Toyota: ಒಮ್ಮೆ ಚಾರ್ಜ್ ಮಾಡಿದರೆ 1000 Km ರೇಂಜ್, ಎಲ್ಲಾ ಎಲೆಕ್ಟ್ರಿಕ್ ಕಾರುಗಳಿಗೆ ಸೆಡ್ಡು ಹೊಡೆದ ಟೊಯೋಟಾ.

ಟೊಯೋಟಾ ಕಂಪನಿಯ ಹೊಸ ಕಾರು ಈಗ ಮಾರುಕಟ್ಟೆಗೆ, ಎಲ್ಲಾ ಎಲೆಕ್ಟ್ರಿಕ್ ಕಾರುಗಳನ್ನೂ ಹಿಂದಿಕ್ಕಿದ EV .

New Toyota EV: ಕಾರು ಕಂಪನಿಗಳಲ್ಲಿ ಟೊಯೋಟಾ (Toyota) ಕಂಪನಿ ಅತ್ಯಂತ ಜನಪ್ರಿಯತೆಯನ್ನು ಹೊಂದಿದೆ. ತನ್ನ ಕಂಪನಿಗಳಿಂದ ಅನೇಕ ಕಾರುಗಳನ್ನು ಈಗಾಗಲೇ ರಸ್ತೆಗೆ ತಂದಿರುತ್ತದೆ. ಇವಿಗಳನ್ನು ಹೆಚ್ಚು ಕೈಗೆಟುಕುವ, ಸುರಕ್ಷಿತ ಮತ್ತು ಪರಿಸರ ಸ್ನೇಹಿಯನ್ನಾಗಿಸುವ ಪ್ರಗತಿಯ ಬ್ಯಾಟರಿ ತಂತ್ರಜ್ಞಾನಗಳಲ್ಲಿ ಟೊಯೊಟಾ ಕಾರ್ಯನಿರ್ವಹಿಸುತ್ತಿದೆ.

ಮೂಲಗಳ ಪ್ರಕಾರ ಟೊಯೋಟಾ ತನ್ನ ಮುಂಬರುವ ಎಲೆಕ್ಟ್ರಿಕ್ ಕಾರನ್ನು 2026 ರಲ್ಲಿ ಪರಿಚಯಿಸಲು ಯೋಜಿಸಿರುವುದಾಗಿ ತಿಳಿದುಬಂದಿದೆ. ಕಂಪನಿಯ ಪ್ರಕಾರ ಸುಧಾರಿತ ಬ್ಯಾಟರಿ, ಹೆಚ್ಚಿನ ರೇಂಜ್ ಶೇ40 ರಷ್ಟು ವೆಚ್ಚ ಉಳಿತಾಯವಾಗಿಸಲಿವೆ.

New toyota ev
Image Credit: Motoroctane

ಟೊಯೋಟಾ ಎರಡು ದೊಡ್ಡ ಬ್ಯಾಟರಿ ಪ್ಯಾಕ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿದೆ

ಸಾಮನ್ಯವಾಗಿ ಎಲೆಕ್ಟ್ರಿಕ್ ಕಾರುಗಳ ವೆಚ್ಚದಲ್ಲಿ ಶೇ.60 ರಷ್ಟು ಪಾಲನ್ನು ಬ್ಯಾಟರಿಗಳು ಹೊಂದಿರುತ್ತವೆ.  ಇದಕ್ಕಾಗಿ ಟೊಯೋಟಾ ಎರಡು ದೊಡ್ಡ ಬ್ಯಾಟರಿ ಪ್ಯಾಕ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿದೆ, ಹೆಚ್ಚಿನ ರೇಂಜ್ ನೀಡಲು ಲಿಥಿಯಂ-ಐಯಾನ್ ಕಾರ್ಯಕ್ಷಮತೆ ಮತ್ತು ಕೈಗೆಟುಕುವ ಬೆಲೆಗಾಗಿ ಲಿಥಿಯಂ-ಐರನ್-ಫಾಸ್ಫೇಟ್ ಬ್ಯಾಟರಿಗಳ ನಿರ್ಮಾಣದಲ್ಲಿ ತೊಡಗಿದೆ.

ಟೊಯೋಟಾದ ಮುಂದಿನ ಇವಿಯನ್ನು 2026 ರಲ್ಲಿ ಬಿಡುಗಡೆ ಮಾಡಲಾಗುವುದು. ಹೊಸ ಬ್ಯಾಟರಿ ಆಯ್ಕೆಗಳೊಂದಿಗೆ ಸಿಂಗಲ್ ಚಾರ್ಜ್‌ನಲ್ಲಿ 800 ಕಿ.ಮೀ ರೇಂಜ್ ನೀಡಲಿದ್ದು, ಈ ಇವಿ ಟೊಯೊಟಾ bZ4X ಗೆ ಹೋಲಿಸಿದರೆ ಬೆಲೆಯಲ್ಲಿ ಅಗ್ಗವಾಗಿರಲಿದೆಯಂತೆ.

