Mohammed Shami: ಶಮಿ ಆಟವನ್ನ ಮೆಚ್ಚಿ ದೊಡ್ಡ ಘೋಷಣೆ ಮಾಡಿದ ಯೋಗಿ ಆಧಿತ್ಯನಾಥ್, ದೇಶವೇ ಮೆಚ್ಚಿಕೊಂಡಿದೆ.

ಶಮಿ ಆಟವನ್ನ ಮೆಚ್ಚಿ ದೊಡ್ಡ ಘೋಷಣೆ ಮಾಡಿದ ಯೋಗು ಆಧಿತ್ಯನಾಥ್.

Mohammed Shami Cricket Ground: ಭಾರತ ಕ್ರಿಕೆಟ್ ತಂಡದ ವೇಗಿ ಮೊಹಮ್ಮದ್ ಶಮಿ (Mohammad Shami) ಅವರು ಈಗ ಟ್ರೆಂಡ್ ನಲ್ಲಿ ಇದ್ದಾರೆ. ಯಾಕೆಂದರೆ ಟೀಂ ಇಂಡಿಯಾವನ್ನು ವಿಶ್ವಕಪ್ (ICC World Cup 2023) ರಲ್ಲಿ ತನ್ನ ಮಾರಕ ಬೌಲಿಂಗ್ ದಾಳಿಯಿಂದ ಸೆಮಿಫೈನಲ್​ ಗೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಮಾಜಿ ದಿಗ್ಗಜ ಕ್ರಿಕೆಟಿಗರಿಂದ ಹಿಡಿದು, ಪ್ರಧಾನಿ ಮೋದಿವರೆಗೂ (PM Modi) ಗಣ್ಯಾತಿಗಣ್ಯರು ಶಮಿ ಸಾಧನೆಯನ್ನು ಮನಸಾರೆ ಕೊಂಡಾಡಿದ್ದಾರೆ. ಇದೀಗ ಹೊರಬಿದ್ದಿರುವ ಮಾಹಿತಿ ಪ್ರಕಾರ ಯೋಗಿ ಸರ್ಕಾರ ಮೊಹಮ್ಮದ್ ಶಮಿ ಅವರ ಹುಟ್ಟೂರಾದ ಉತ್ತರ ಪ್ರದೇಶದ ಸಹಸ್ಪುರ್ ಅಲಿನಗರದಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಮಾಡಲು ಮುಂದಾಗಿದೆ ಎಂದು ವರದಿಯಾಗಿದೆ.   

Mohammed Shami Cricket Ground
Image Source: Mint

                          

ಏಕದಿನ ವಿಶ್ವಕಪ್​ನಲ್ಲಿ ಉತ್ತಮ ಪ್ರದರ್ಶನ ನೀಡಿದ ಮೊಹಮ್ಮದ್ ಶಮಿ

ಏಕದಿನ ವಿಶ್ವಕಪ್​ನಲ್ಲಿ ಅವಕಾಶ ಇಲ್ಲದೇ ಸುಮ್ಮನಿದ್ದ ಶಮಿಗೆ ಹಾರ್ದಿಕ್ ಪಾಂಡ್ಯ ಗಾಯಗೊಂಡ ನಂತರ ಉತ್ತಮ ಅವಕಾಶ ಸಿಕ್ಕಿದ್ದು, ಈ ಅವಕಾಶವನ್ನು ಸರಿಯಾಗಿ ಬಳಸಿಕೊಂಡ ಶಮಿ ಉತ್ತಮ ಬೌಲರ್ ಅನ್ನಿಸಿಕೊಂಡರು. ಆ ಸಮಯದಲ್ಲಿ ನ್ಯೂಜಿಲೆಂಡ್ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿತು, ಆಗ ಆ ಪಂದ್ಯದಲ್ಲಿ ಐದು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಅಬ್ಬರಿಸಿದರು. ಇದರ ನಂತರ ಅವರು ಇಂಗ್ಲೆಂಡ್ ವಿರುದ್ಧ ನಾಲ್ಕು ಮತ್ತು ಶ್ರೀಲಂಕಾ ವಿರುದ್ಧ ಐದು ವಿಕೆಟ್​ಗಳನ್ನು ಉರುಳಿಸಿದ್ದರು.

ಆ ಬಳಿಕ ನಡೆದ ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್‌ ಪಂದ್ಯದಲ್ಲಿ ಶಮಿ, ಕಿವೀಸ್ ಆರಂಭಿಕರಿಬ್ಬರನ್ನು ಪೆವಿಲಿಯನ್​ ಕಳುಹಿಸಿದರು . ನಂತರ ನಿಯಮಿತ ಅಂತರದಲ್ಲಿ ವಿಕೆಟ್‌ಗಳನ್ನು ಪಡೆದು ಒಟ್ಟು ಏಳು ವಿಕೆಟ್‌ಗಳನ್ನು ಪಡೆದರು. ಇದರೊಂದಿಗೆ ಶಮಿ 2023 ರ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಅದೇ ಸಮಯದಲ್ಲಿ, ಅವರು ವಿಶ್ವಕಪ್ ಪಂದ್ಯವೊಂದರಲ್ಲಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ ಕೂಡ ಆಗಿದ್ದಾರೆ.

