Online Scam: ದೀಪಾವಳಿ ಹಬ್ಬದ ಖುಷಿಯಲ್ಲಿ ನೀವು ಈ ಲಿಂಕ್ ಕ್ಲಿಕ್ ಮಾಡಿದರೆ ನಿಮ್ಮ ಬ್ಯಾಂಕ್ ಖಾತೆ ಖಾಲಿ, ಎಚ್ಚರ.

ಮೊಬೈಲ್ ಬಳಕೆದಾರರೆ ಯಾವುದೇ ಕಾರಣಕ್ಕೂ ಆಮೀಷಕ್ಕೆ ಒಳಗಾಗಿ ಲಿಂಕ್ ಗಳ ಮೇಲೆ ಕ್ಲಿಕ್ ಮಾಡಬೇಡಿ, ಒಂದೊಮ್ಮೆ ಲಿಂಕ್ ಕ್ಲಿಕ್ ಮಾಡಿದರೆ ನಿಮ್ಮ ಬ್ಯಾಂಕ್ ಖಾತೆ ಖಾಲಿ ಆಗುತ್ತದೆ

Online Scam Alert: ಭಾರತೀಯರಿಗೆ ಹಬ್ಬಗಳೆಂದರೆ ಸಂಭ್ರಮ, ಖುಷಿ. ಪ್ರತಿಯೊಂದು ಹಬ್ಬವು ಒಂದೊಂದು ಇತಿಹಾಸವನ್ನು ಹೊಂದಿರುತ್ತದೆ ಹಾಗು ಎಲ್ಲಾ ಹಬ್ಬಗಳನ್ನು ಅಚ್ಚುಕಟ್ಟಾಗಿ ಆಚರಿಸುವುದರಲ್ಲಿ ನಾವು ಎತ್ತಿದ ಕೈ. ಹಬ್ಬ ಅಂದ ಮೇಲೆ ಶಾಪಿಂಗ್ ಇದ್ದೆ ಇರುತ್ತದೆ.

ಅದು ಅಲ್ಲದೆ ಈಗ ದೀಪವಾವಳಿ ಹಬ್ಬ ಪ್ರಾರಂಭ ಆಗಿದೆ. ದೀಪಾವಳಿ ಅಂದಕೂಡಲೇ ಆಫರ್ ಗಳ ಸುರಿಮಳೆಯನ್ನು ಆಫ್ ಲೈನ್ ಹಾಗು ಆನ್ ಲೈನ್ ಶಾಪಿಂಗ್ ನಲ್ಲಿ ಕಾಣಬಹುದು. ಅಷ್ಟೇ ಅಲ್ಲದೆ ಜನರು ಕಡಿಮೆ ಬೆಲೆ ಅಂದ ಕೂಡಲೇ ಮುಗಿಬೀಳುವುದು ಸಹ ಅಷ್ಟೇ ನಿಜ ಆಗಿದೆ. ಆಫರ್, ಬಹುಮಾನ, ರಿಯಾಯಿತಿಗಳಿಗೆ ಎಂದು ಆಸೆ ಪಡಬೇಡಿ ಯಾಕೆಂದರೆ ಇದನ್ನೇ ಬಂಡವಾಳ ಮಾಡಿಕೊಂಡು ಮೋಸ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ.                                                                                                                      

Scam Alert Updates
Image Credit: Business-Standard

ಫೋನ್ ಗಳಿಗೆ ವೈರಸ್ ಸಂಪರ್ಕ ಆಗುತ್ತದೆ

ಕೆಲವು ಪ್ರಜ್ಞಾವಂತ ನಾಗರಿಕರು ಮೋಸದ ಸಂಚನ್ನು ಅರ್ಥಮಾಡಿಕೊಳ್ಳುತ್ತಾರೆ. ಇನ್ನು ಕೆಲವರು ಹ್ಯಾಕರ್ ಗಳ ಆಮೀಷಕ್ಕೆ ಆಕರ್ಷಿತರಾಗುತ್ತಾರೆ ಮತ್ತು ಕೆಲವು ತಪ್ಪುಗಳನ್ನು ಮಾಡಿ ಪರಿತಪಿಸುತ್ತಾರೆ. ನಿಮ್ಮ ಮೊಬೈಲ್ ಗೆ ಬಂದ ಲಿಂಕ್ ಅನ್ನು ಕ್ಲಿಕ್ ಮಾಡಿದಾಗ ವೈರಸ್ ನಿಮ್ಮ ಫೋನ್ ಅನ್ನು ಪ್ರವೇಶಿಸುತ್ತದೆ.

