆಯ ತಾರೆಗಳಿಗೆ ಅಭಿನಂದನೆಗಳು. ಟೂರ್ನಿಯನ್ನು ಅತ್ಯಂತ ಯಶಸ್ವಿಯಾಗಿಸಲು ಸಾಧ್ಯವಾಗಿಸಿದ ಅವರಿಗೆ 42 ಲಕ್ಷ ರೂಪಾಯಿ ಬಹುಮಾನ ಘೋಷಿಸಲು ಹರ್ಷವಾಗುತ್ತಿದೆ. ಶ್ರೀಲಂಕಾ ಕ್ರಿಕೆಟ್ ಮಂಡಳಿ ಜೊತೆ ಈ ಕಾರ್ಯ ಮಾಡುತ್ತಿದ್ದೇವೆ ಎಂದು ಏಷ್ಯಾ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಮುಖ್ಯಸ್ಥ ಜಯ್ ಶಾ ಪೋಸ್ಟ್​​ನಲ್ಲಿ ಬರೆದಿದ್ದಾರೆ.

ಭಾರತಕ್ಕೆ 8ನೇ ಏಷ್ಯಾಕಪ್​​ ಗೆದ್ದ ಸಂಭ್ರಮ

ಕೊಲೊಂಬೊದ ಆರ್​ ಪ್ರೇಮದಾಸ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ, ಮೊದಲು ಬ್ಯಾಟಿಂಗ್ ನಡೆಸಿತು. ಭಾರತ ತಂಡದ ಅದ್ಭುತ ಬೌಲಿಂಗ್​​ಗೆ ಶ್ರೀಲಂಕಾ ತತ್ತರಿಸಿತು.

ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿ 15.2 ಓವರ್​ಗಳಲ್ಲಿ ಕೇವಲ 50 ರನ್​ಗಳಿಗೆ ಸರ್ವಪತನ ಕಂಡಿತು. ಈ ಸಣ್ಣ ಗುರಿಯನ್ನು ಬೆನ್ನತ್ತಿದ ಭಾರತ ತಂಡ 6.1 ಓವರ್​ಗಳಲ್ಲಿ ಅಂದರೆ ಪವರ್​ ಪ್ಲೇ ಮುಗಿಯುವುದರೊಂದಿಗೆ ವಿಕೆಟ್ ನಷ್ಟವಿಲ್ಲದೆ ಗೆಲುವಿನ ಗೆರೆ ದಾಟಿತು. ಇದರೊಂದಿಗೆ 10 ವಿಕೆಟ್​​ಗಳ ಗೆಲುವು ಸಾಧಿಸಿ ಟ್ರೋಫಿಗೆ ಮುತ್ತಿಕ್ಕಿತು. ಶುಭ್ಮನ್​ ಗಿಲ್​ 27 ರನ್, ಇಶಾನ್​ ಕಿಶನ್​ 23 ರನ್ ಬಾರಿಸಿ ಅಜೇಯರಾಗಿ ಉಳಿದರು.

Leave A Reply

Your email address will not be published.