Oppo: ಭಾರತಕ್ಕೆ ಬಂತು ಮಡಚಿ ಪಾಕೆಟ್ ನಲ್ಲಿ ಇಡಬಹುದಾದ OPPO ಮೊಬೈಲ್, ಕಡಿಮೆ ಬೆಲೆ ಆಕರ್ಷಕ ಫೀಚರ್.

ಅಗ್ಗದ ಬೆಲೆಯಲ್ಲಿ ಮಡಚಿ ಪಾಕೆಟ್ ನಲ್ಲಿ ಇಡಬಹುದಾದ ಮೊಬೈಲ್ ಮಾರುಕಟ್ಟೆಗೆ.

Oppo Find N3 Flip Smart Phone: ಮೊಬೈಲ್ ಅನ್ನುವುದು ಇಂದಿನ ಕಾಲದ ಪೀಳಿಗೆಯವರಿಗೆ ಆಕರ್ಷಕ ವಸ್ತು ಆಗಿದೆ. ಹಾಗು ಮೊಬೈಲ್ ಫ್ಯಾಶನ್ ಕೂಡ ಆಗಿದೆ. ಆಗಿನ ಕಾಲದಲ್ಲಿ ಮೊಬೈಲ್ ಕೇವಲ ಕರೆ ಮಾಡಿ ಮಾತಾಡಲು ಮಾತ್ರ ಉಪಯೋಗವಾಗುತ್ತಿತ್ತು. ಆದರೆ ಈಗ ಕುಳಿತ್ತಲ್ಲೆ ಎಲ್ಲಾ ಕೆಲಸವನ್ನು ಮೊಬೈಲ್ ಮಾಡುತ್ತದೆ. ಅದಕ್ಕೆ ತಕ್ಕಂತೆ ಮೊಬೈಲ್ ಕಂಪನಿ ಗಳು ಕೂಡ ವಿಶೇಷತೆ ಹೊಂದಿರುವ ಮೊಬೈಲ್ ಅನ್ನು ಮಾರುಕಟ್ಟೆಗೆ ಪರಿಚಯಿಸುತ್ತಿರುತ್ತದೆ.

ಹಾಗೆ ದೇಶಿಯ ಮಾರುಕಟ್ಟೆಯ ಮೊಬೈಲ್ ಕಂಪೆನಿಗಳಲ್ಲಿ ಒಪ್ಪೋ (Oppo) ಕೂಡ ಬಹಳ ಜನಪ್ರಿಯತೆಯನ್ನು ಹೊಂದಿದೆ. ಈ ಕಂಪನಿಯು ಮಡಚಿ ಪ್ಯಾಕೆಟ್ ನಲ್ಲಿ ಹಾಕುವ ಮೊಬೈಲ್ ಅನ್ನು ಗ್ರಾಹಕರಿಗೆ ಪರಿಚಯಿಸಿದ್ದು, ಆ ಮೊಬೈಲ್ ಹೆಸರು ಒಪ್ಪೋ ಫೈಂಡ್‌ N3 ಫ್ಲಿಪ್( Oppo Find N3 Flip ) ಆಗಿರುತ್ತದೆ. ಕೊನೆಗೂ ಭಾರತಕ್ಕೆ ಈ ಮೊಬೈಲ್ ಎಂಟ್ರಿ ನೀಡಿದೆ. ಅಷ್ಟೇ ಅಲ್ಲ ಮೊಬೈಲ್‌ ಮಾರುಕಟ್ಟೆಯಲ್ಲಿ ತನ್ನ ಹವಾವನ್ನು ಪ್ರಾರಂಭಿಸಿದೆ. 

Oppo Find N3 Flip Smart Phone
Image Credit: Livemint

 Oppo Find N3 Flip  ಫೋನ್ ನ ರಚನೆ ಹಾಗು ಪ್ರೊಸೆಸರ್‌ ವಿನ್ಯಾಸ

ಒಪ್ಪೋ ಫೈಂಡ್‌ N3 ಫ್ಲಿಪ್ ಸ್ಮಾರ್ಟ್‌ಫೋನ್‌ 6.8-ಇಂಚಿನ ಫುಲ್‌ HD LTPO AMOLED ಇನರ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1,080×2,520 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದೆ. ಇನ್ನು ಸ್ಮಾರ್ಟ್‌ಫೋನ್‌ 3.26 ಇಂಚಿನ ಕವರ್‌ ಡಿಸ್‌ ಪ್ಲೇಯನ್ನು ಸಹ ಹೊಂದಿದೆ. ಕವರ್‌ ಡಿಸ್‌ಪ್ಲೇಯು ಅಮೋಲೆಡ್‌ ಪ್ಯಾನಲ್‌ ಅನ್ನು ಹೊಂದಿದ್ದು, 900 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಹೊಂದಿದೆ.

ಒಪ್ಪೋ ಫೈಂಡ್‌ N3 ಫ್ಲಿಪ್ ಸ್ಮಾರ್ಟ್‌ಫೋನ್‌ 4nm ಮೀಡಿಯಾ ಟೆಕ್ ಡೈಮೆನ್ಸಿಟಿ 9200SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಆಂಡ್ರಾಯ್ಡ್ 13 ನಲ್ಲಿ ಒಪ್ಪೋದ ColorOS 13.2 ಸ್ಕಿನ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಹಾಗೆಯೇ ARM ಇಮ್ಮಾರ್ಟಲಿಸ್-G715 MC11 GPU ಅನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ 12GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ.