ಆಗ ನಮ್ಮ ಸಂಪೂರ್ಣ ಮಾಹಿತಿಯು ಹ್ಯಾಕರ್‌ಗಳಿಗೆ ರವಾನೆಯಾಗುತ್ತದೆ ಆ ವೈರಸ್ ಎಲ್ಲಾ ಮಾಹಿತಿಯನ್ನು ಆ ಹ್ಯಾಕರ್‌ಗಳಿಗೆ ಕಳುಹಿಸುತ್ತಲೇ ಇರುತ್ತದೆ. ನಿಮ್ಮ ಪಾಸ್‌ವರ್ಡ್‌ಗಳು, OTP, ಕರೆಗಳ ವಿವರಗಳು, ಸಂದೇಶಗಳು, ಕರೆ ರೆಕಾರ್ಡಿಂಗ್‌ಗಳು ಮತ್ತುಇನ್ನಿತರ ವಿಷಯಗಳು. ಇದು ನಿಮ್ಮ ಗೌಪ್ಯತೆಗೆ ಧಕ್ಕೆ ಮಾತ್ರವಲ್ಲ, ನಿಮ್ಮ ಬ್ಯಾಂಕ್ ಖಾತೆಗೂ ಒಳ್ಳೆಯದಲ್ಲ. ಆದ್ದರಿಂದ, ಯಾವುದೇ ದುರಾಸೆಗೆ ಸಿಲುಕಿಕೊಳ್ಳಬೇಡಿ ಮತ್ತು ಯಾವುದೇ ಲಿಂಕ್ ಅನ್ನು ಕ್ಲಿಕ್ ಮಾಡಬೇಡಿ.

Online Scam Alert
Image Credit: The420

ಸಂದೇಶ ಹಾಗು ಲಿಂಕ್ ಗಳು ನಮ್ಮನ್ನು ಮೋಸ ಮಾಡುತ್ತದೆ

ಮೋಸಕ್ಕೆ ಬಳಿ ಆಗುವವರು ಇದ್ದ ಮೇಲೆ ಮೋಸ ಮಾಡುವವರು ಸಹ ಇದ್ದೆ ಇರುತ್ತಾರೆ. ಹಬ್ಬ ಹಾಗು ವಿಶೇಷ ದಿನಗಳಲ್ಲಿ ನಮ್ಮ ಮೊಬೈಲ್ ಗಳಿಗೆ ಆಫರ್, ಗಿಫ್ಟ್ ಅಂತೆಲ್ಲ ಲಿಂಕ್ ರೂಪದಲ್ಲಿ ಸಂದೇಶ ಬರುತ್ತದೆ. ನೀವು ಕೂಡ ಅದನ್ನು ಗಮನಿಸಿರುತ್ತೀರಿ. ಈ ಲಿಂಕ್ ಅನ್ನು ಓಪನ್ ಮಾಡಿ ನೀವು ಲಕ್ಷ ಹಣ ಗೆಲ್ಲುತ್ತೀರಿ ಅಂತೆಲ್ಲ ಬರುವುದುಂಟು. ಈ ರೀತಿಯಾದ ಲಿಂಕ್ ಅನ್ನು ನಾವು ಓಪನ್ ಮಾಡಿದರೆ ದೊಡ್ಡ ಮೋಸಕ್ಕೆ ಒಳಗಾಗಿ ಎಲ್ಲಾ ಹಣವನ್ನು ಕಳೆದುಕೊಳ್ಳಬೇಕಾಗುತ್ತದೆ.

Leave A Reply

Your email address will not be published.