Gas Price: ಪ್ರತಿನಿತ್ಯವೂ ಗ್ಯಾಸ್ ಬಳಸುವ ಎಲ್ಲರಿಗೂ ಕೇಂದ್ರದಿಂದ ಬೇಸರದ ಸುದ್ದಿ, ಸಿಲಿಂಡರ್ ಬೆಲೆಯಲ್ಲಿ ದಾಖಲೆಯ ಏರಿಕೆ.

ಮತ್ತೆ ಸಿಲಿಂಡರ್ ಬೆಲೆಯಲ್ಲಿ ಬಾರಿ ಏರಿಕೆ, ಬೇಸರ ವ್ಯಕ್ತಪಡಿಸಿದ ಗ್ರಾಹಕರು.

LPG Cylinder Price Hike: ವಾಸ್ತವವಾಗಿ ಪ್ರತಿ ತಿಂಗಳ ಆರಂಭದಲ್ಲಿ ತೈಲ ಮಾರುಕಟ್ಟೆ ಕಂಪನಿಗಳು ಸಿಲಿಂಡರ್ ಬೆಲೆಯನ್ನು ನಿಗದಿ ಪಡಿಸುತ್ತದೆ. ಬೆಲೆ ಹೆಚ್ಚು ಅಥವಾ ಕಡಿಮೆ ಏನೇ ಇದ್ದರು ತಿಂಗಳ ಆರಂಭದಲ್ಲೇ ತಿಳಿಯುತ್ತದೆ.

ಹಾಗೆಯೆ ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳ ಬೆಲೆಯನ್ನು ಹೆಚ್ಚಿಸಿವೆ. ಈ ಬೆಲೆಗಳು ಇಂದಿನಿಂದ ಜಾರಿಗೆ ಬರಲಿವೆ. ಈ ಬೆಲೆ ಏರಿಕೆಯ ನಂತರ, ದೆಹಲಿಯಲ್ಲಿ 19 ಕೆಜಿ ವಾಣಿಜ್ಯ LPG Cylinder ಚಿಲ್ಲರೆ ಮಾರಾಟ ಬೆಲೆ ಪ್ರತಿ ಸಿಲಿಂಡರ್ಗೆ 1731.50 ರೂ.ಗೆ ಏರಿಕೆಯಾಗಿದೆ.

LPG Cylinder Price Hike
Image Credit: India

ಸಿಲಿಂಡರ್ ಬೆಲೆಯಲ್ಲಿ ಬಾರಿ ಹೆಚ್ಚಳ

ವಾಣಿಜ್ಯ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಹೆಚ್ಚಿಸಲಾಗಿದೆ. 19 ಕೆಜಿ ವಾಣಿಜ್ಯ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು 209 ರೂ.ಗೆ ಹೆಚ್ಚಿಸಲಾಗಿದೆ. ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿಗಳು) ಸೆಪ್ಟೆಂಬರ್ 1 ರಿಂದ ಜಾರಿಗೆ ಬರುವಂತೆ ವಾಣಿಜ್ಯ ಎಲ್ಪಿಜಿ ಬೆಲೆಯನ್ನು ಸಿಲಿಂಡರ್ ಗೆ 158 ರೂ.ಗಳಷ್ಟು ಕಡಿತಗೊಳಿಸಿದ ಒಂದು ತಿಂಗಳ ನಂತರ ಈ ಬೆಳವಣಿಗೆ ನಡೆದಿದೆ. ಇದರ ನಂತರ, ದೆಹಲಿಯಲ್ಲಿ ವಾಣಿಜ್ಯ LPG Cylinder ಬೆಲೆ 1,522 ರೂ. ಇತ್ತು, ಇದೀಗ 1731.50 ರೂ.ಗೆ ಏರಿಕೆಯಾಗಿದೆ.

Commercial LPG cylinder price hike
Image Credit: Hindustantimes

ಮಹಿಳೆಯರಿಗೆ ಉಚಿತ ಅನಿಲ ವಿತರಣೆ

ಈ ಹಿಂದೆ ಮೋದಿ ಸರ್ಕಾರ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು 200 ರೂ.ಗೆ ಇಳಿಸಿತ್ತು. ಇದರೊಂದಿಗೆ, ಮೋದಿ ಸರ್ಕಾರವು 75 ಲಕ್ಷ ಮಹಿಳೆಯರಿಗೆ ಉಚಿತ ಅನಿಲ ಸಂಪರ್ಕವನ್ನು ಉಡುಗೊರೆಯಾಗಿ ನೀಡಿದೆ. ಆಗಸ್ಟ್ ನಲ್ಲಿ ಕೇಂದ್ರ ಸರ್ಕಾರವು ದೇಶೀಯ LPG ಸಿಲಿಂಡರ್ ಗಳ ಬೆಲೆಯನ್ನು 200 ರೂ.ಗಳಷ್ಟು ಕಡಿಮೆ ಮಾಡಿತ್ತು. ಈಗ ಮತ್ತೆ ಸಿಲಿಂಡರ್ ಬೆಲೆ ಏರಿಕೆ ಆಗಿರುವುದು ಜನ ಸಾಮಾನ್ಯರಿಗೆ ಬಹಳ ಬೇಸರದ ಸಂಗತಿ ಆಗಿದೆ.

Leave A Reply

Your email address will not be published.