Mohammed Shami Cricket Ground
Image Source: Hindustan Times

ಕ್ರೀಡಾಂಗಣ ನಿರ್ಮಾಣದ ಕುರಿತು ಪ್ರಸ್ತಾಪ

ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಜೇಶ್ ತ್ಯಾಗಿ ಮತ್ತು ಮುಖ್ಯ ಅಭಿವೃದ್ಧಿ ಅಧಿಕಾರಿ ಅಮ್ರೋಹಾ ನೇತೃತ್ವದ ಜಿಲ್ಲಾಡಳಿತದ ತಂಡವು ಕೆಲವು ದಿನಗಳ ಹಿಂದೆ ಶಮಿ ಅವರ ಸಾಹಸಪುರ ಅಲಿನಗರ ಗ್ರಾಮಕ್ಕೆ ಭೇಟಿ ನೀಡಿದರು . ಮಿನಿ ಸ್ಟೇಡಿಯಂ ಹಾಗೂ ಓಪನ್ ಜಿಮ್ ನಿರ್ಮಿಸಲು ಜಾಗ ಹುಡುಕಿಕೊಂಡು ತಂಡ ಅಲ್ಲಿಗೆ ಆಗಮಿಸಿತ್ತು. ಮೊಹಮ್ಮದ್ ಶಮಿಯಂತೆ ಕ್ರೀಡೆಯಲ್ಲಿ ಪ್ರಗತಿ ಸಾಧಿಸಲು ತಮ್ಮ ಪ್ರದೇಶದ ಯುವಕರಿಗೆ ಸಹಾಯ ಮಾಡುವುದು ಇದರ ಗುರಿಯಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಹೇಳಿದ್ದಾರೆ.

ಮೊಹಮ್ಮದ್ ಶಮಿ ಹುಟ್ಟೂರಲ್ಲಿ ಕ್ರೀಡಾಂಗಣ ನಿರ್ಮಾಣ

ಮೊಹಮ್ಮದ್ ಶಮಿ ಅವರ ಹುಟ್ಟೂರಾದ ಸಾಹಸಪುರ್ ಅಲಿನಗರದ ಅಮ್ರೋಹನಲ್ಲಿ ಮಿನಿ ಸ್ಟೇಡಿಯಂ ಮತ್ತು ಓಪನ್ ಜಿಮ್ ನಿರ್ಮಿಸಲು ಅಮ್ರೋಹದ ಜಿಲ್ಲಾಧಿಕಾರಿಗಳು ಮುಂದಾಗಿದ್ದಾರೆ. ಅಮ್ರೋಹ ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಜೇಶ್ ತ್ಯಾಗಿ ಈ ಬಗ್ಗೆ ಮಾತನಾಡಿ, ಮೊಹಮ್ಮದ್ ಶಮಿ ಅವರ ಗ್ರಾಮದಲ್ಲಿ ಮಿನಿ ಕ್ರೀಡಾಂಗಣ ನಿರ್ಮಿಸಲು ಪ್ರಸ್ತಾವನೆ ಕಳುಹಿಸುತ್ತಿದ್ದೇವೆ.

ಪ್ರಸ್ತಾವನೆಯಲ್ಲಿ ಮುಕ್ತ ವ್ಯಾಯಾಮಶಾಲೆಯ ನಿರ್ಮಾಣದ ಬಗ್ಗೆಯೂ ಮನವಿ ಮಾಡಲಾಗಿದೆ. ಹಾಗೆಯೇ ಶಮಿ ಅವರ ಗ್ರಾಮದಲ್ಲಿ ಈ ಕ್ರೀಡಾಂಗಣ ನಿರ್ಮಾಣಕ್ಕೆ ಬೇಕಾದಷ್ಟು ಭೂಮಿ ಕೂಡ ಇದೆ. ಸರ್ಕಾರವು ರಾಜ್ಯದಾದ್ಯಂತ 20 ಕ್ರೀಡಾಂಗಣಗಳನ್ನು ನಿರ್ಮಿಸಲು ಮುಂದಾಗಿದೆ. ಆ ನಿಟ್ಟಿನಲ್ಲಿ ಅಮ್ರೋಹ ಜಿಲ್ಲೆಯ ಮೊಹಮ್ಮದ್ ಶಮಿ ಅವರ ಗ್ರಾಮವನ್ನು ಸಹ ಕ್ರೀಡಾಂಗಣ ನಿರ್ಮಿಸಲು ಆಯ್ಕೆ ಮಾಡಲಾಗಿದೆ’ ಎಂದು ಹೇಳಿದರು.

Leave A Reply

Your email address will not be published.