ಟೊಯೋಟಾ ನವೀಕರಿಸಿದ ಕಾರಿನ ಬ್ಯಾಟರಿ ಪವರ್

ಹೆಚ್ಚು ಸುಧಾರಿತ ಘನ-ಸ್ಥಿತಿಯ ಬ್ಯಾಟರಿ ಸಹ ಅಭಿವೃದ್ಧಿ ಹಂತದಲ್ಲಿದೆ. ಇದು 994 ಮೈಲಿಗಳಿಗಿಂತ (ಅಂದಾಜು. 1,600 ಕಿಮೀ) ಹೆಚ್ಚಿನ ರೇಂಜ್ ನೀಡುವ ಮೂಲಕ ಹೊಸ ಮಾನದಂಡಗಳನ್ನು ಹೊಂದಿಸುತ್ತದೆ. ಮೊದಲ ತಲೆಮಾರಿನ ಘನ-ಸ್ಥಿತಿಯ ಬ್ಯಾಟರಿಗಳು ಸುಮಾರು 750 ಮೈಲುಗಳ (1,200 ಕಿಮೀ) ವ್ಯಾಪ್ತಿಯನ್ನು ಹೊಂದಿರಬಹುದು.

Toyota's next EV will be launched in 2026.
Image Credit: Electrek

ಚಾರ್ಜಿಂಗ್ ಸಮಯವು ಕಡಿಮೆ ಇರುತ್ತದೆ, ಕೇವಲ 10 ನಿಮಿಷಗಳಲ್ಲಿ ಶೇ10 ರಿಂದ ಶೇ80 ರಷ್ಟು ಚಾರ್ಜ್‌ ಮಾಡಬಹುದು. ಇನ್ನು ಹೆಚ್ಚಿನ ಕಾರ್ಯಕ್ಷಮತೆಯ ಲಿಥಿಯಂ ಅಯಾನ್ ಪ್ಯಾಕ್ 20 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.

ಟೊಯೋಟಾ ಬ್ಯಾಟರಿಗಳ ಎತ್ತರವನ್ನು ಕಡಿಮೆ ಮಾಡುವತ್ತ ಗಮನಹರಿಸುತ್ತಿದೆ

ಟೊಯೊಟಾದ ಹೊಸ ಇವಿಗಳು ಹೆಚ್ಚು ಏರೋಡೈನಮಿಕ್ ಮತ್ತು ಹಗುರವಾಗಿರಲಿವೆಯಂತೆ. ಇದಕ್ಕಾಗಿ ಟೊಯೋಟಾ ಬ್ಯಾಟರಿಗಳ ಎತ್ತರವನ್ನು ಕಡಿಮೆ ಮಾಡುವತ್ತ ಗಮನಹರಿಸುತ್ತಿದೆ. ಸದ್ಯಕ್ಕೆ bZ4X 150 ಎಂಎಂ ಎತ್ತರದ ಬ್ಯಾಟರಿಯನ್ನು ಹೊಂದಿದೆ. ಟೊಯೋಟಾದ ಮುಂದಿನ-ಜೆನ್ ಇವಿಗಳೊಂದಿಗೆ ಇದನ್ನು 120 ಎಂಎಂಗೆ ಕಡಿಮೆಗೊಳಿಸಲಾಗುವುದು ಎಂದು ತಿಳಿದುಬಂದಿದೆ.

ಹೆಚ್ಚಿನ ಪರ್ಫಾಮೆನ್ಸ್ ಸ್ಪೋರ್ಟ್ಸ್ ಮಾದರಿಗಳಿಗೆ ಬಳಸಲಾಗುವ ಬ್ಯಾಟರಿಗಳು ಇನ್ನೂ ಚಿಕ್ಕದಾಗಿರುತ್ತವೆ, ಸುಮಾರು 100 ಮಿ.ಮೀ ಎತ್ತರದಲ್ಲಿರುತ್ತವೆ. 2030 ರ ಹೊತ್ತಿಗೆ, ಟೊಯೋಟಾ ತನ್ನ BEV ಮಾರಾಟವನ್ನು 3.5 ಮಿಲಿಯನ್ ಘಟಕಗಳಿಗೆ ಹೆಚ್ಚಿಸಲು ಯೋಜಿಸಿದೆ. ಇವುಗಳಲ್ಲಿ, ಸುಮಾರು 1.7 ಮಿಲಿಯನ್ ಯುನಿಟ್‌ಗಳು ಹೊಸ ಬ್ಯಾಟರಿ ಪ್ಯಾಕ್‌ಗಳೊಂದಿಗೆ ಸಜ್ಜುಗೊಳ್ಳುತ್ತವೆ ಎಂದು ಮೂಲಗಳು ತಿಳಿಸಿವೆ.

Leave A Reply

Your email address will not be published.