Oppo Find N3 Flip Price
Image Credit: Sammobile

ಒಪ್ಪೋ ಫೈಂಡ್‌ N3 ಫ್ಲಿಪ್ ಬ್ಯಾಟರಿ ಪವರ್

ಒಪ್ಪೋ ಫೈಂಡ್‌ N3 ಫ್ಲಿಪ್ ಬ್ಯಾಟರಿ ಬಹಳ ವಿಶೇಷವಾಗಿದೆ. ಈ ಸ್ಮಾರ್ಟ್‌ಫೋನ್‌ 4,300mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 44W SuperVOOC ಚಾರ್ಜಿಂಗ್‌ಗೆ ಬೆಂಬಲವನ್ನು ನೀಡಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 7, ಬ್ಲೂಟೂತ್ 5.3, NFC, GPS ಮತ್ತು USB ಟೈಪ್-C ಪೋರ್ಟ್ ಸೇರಿವೆ. ಇದಲ್ಲದೆ ಪ್ರಾಕ್ಸಿಮಿಟಿ ಸೆನ್ಸಾರ್‌, ಅಕ್ಸಿಲೆರೋಮೀಟರ್‌, ಗೈರೊಸ್ಕೋಪ್, ಗುರುತ್ವಾಕರ್ಷಣೆ ಸಂವೇದಕ, ಸುತ್ತುವರಿದ ಬೆಳಕಿನ ಸಂವೇದಕವನ್ನು ಒಳಗೊಂಡಿದೆ. ಇದಲ್ಲದೆ ಈ ಫೋನ್‌ ಡಾಲ್ಬಿ ಅಟ್ಮಾಸ್‌ನೊಂದಿಗೆ ಡ್ಯುಯಲ್ ಸ್ಪೀಕರ್ ಸೆಟಪ್ ಅನ್ನು ಹೊಂದಿದೆ.

ಭಾರತದಲ್ಲಿ ಒಪ್ಪೋ ಫೈಂಡ್‌ N3 ಫ್ಲಿಪ್ ಬೆಲೆ ಮತ್ತು ರಿಯಾಯಿತಿ

ಈ ಸ್ಮಾರ್ಟ್‌ಫೋನ್‌ ಕ್ರೀಮ್ ಗೋಲ್ಡ್, ಮಿಸ್ಟಿ ಪಿಂಕ್, ಸ್ಲೀಕ್ ಬ್ಲ್ಯಾಕ್ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಭಾರತದಲ್ಲಿ ಒಪ್ಪೋ ಫೈಂಡ್‌ N3 ಫ್ಲಿಪ್ ಸ್ಮಾರ್ಟ್‌ಫೋನ್‌ 12GB + 256GB RAM ಸ್ಟೋರೇಜ್ ಕಾನ್ಫಿಗರೇಶನ್‌ ಆಯ್ಕೆಗೆ 94,999ರೂ ಬೆಲೆಯನ್ನು ಹೊಂದಿದೆ. ಅಕ್ಟೋಬರ್ 22 ರಿಂದ ಒಪ್ಪೋದ ಅಧಿಕೃತ ಆನ್‌ಲೈನ್ ಸ್ಟೋರ್, ಫ್ಲಿಪ್‌ ಕಾರ್ಟ್ ಮತ್ತು ದೇಶದಾದ್ಯಂತ ಚಿಲ್ಲರೆ ಅಂಗಡಿಗಳ ಮೂಲಕ ಸೇಲ್‌ ಆಗಲಿದೆ. ಇನ್ನು ಲಾಂಚ್‌ ಆಫರ್‌ ಅಂಗವಾಗಿ ಎಕ್ಸ್‌ಚೇಂಜ್‌ ಆಫರ್‌ನಲ್ಲಿ 8,000 ರೂ. ರಿಯಾಯಿತಿ ಪಡೆದುಕೊಳ್ಳುವ ಅವಕಾಶವಿದೆ.

Oppo Find N3 Flip Smart Phone Feature
Image Credit: Giznext

ಒಪ್ಪೋ ಫೈಂಡ್‌ N3 ಫ್ಲಿಪ್ ಕ್ಯಾಮೆರಾ ಸೆಟ್‌ಅಪ್‌ ಮಾಹಿತಿ

ಒಪ್ಪೋ ಫೈಂಡ್‌ N3 ಫ್ಲಿಪ್ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ನೊಂದಿಗೆ ಬರುವ ಮೊದಲ ಕ್ಲಾಮ್‌ಶೆಲ್-ಶೈಲಿಯ ಫೋಲ್ಡಬಲ್ ಫೋನ್ ಆಗಿದೆ. ಇದರ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 48 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾವನ್ನು ಹೊಂದಿದೆ. ಮೂರನೇ ಕ್ಯಾಮೆರಾ 32 ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾವನ್ನು ಹೊಂದಿದೆ. ಇದಲ್ಲದೆ 32 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

Leave A Reply

Your email address will not be published.