Vishwakarma Yojana: ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ.? ಯೋಜನೆಯ ಲಾಭಗಳು ಏನೇನು…?

ವಿಶ್ವಕರ್ಮ ಜಯಂತಿಯಂದು ವಿಶ್ವಕರ್ಮ ಯೋಜನೆಗೆ ಚಾಲನೆ.

PM Vishwakarma Yojana Launch: ವಿಶ್ವಕರ್ಮ ಜಯಂತಿಯಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ತಮ್ಮ 73 ನೇ ವರ್ಷದ ಜನ್ಮ ದಿನವನ್ನು ಆಚರಿಸಿಕೊಂಡರು. ಹಾಗೆ ಸಾಂಪ್ರದಾಯಿಕ ಕುಶಲ ಕರ್ಮಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ ‘ವಿಶ್ವಕರ್ಮ’ ಯೋಜನೆಗೆ ಚಾಲನೆ ನೀಡಿದ್ದಾರೆ.

2023-24ರ ಹಣಕಾಸು ವರ್ಷದ ಬಜೆಟ್ ಅಧಿವೇಶನದಲ್ಲಿ ಪಿಎಂ ವಿಶ್ವಕರ್ಮ ಯೋಜನೆ 2023 ಅನ್ನು ಕೇಂದ್ರ ಸರ್ಕಾರ ಪರಿಚಯಿಸಿತು. ಅಲ್ಲದೆ, ಪ್ರಧಾನಿ ಮೋದಿ ಸ್ವಾತಂತ್ರ್ಯ ದಿನದಂದು ಈ ಘೋಷಣೆ ಮಾಡಿದ್ದಾರೆ.

Vishwakarma yojana benefit
Image Credit: Aajtak

ವಿಶ್ವಕರ್ಮ ಯೋಜನೆಯಾ ಕುರಿತು ಮಾಹಿತಿ

ಪಿಎಂ ಮೋದಿಯವರು ವಿಶ್ವಕರ್ಮ ಯೋಜನೆ ಅಡಿಯಲ್ಲಿ ಕುಶಲ ಕರ್ಮಿಗಳಿಗೆ ಸಹಾಯ ಮಾಡುವ ದ್ರಷ್ಟಿಯಿಂದ ಜನರಿಗೆ ಮೊದಲ ಕಂತಾಗಿ 1 ಲಕ್ಷ ರೂ., ಎರಡನೇ ಕಂತಾಗಿ 2 ಲಕ್ಷ ರೂ.ಗಳನ್ನು ಶೇಕಡಾ 5 ರಷ್ಟು ಬಡ್ಡಿದರದೊಂದಿಗೆ ನೀಡಲಾಗುವುದು. ಇದರೊಂದಿಗೆ, ಕುಶಲಕರ್ಮಿಗಳಿಗೆ ಮೂಲಭೂತ ಮತ್ತು ಸುಧಾರಿತ ತರಬೇತಿಯನ್ನು ಸಹ ನೀಡಲಾಗುವುದು.

ಯೋಜನೆಯ ಫಲಾನುಭವಿಗಳಿಗೆ 15,000 ರೂ.ಗಳ ಟೂಲ್ ಕಿಟ್ ಗಳನ್ನು ಸಹ ನೀಡಲಾಗುವುದು. ಇದಲ್ಲದೆ, ಫಲಾನುಭವಿಗಳಿಗೆ ಕೌಶಲ್ಯ ತರಬೇತಿ ನೀಡಲಾಗುವುದು. ಈ ಸಮಯದಲ್ಲಿ ಪ್ರತಿದಿನ 500 ರೂಪಾಯಿಗಳನ್ನು ನೀಡಲಾಗುವುದು.

Vishwakarma yojana launch
Image Credit: Newindianexpress

ನೋಂದಣಿ ಮಾಡಿಕೊಳ್ಳುವ ವಿಧಾನ

ಈ ಯೋಜನೆಗಾಗಿ, ಬಯೋಮೆಟ್ರಿಕ್ ಆಧಾರಿತ ಪಿಎಂ ವಿಶ್ವಕರ್ಮ ಪೋರ್ಟಲ್ ಬಳಸಿ ಸಾಮಾನ್ಯ ಸೇವಾ ಕೇಂದ್ರದಿಂದ (ಸಿಎಸ್ಸಿ) ವಿಶ್ವಕರ್ಮರ ಉಚಿತ ನೋಂದಣಿ ಮಾಡಲಾಗುವುದು. ಈ ಯೋಜನೆಯ ಫಲಾನುಭವಿಗಳು ಸರ್ಕಾರದಿಂದ ಪ್ರಮಾಣಪತ್ರ ಮತ್ತು ಐಡಿಯನ್ನು ಸಹ ಪಡೆಯುತ್ತಾರೆ.

ವಿಶ್ವಕರ್ಮ ಯೋಜನೆಗೆ ಅರ್ಜಿ ಹಾಕಲು ಬೇಕಾಗುವ ದಾಖಲೆಗಳು

ಈ ಯೋಜನೆಗೆ ಅರ್ಜಿ ಹಾಕಲು ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ವ್ಯವಹಾರ ಪ್ರಮಾಣಪತ್ರ, ಮೊಬೈಲ್ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ ವಿವರಗಳು, ಆದಾಯ ಪ್ರಮಾಣಪತ್ರ, ಜಾತಿ ಪ್ರಮಾಣಪತ್ರ (ಅನ್ವಯವಾಗಿದ್ದರೆ) ಮುಂತಾದ ಎಲ್ಲಾ ದಾಖಲೆಗಳು ಬೇಕಾಗುತ್ತವೆ.

Leave A Reply

Your email address will not be published.