CM Siddaramaiah: ಇನ್ನುಮುಂದೆ ಈ ಪ್ರದೇಶಗಳಲ್ಲಿ ಪಟಾಕಿ ಬಳಸುವಂತಿಲ್ಲ, ಹೊಸ ನಿಯಮ ಜಾರಿಗೆ ತಂದ ಸಿದ್ದರಾಮಯ್ಯ.

ಈ ಸ್ಥಳಗಳಲ್ಲಿ ಇನ್ನುಮುಂದೆ ಪಟಾಕಿ ಸಿಡಿಸುವಂತಿಲ್ಲ.

Fire Crackers Ban: ಪಟಾಕಿ ದುರಂತಗಳ ಬಗ್ಗೆ ನಾವು ಆಗಾಗ್ಗೆ ಕೇಳುತ್ತಿರುತ್ತೇವೆ. ಹಾಗೆಯೆ ಅತ್ತಿಬೆಲೆಯಲ್ಲಿ ನಡೆದ ಪಟಾಕಿ ದುರಂತಕ್ಕೆ ಇಡೀ ರಾಜ್ಯವೇ ಮರುಗಿದೆ. ಘೋರ ದುರಂತದಲ್ಲಿ 14 ಮಂದಿ ಸುಟ್ಟು ಕರಕಲಾಗಿದ್ದು, ಅತ್ತಿಬೆಲೆಯ ಬಾಲಾಜಿ ಪಟಾಕಿ ಅಂಗಡಿಗೆ ಬೆಂಕಿ ಬಿದ್ದು 14 ಮಂದಿ ಸಜೀವ ದಹನವಾಗಿದ್ದು, ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದಿದ್ದರಿಂದ ಈ ಘಟನೆ ನಡೆದಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಘಟನೆ ಇದೆ ಮೊದಲೇನೋ ಅಲ್ಲ ಎಷ್ಟೋ ಕಡೆ ಈಗಾಗಲೇ ಈ ಘಟನೆ ನೆಡೆದಿದೆ. ಅತ್ತಿಬೆಲೆಯ ಬಾಲಾಜಿ ಪಟಾಕಿ ಅಂಗಡಿ ದುರಂತದ ಹಿನ್ನೆಲೆ ಅಲರ್ಟ್ ಆದ ಸರ್ಕಾರ ಹಲವು ಕಠಿಣ ನಿಯಮ ಜಾರಿಗೆ ತರಲು ಸಿದ್ದತೆ ನಡೆಸಿದೆ. 

CM Siddaramaiah ban FireCrackers
Image Credit: Oneindia

ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಕಠಿಣ ಕ್ರಮ ಘೋಷಿಸಿದ್ದಾರೆ

ರಾಜ್ಯ ಸರ್ಕಾರ ಗೃಹಕಚೇರಿ ಕೃಷ್ಣಾದಲ್ಲಿ ಅತ್ತಿಬೆಲೆ ದುರಂತದ ಹಿನ್ನೆಲೆ ಸಭೆ ನಡೆಸಿದೆ. ಸಭೆ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ (Siddaramaiah) ಗಣೇಶ ಹಬ್ಬ, ಮದುವೆ, ರಾಜಕೀಯ ಸಮಾರಂಭಗಳಲ್ಲಿ ಪಟಾಕಿ ನಿಷೇಧಗೊಳಿಸಲಾಗುತ್ತದೆ. ಹಾಗು ದೀಪಾವಳಿ ಹಬ್ಬದ ವೇಳೆ ಹಸಿರು ಪಟಾಕಿ ಮಾತ್ರ ಸಿಡಿಸಲು ಅವಕಾಶ ಇದೆ. ಪ್ರತಿಯೊಬ್ಬರೂ, ದೀಪಾವಳಿಯಲ್ಲಿ ಹಸಿರು ಪಟಾಕಿ ಬಳಸಬೇಕು.

ಸುಪ್ರೀಂ ಕೋರ್ಟ್ ಆದೇಶದಂತೆ ಕಡ್ಡಾಯವಾಗಿ ಹಸಿರು ಪಟಾಕಿಯನ್ನೇ ಹೊಡೆಯಬೇಕು, ಇನ್ನಿತರ ಸಮಾರಂಭಗಳಲ್ಲಿ ಪಟಾಕಿ ನಿಷೇಧಗೊಳಿಸಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ರಾಜಕೀಯ ಕಾರ್ಯಕ್ರಮ ,ಗಣೇಶ ಹಬ್ಬ ಹಾಗೂ ಮದುವೆಯಲ್ಲಿ ಪಟಾಕಿ ಸಿಡಿಸುವಂತಿಲ್ಲ, ಪಟಾಕಿ ಸಿಡಿಸುವಾಗ ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂದು ಸಭೆಯಲ್ಲಿ ಹೇಳಿದರು.

CM Siddaramaiah Latest News
Image Credit: Kannadadunia

ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ

ಪಟಾಕಿ ದುರಂತದಲ್ಲಿ 14 ಮಂದಿ ಮೃತ ಪಟ್ಟಿದ್ದು, ಇದಕ್ಕೆ ಕೆಲವು ಅಧಿಕಾರಿಗಳ ಬೇಜವಾಬ್ದಾರಿಗಳೂ ಕೂಡ ಕಾರಣವಾಗಿದೆ. ಅದೇ ರೀತಿ ಅತ್ತಿಬೆಲೆ ದುರಂತಕ್ಕೆ ಕಾರಣರಾದ ತಹಶೀಲ್ದಾರ್ ಹಾಗೂ ಅಗ್ನಿಶಾಮಕ ಅಧಿಕಾರಿಗಳನ್ನು ಅಮಾನತು ಮಾಡಲು ಆದೇಶಿಸಲಾಗಿದೆ. ಬೆಂಗಳೂರು ಜಿಲ್ಲಾಧಿಕಾರಿಗೆ ನೋಟಿಸ್ ನೀಡಲು ಸೂಚಿಸಲಾಗಿದೆ ಎಂದು ಸಿಎಂ ಹೇಳಿದರು.

Leave A Reply

Your email address will not be published.